2021 ರ ಕೊನೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಗೊತ್ತೇ?? ಯಾರ ಸಂಭಾವನೆ ಎಷ್ಟಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಂದು ಚಿತ್ರ ಸೂಪರ್ ಹಿಟ್ ಆದರೆ ಸಾಕು ಚಿತ್ರದಲ್ಲಿ ನಟಿಸಿರುವ ನಟ ನಟಿಯರ ಸಂಭಾವನೆ ಹಾಗೂ ಬೇಡಿಕೆ ಹೆಚ್ಚಾಗುತ್ತದೆ. ಇಂದು ನಾವು ಮಾತನಾಡಲು ಹೊರಟಿರುವುದು ನಟಿಯರ ಕುರಿತಂತೆ. ನಮ್ಮ ಕನ್ನಡ ಚಿತ್ರರಂಗದ ನಟಿಯರು ಕೂಡ ಯಾವ ನಟಿಯರಿಗೂ ಕೂಡ ಕಮ್ಮಿ ಇಲ್ಲದಂತೆ ಸಂಭಾವನೆಯನ್ನು ಪಡೆಯುತ್ತಾರೆ. ಇಂದು ನಾವು ನಮ್ಮ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಕುರಿತಂತೆ ಮಾತನಾಡಲು ಹೊರಟಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ ನಾವು ನಿಮಗೆ ವಿವರವಾಗಿ ವಿಚಾರದ ಕುರಿತಂತೆ ತಿಳಿಸುತ್ತೇವೆ.

ಮಾನ್ವಿತ ಹರೀಶ್ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾನ್ವಿತ ಹರೀಶ್ ರವರು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆಯು ಪಡೆದುಕೊಂಡಿದ್ದು ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಟಗರು ಚಿತ್ರದ ಮೂಲಕ ಟಗರು ಪುಟ್ಟಿ ಯಾಗಿ. ಇನ್ನು ಇದಾದ ನಂತರ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಮಾನ್ವಿತ ಹರೀಶ್ ರವರು ಯುವ ಉದಯೋನ್ಮುಖ ನಟಿಯಾಗಿ ಹೆಸರುವಾಸಿಯಾಗಿದ್ದಾರೆ. ಇನ್ನು ಇವರು ಪ್ರತಿ ಸಿನಿಮಾಗೆ 20 ಲಕ್ಷ ಸಂಭಾವನೆ ಪಡೆಯುತ್ತಾರೆ.

ಶ್ರೀಲೀಲಾ ನಟಿ ಶ್ರೀಲೀಲಾ ಕಿಸ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಾರೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಭರಾಟೆ ಚಿತ್ರದ ಮೂಲಕವೂ ಕೂಡ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇವರು ಪ್ರತಿ ಸಿನಿಮಾಗೆ 15 ಲಕ್ಷ ಸಂಭಾವನೆ ಪಡೆಯುತ್ತಾರೆ.

ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗದ ಎಲ್ಲದಕ್ಕಿಂತ ಹೆಚ್ಚಾಗಿ ಕರ್ನಾಟಕದ ಕೃಷ್ ಎಂದೇ ಖ್ಯಾತರಾಗಿರುವ ನಟಿ ಆಶಿಕಾ ರಂಗನಾಥ್ ರವರು ಯಾವುದೇ ದೊಡ್ಡ ಸ್ಟಾರ್ ನಟರ ಜೊತೆಗೆ ನಟನೆ ಮಾಡಿದ್ದರು ಕೂಡ ಟಾಪ್ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುವುದರಲ್ಲಿ ಭರವಸೆಯನ್ನು ಮೂಡಿಸುತ್ತಾರೆ. ಇನ್ನು ನಟಿ ಆಶಿಕಾ ರಂಗನಾಥ್ ರವರು ಪ್ರತಿ ಸಿನಿಮಾಗೆ 15ರಿಂದ 20 ಲಕ್ಷ ಸಂಭಾವನೆಯನ್ನು ಪಡೆಯುತ್ತಾರೆ.

ಶಾನ್ವಿ ಶ್ರೀವಾತ್ಸವ್ ಶಾನ್ವಿ ಶ್ರೀವಾತ್ಸವ್ ರವರು ಮೂಲತಹ ಪರಭಾಷಿಗರ ಆದರೂ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸುವ ಮೂಲಕ ಕನ್ನಡತಿ ಯಂತೆ ಎಲ್ಲರ ಮನಗೆದ್ದಿದ್ದಾರೆ. ಇನ್ನು ಇವರ ಪ್ರಮುಖ ಚಿತ್ರಗಳೆಂದರೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಮಾಸ್ಟರ್ ಪೀಸ್ ಹಾಗೂ ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ. ಇನ್ನು ಇವರು ಪ್ರತಿ ಸಿನಿಮಾಗೆ 20ರಿಂದ 25 ಲಕ್ಷ ಸಂಭಾವನೆಯನ್ನು ಪಡೆಯುತ್ತಾರೆ.

ಹರಿಪ್ರಿಯ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಹರಿಪ್ರಿಯ ಕೂಡ ಒಬ್ಬರು‌. ಇನ್ನು ನಟಿ ಹರಿಪ್ರಿಯಾ ನಟನೆಯ ಪ್ರಮುಖ ಚಿತ್ರಗಳೆಂದರೆ ರನ್ನ ಉಗ್ರಂ ನೀರ್ದೋಸೆ ಹಾಗೂ ಬೆಲ್ಬಾಟಂ. ಇನ್ನು ಇವರು ಪ್ರತಿ ಸಿನಿಮಾಗೆ 30ರಿಂದ 35 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.

ಶ್ರದ್ಧಾ ಶ್ರೀನಾಥ್ ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಯುಟರ್ನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಅಂತಹ ಶ್ರದ್ಧಾ ಶ್ರೀನಾಥ್ ಅವರು ಆಪರೇಷನ್ ಅಲಮೇಲಮ್ಮ ಇತ್ಯಾದಿ ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇವರು ಕನ್ನಡ ತಮಿಳು ತೆಲುಗು ಹೀಗೆ ಹಲವಾರು ಭಾಷೆಗಳಲ್ಲಿ ನಡೆಸುವ ಬಹುಭಾಷೆ ತಾರೆಯಾಗಿದ್ದರೆ. ಇನ್ನು ಇವರು ಪ್ರತಿ ಸಿನಿಮಾಗೆ 20ರಿಂದ 25 ಲಕ್ಷ ಸಂಭಾವನೆ ಪಡೆಯುತ್ತಾರೆ.

ರಚಿತಾ ರಾಮ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಂಡ ರಚಿತರಾಮ್ ರವರು ಈಗ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿದ್ದಾರೆ. ಇನ್ನು ಇವರು ಪ್ರತಿ ಸಿನಿಮಾಗೆ 35ರಿಂದ 40 ಲಕ್ಷ ರೂಪಾಯಿ ಪಡೆಯುತ್ತಾರೆ.

ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದ ರಶ್ಮಿಕ ಮಂದಣ್ಣ ಈಗಾಗಲೇ ಭಾರತ ದೇಶದಾದ್ಯಂತ ಎಲ್ಲಾ ಚಿತ್ರರಂಗಗಳಲ್ಲಿ ಕೂಡ ಬಿಜಿಯಾಗಿರುವ ನಟಿಯಾಗಿದ್ದಾರೆ. ಇನ್ನು ಇವರು ಒಂದು ಸಿನಿಮಾಗೆ 65 ಲಕ್ಷ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ಇದೆ.

Post Author: Ravi Yadav