ತಿರುಪತಿಯಲ್ಲಿ ಹಿಂದೇನು ಕಾಣದ ಜಲಪ್ರಳಯ ಆಗಲು ಏನು ಕಾರಣ ಗೊತ್ತೇ?? ದೇವಸ್ಥಾನದಲ್ಲಿ ನಡೆದ ತಪ್ಪೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ವರ್ಷ ಅವಧಿಗಿಂತಲೂ ಮೀರಿ ಮಳೆ ಧಾರಾಕಾರವಾಗಿ ದೇಶದಾದ್ಯಂತ ಹರಿಯುತ್ತಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಇದು ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿಯಲ್ಲಿ ಕೂಡ ಕಾಣಿಸಿಕೊಳ್ಳುತ್ತಿದೆ. ಹೌದು ಗೆಳೆಯರೇ ಬಹಳಷ್ಟು ದಿನಗಳಿಂದ ಎಡೆಬಿಡದೆ ಧಾರಾಕಾರವಾಗಿ ಮಳೆ ತಿರುಪತಿಯಲ್ಲಿ ಹರಿಯುತ್ತಿದೆ. ತಿರುಪತಿ ತಿಮ್ಮಪ್ಪನ ತಿರುಮಲ ಬೆಟ್ಟದಿಂದ ಹರಿದುಬರುವ ಕಪಿಲತೀರ್ಥ ಕೂಡ ಎಲ್ಲೆಗೂ ಮೀರಿ ಪ್ರವಾಹದಂತೆ ಹರಿದು ಜನಜೀವನವನ್ನು ಅಸ್ತವ್ಯಸ್ತವಾಗಿ ಮಾಡಿಬಿಟ್ಟಿದೆ.

ತಿರುಪತಿ ತಿಮ್ಮಪ್ಪನ ದೇವಸ್ಥಾನವು ಕೂಡ ಮಳೆಯಿಂದ ಕೊಚ್ಚಿ ಹೋಗುವಷ್ಟು ನೀರು ಹರಿದು ಹೋಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿರುವ ವಿಡಿಯೋಗಳಲ್ಲಿ ಭಕ್ತಾಭಿಮಾನಿಗಳು ಕೂಡ ಈ ನೀರಿನೊಂದಿಗೆ ಹರಿದು ಹೋಗುತ್ತಿರುವುದು ಕಂಡು ಬಂದಿತ್ತು. ಇದೇ ಸ್ಥಿತಿ ಮುಂದುವರೆದರೆ ಖಂಡಿತವಾಗಿಯೂ ಯಾರೂ ಊಹಿಸದ ಅಂತಹ ಘಟನೆಗಳು ಈ ಪ್ರದೇಶದಲ್ಲಿ ನಡೆಯುವುದು ಗ್ಯಾರಂಟಿ. ಬಂಗಾಳದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಿರುಪತಿ ತಿಮ್ಮಪ್ಪನಿಗೂ ಕೂಡ ಈಗ ಸಂಕಷ್ಟ ಉಂಟಾಗಿದೆ. ತಿರುಪತಿಯ ಬಹುತೇಕ ಎಲ್ಲಾ ತಗ್ಗು ಪ್ರದೇಶಗಳಲ್ಲಿ ಕೂಡ ನೀರು ಸಂಗ್ರಹವಾಗಿದ್ದು ಪ್ರವಾಹದಂತೆ ಕಾಣುತ್ತಿದೆ ಇಲ್ಲಿ ಜನಜೀವನ ಕೂಡ ಸಾಕಷ್ಟು ಅಸ್ತವ್ಯಸ್ತವಾಗಿದೆ‌.

ಆದರೆ ಇದಕ್ಕೆಲ್ಲ ಕಾರಣ ಆ ತಿರುಪತಿ ತಿಮ್ಮಪ್ಪನಿಗೆ ಪೂಜೆ ಮಾಡುವ ಪೂಜಾರಿಗಳು ಎಂದು ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ಇತ್ತೀಚಿಗಷ್ಟೇ ಅಪರೂಪದಲ್ಲಿ ಅತ್ಯಂತ ಅಪೂರ್ವವಾದ ಚಂದ್ರಗ್ರಹಣ ಸಂಭವಿಸಿತ್ತು. ಈ ಸಂದರ್ಭದಲ್ಲಿ ಪೂಜೆ ಮಾಡಬಾರದಾಗಿತ್ತು ಆದರೂ ಕೂಡ ತಿರುಪತಿ ತಿಮ್ಮಪ್ಪನಿಗೆ ಇದೇ ಸಮಯದಲ್ಲಿ ಪೂಜೆ ಮಾಡಿ ಆತನ ಅವಕೃಪೆಗೆ ಒಳಗಾಗಿದ್ದಾರೆ ಹೀಗಾಗಿ ಇಲ್ಲಿ ಇಷ್ಟೊಂದು ಜಲಪ್ರಳಯ ನಡೆಯುತ್ತಿದೆ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ