ರಾಜ್ ಕುಟುಂಬಕ್ಕೆ ಆ ಸಮಸ್ಯೆ ಇದೆ ಎಂದು ಬೇಸರಗೊಂಡು ನೋವನ್ನು ಹೊರಹಾಕಿದ ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಬರೋಬ್ಬರಿ ಒಂದು ತಿಂಗಳಾಗುತ್ತ ಬಂದರೂ ಕೂಡ ಅವರ ನೆನಪಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅಷ್ಟೊಂದು ಆರೋಗ್ಯವಂತರಾಗಿದ್ದ ಪುನೀತ್ ರಾಜಕುಮಾರ್ ರವರು ವರ್ಕೌಟ್ ಕೂಡ ಸಾಕಷ್ಟು ಮಾಡುತ್ತಿದ್ದರು. ಭೋಜನ ಪ್ರಿಯರಾಗಿದ್ದರು ಕೂಡ ದೈಹಿಕ ಕಸರತ್ತಿನಿಂದ ಅದನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಕೂಡ ಮಾಡಿದ್ದರು. ಆದರೆ ಹೃದಯಾಘಾತ ಎನ್ನುವುದು ಅವರನ್ನು ನಮ್ಮೆಲ್ಲರಿಂದ ದೂರ ಮಾಡಿದೆ.

ಇನ್ನು ಅಣ್ಣಾವ್ರ ಕುಟುಂಬದ ಈ ಸಮಸ್ಯೆಯ ಕುರಿತಂತೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಆಗಿರುವ ಚಿರಂಜೀವಿ ಅವರು ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ” ಕೆಲವು ಜನರು ತಮ್ಮ ಆರೋಗ್ಯದ ಕುರಿತಂತೆ ಸಾಕಷ್ಟು ನಿರ್ಲಕ್ಷ್ಯವನ್ನು ಮಾಡುತ್ತಾರೆ. ಇನ್ನು ಕೆಲವರು ಆರೋಗ್ಯದ ಕುರಿತಂತೆ ಎಷ್ಟೇ ಜಾಗ್ರತೆಯನ್ನು ವಹಿಸಿಕೊಂಡಿದ್ದರು ಕೂಡ ಆಗಬಾರದ್ದು ಆಗಿಹೋಗುತ್ತದೆ. ಉದಾಹರಣೆಗೆ ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಘಟನೆಯನ್ನು ನೋಡಿ.

ಪುನೀತ್ ರಾಜಕುಮಾರ್ ಅವರು ನನಗೆ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದರು. ಅವರ ಆಹಾರಕ್ರಮ ಹಾಗೂ ದೈಹಿಕ ಕಸರತ್ತಿನ ಕುರಿತಂತೆ ನಾನು ಸಾಕಷ್ಟು ಹತ್ತಿರದಿಂದ ಬಲ್ಲೆ. ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಕೂಡ ಇರಲಿಲ್ಲ. ಆದರೂ ಕೂಡ ಅವರಿಗೆ ದೈಹಿಕ ವ್ಯಾಯಾಮ ನಡೆಸುವಾಗ ಅನಿರೀಕ್ಷಿತವಾಗಿ ಹೃದಯಾಘಾತವಾಗುತ್ತದೆ. ಆಸ್ಪತ್ರೆಗೆ ಹೋಗಲು ಕೂಡ ಇದು ಅವರಿಗೆ ಅವಕಾಶ ಮಾಡಿಕೊಡದೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಹಿಂದೆ ರಾಜಕುಮಾರ್ ಅವರು ಕೂಡ ಹೃದಯಾಘಾತದಿಂದ ನಮ್ಮನ್ನೆಲ್ಲ ಅಗಲಿದ್ದಾರೆ. ಶಿವರಾಜ್ ಕುಮಾರ್ ಅವರಿಗೂ ಕೂಡ ಲಘು ಹೃದಯಾಘಾತ ಸಂಭವಿಸಿತ್ತು. ರಾಜಕುಮಾರ್ ರವರ ಎರಡನೇ ಮಗನಾಗಿರುವ ರಾಘವೇಂದ್ರ ರಾಜಕುಮಾರ್ ಅವರಿಗೂ ಕೂಡ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ತಿನ್ನುವವರಿಗೆ ಮೆದುಳಿಗೆ ಸ್ಟ್ರೋಕ್ ಕೂಡ ಹೊಡೆ’ದಿತ್ತು.

46 ವರ್ಷದ ಅವರಾಗಿದ್ದರು ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಸಾಕಷ್ಟು ಉತ್ತಮ ಜೀವನಕ್ರಮವನ್ನು ಅಳವಡಿಸಿಕೊಂಡಿದ್ದರು. ಉತ್ತಮ ಆಹಾರ ಹಾಗೂ ದೈಹಿಕ ಆರೋಗ್ಯವಂತ ಚಟುವಟಿಕೆಗಳನ್ನು ಕೂಡ ಅವರು ಮಾಡುತ್ತಿದ್ದರು. ಆದರೂ ಕೂಡ ಅವರನ್ನು ನಾವು ಅಕಾಲಿಕವಾಗಿ ಕಳೆದುಕೊಂಡಿದ್ದೇವೆ. ಹೀಗಾಗಿ ಎಲ್ಲರೂ ಕೂಡ ಆರೋಗ್ಯದ ಕುರಿತಂತೆ ಸಾಕಷ್ಟು ಗಂಭೀರವಾಗಿ ಎಚ್ಚರಿಕೆಯನ್ನು ವಹಿಸಿ.

ಎಲ್ಲರೂ ಕೂಡ ಆಗಾಗ ವೈದ್ಯರಿಗೆ ತಮ್ಮ ಆರೋಗ್ಯದ ಕುರಿತಂತೆ ತಪಾಸಣೆ ಮಾಡಿಕೊಳ್ಳಿ. ಆರೋಗ್ಯದ ಕುರಿತಂತೆ ಯಾರೂ ಕೂಡ ನಿರ್ಲಕ್ಷ ಮಾಡುವುದು ಬೇಡ ಎಂಬುದಾಗಿ ಈ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ಹೇಳಿದ್ದಾರೆ. ಚಿರಂಜೀವಿ ಅವರು ಹೇಳಿರುವ ಮಾತು ಅಕ್ಷರಶಹ ನಿಜ ಸ್ನೇಹಿತರೆ. ಎಲ್ಲರೂ ಕೂಡ ತಮ್ಮ ಆರೋಗ್ಯದ ಕುರಿತಂತೆ ಸದಾಕಾಲ ಕಾಳಜಿವಹಿಸಿ ಚಿಕ್ಕ ಸಮಸ್ಯೆ ಬಂದರೂ ಕೂಡ ತಕ್ಷಣವೇ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಕೊಳ್ಳಿ.

ಇನ್ನು ನಿಮಗೆಲ್ಲ ತಿಳಿದಿರುವಂತೆ ಮೆಗಾಸ್ಟಾರ್ ಚಿರಂಜೀವಿ ಅವರು ಕೂಡ ರಾಜಕುಮಾರ್ ರವರ ಕುಟುಂಬದೊಂದಿಗೆ ಸಾಕಷ್ಟು ನಿಕಟ ಸಂಬಂಧವನ್ನು ಹೊಂದಿದ್ದರು. ಚಿರಂಜೀವಿ ಅವರು ಕೂಡ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿ ಸಾಕಷ್ಟು ಭಾವುಕರಾಗಿದ್ದರು ನೀವು ವಿಡಿಯೋಗಳಲ್ಲಿ ನೋಡಿರುತ್ತೀರಿ. ಇನ್ನು ಚಿರಂಜೀವಿ ಅವರ ಮಗನಾಗಿರುವ ರಾಮಚರಣ ರವರು ಕೂಡ ಪುನೀತ್ ರಾಜಕುಮಾರ್ ರವರ ಸಮಾಧಿಯ ಬಳಿಗೆ ಬಂದು ದರ್ಶನವನ್ನು ಪಡೆದಿದ್ದರು. ಹೀಗಾಗಿ ಅವರು ಪುನೀತ್ ರಾಜಕುಮಾರ್ ಅವರ ಕುಟುಂಬದ ದುಃಖದಲ್ಲಿ ಕೂಡ ಭಾಗಿಯಾಗಿದ್ದರು.

Post Author: Ravi Yadav