ಡಿಸೆಂಬರ್ ಗೆ ಆರಂಭ ಎನ್ನಲಾಗುತಿದ್ದ ಬಿಗ್ ಬಾಸ್ ಕುರಿತು ಕೊನೆಗೂ ಮಾತನಾಡಿದ ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಯಶಸ್ವಿ ಎಂಟು ಸೀಸನ್ ಗಳನ್ನ ಮುಗಿಸಿದ್ದು ಒಂಬತ್ತನೇ ಸೀಸನ್ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಹಿಂದೆ ನಡೆದಿದ್ದ ಕೋಟಿಗೊಬ್ಬ – 3 ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಶೀಘ್ರದಲ್ಲಿಯೇ ಬಿಗ್ ಬಾಸ್ ಸೀಸನ್ – 9 ಶೀಘ್ರದಲ್ಲಿಯೇ ಶುರುವಾಗಲಿದೆ ಎಂದಿದ್ದರು. ಆದರೇ ಸದ್ಯ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ರವರು ಹೇಳುತ್ತಿರುವುದು ಬೇರೆಯಾಗಿದೆ.

ಬಿಗ್ ಬಾಸ್ ಸೀಸನ್ – 8 ಕೋರೋನಾ ಮಧ್ಯೆ ಶುರುವಾಗಿತ್ತು. ಈ ಮಧ್ಯೆ ಹೊರಗಡೆ ಕೋರೋನಾ ಸೋಂಕು ಜಾಸ್ತಿಯಾದ ಕಾರಣ, 72 ದಿನಗಳಿಗೆ ಎಲ್ಲಾ ಸದಸ್ಯರನ್ನು ಹೊರಗೆ ಕರೆಸಿಕೊಳ್ಳಲಾಗಿತ್ತು. ನಂತರ 48 ದಿನಗಳ ಗ್ಯಾಪ್ ನಂತರ ಮತ್ತೆ ಮನೆಯೊಳಗೆ ಉಳಿದ ಸದಸ್ಯರನ್ನು ಕಳಿಸಿದರು. ನಂತರ 100 ದಿನಗಳ ಬಿಗ್ ಬಾಸ್ ಆಟ 120 ದಿನದವರೆಗೆ ಹೋಗಿತ್ತು. ನಂತರ ಕಿರುತೆರೆ ಧಾರವಾಹಿಯ ಸೆಲೆಬ್ರಿಟಿಗಳನ್ನ ಹದಿನೈದು ದಿನಗಳ ಮಟ್ಟಿಗೆ ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. ಆ ಸೀಸನ್ ಕೂಡ ಪ್ರೇಕ್ಷಕರಿಗೆ ಮನರಂಜಿಸಲು ಯಶಸ್ವಿಯಾಗಿತ್ತು.

ಹಾಗಾಗಿ ಈ ಭಾರಿ ಬಿಗ್ ಬಾಸ್ ಸೀಸನ್ – 9 ಕೊಂಚ ವಿಳಂಬವಾಗಬಹುದು ಎಂದು ಹೇಳುತ್ತಿದ್ದಾರೆ. ಕೋರೋನಾ ಸೋಂಕು ಮತ್ತೆ ಹೆಚ್ಚಾದರೇ, ಮೂರನೇ ಲಾಕ್ ಡೌನ್ ಮಾಡಬಹುದು. ಹಾಗಾಗಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಗ್ ಬಾಸ್ ಸೀಸನ್ – 9 ರನ್ನ ಘೋಷಣೆ ಮಾಡುತ್ತೇವೆ. ಹಾಗಾಗಿ ಸದ್ಯ ಬಿಗ್ ಬಾಸ್ – 9 ಸದ್ಯ ಶುರುವಾಗುವುದಿಲ್ಲ ಎಂದು ಪರಮೇಶ್ವರ್ ಗುಂಡ್ಕಲ್ ತಿಳಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav