ಇದ್ದಕ್ಕಿದ್ದ ಹಾಗೆ ತೆಗೆದುಕೊಂಡ ನಿವೃತ್ತಿ ಬಗ್ಗೆ ಮಾತನಾಡಿದ ಎಬಿಡಿ, ಕೊನೆಗೂ ತನ್ನ ನಿವೃತ್ತಿಗೆ ಕಾರಣ ನೀಡಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಬ್ರಹಾಂ ಬೆಂಜಮಿನ್ ಡಿ ವಿಲಿಯರ್ಸ್ ವಿಶ್ವ ಕ್ರಿಕೇಟ್ ಜಗತ್ತಿನ ದೊಡ್ಡ ಹೆಸರು. ದಕ್ಷಿಣ ಆಫ್ರಿಕಾ ತಂಡದ ಆಧಾರಸ್ತಂಭವಾಗಿದ್ದರು. ನಂತರದ ದಿನಗಳಲ್ಲಿ ನಾಯಕರಾಗಿ ತಮ್ಮ ವಿಲಕ್ಷಣ ಶೈಲಿಯ ಬ್ಯಾಟಿಂಗ್ ಶಾಟ್ ಗಳಿಂದ ವಿಶ್ವ ಕ್ರಿಕೇಟ್ ನಲ್ಲಿ ಭಾರಿ ಹೆಸರು ಮಾಡಿದರು. ನಂತರ ಐಪಿಎಲ್ ನಲ್ಲಿ ಮೊದಲು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದ್ದ ಎಬಿ ಡಿ ವಿಲಿಯರ್ಸ್ ನಂತರದ ದಿನಗಳಲ್ಲಿ ಆರ್ಸಿಬಿ ತಂಡದ ಪರ ಆಡಲು ಶುರು ಮಾಡಿದರು. ನಂತರದ ದಿನಗಳಲ್ಲಿ ಆಪತ್ಭಾಂದವ ಎಂಬ ಟ್ಯಾಗ್ ಶುರುವಾಯಿತು.

ಬೆಂಗಳೂರನಲ್ಲಂತೂ ಎಬಿಡಿಗೆ ಅಭಿಮಾನಿಗಳ ಸ್ವರ್ಗವೇ ಸೃಷ್ಠಿಯಾಯಿತು. ಬೆಂಗಳೂರಿನಲ್ಲಿ ಎಬಿ ಡಿ ವಿಲಿಯರ್ಸ್ ಹೆಸರಿನ ರಸ್ತೆ ಮಾಡಬೇಕೆಂಬುದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದರು. ಮೂರು ವರ್ಷದ ಹಿಂದೆ ಅಂತರಾಷ್ಟ್ರಿಯ ಕ್ರಿಕೇಟ್ ಗೆ ವಿದಾಯ ಹೇಳಿದ್ದ ಎಬಿಡಿ, ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದರು. ಈಗ ಎಲ್ಲಾ ಮಾದರಿಯ ಕ್ರಿಕೇಟ್ ಗೂ ವಿದಾಯ ಹೇಳಿರುವ ಕಾರಣ ಮುಂದಿನ ದಿನಗಳಲ್ಲಿ ಐಪಿಎಲ್ ನಲ್ಲಿಯೂ ಸಹ ಆಡುವುದಿಲ್ಲ.

ಇದಕ್ಕೆ ಕಾರಣ ನೀಡಿರುವ ಎಬಿಡಿ, ಸದ್ಯ ನನಗೆ 37 ವರ್ಷ ವಯಸ್ಸಾಗಿದ್ದು, ಮೊದಲಿನಂತೆ ಆಡಲು ಆಗುತ್ತಿಲ್ಲ. ಅದಲ್ಲದೇ ಮೂರು ಮಕ್ಕಳು ತಂದೆಯಾಗಿರುವ ಎಬಿಡಿ ಕುಟುಂಬಕ್ಕೆ ಹೆಚ್ಚು ಸಮಯ ನೀಡುವ ಕಾರಣ ಎಲ್ಲಾ ಮಾದರಿಯ ಕ್ರಿಕೇಟ್ ಗೂ ವಿದಾಯ ಹೇಳಿದ್ದಾರೆ. ಅದಲ್ಲದೇ ತಾವು ಎಂದೆಂದೂ ಆರ್ಸಿಬಿ ತಂಡ ಹಾಗೂ ಅದರ ಅಭಿಮಾನಿಗಳಿಗೆ ಚಿರರುಣಿ ಎಂದು ಹೇಳಿದ್ದಾರೆ. ಎಬಿಡಿ ಇತ್ತಿಚೆಗೆ ಫಿಟ್ನೇಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಕಾರಣಕ್ಕೆ ವಿಕೇಟ್ ಕೀಪಿಂಗ್ ಜವಾಬ್ದಾರಿಯನ್ನು ಸಹ ಬಿಟ್ಟಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav