ಪುನೀತ್ ಕುರಿತು ಮೊದಲ ಬಾರಿಗೆ ಮಾತನಾಡಿದ ರಾಜ ಯದುವೀರ್, ಅರಮನೆಗೂ ಹಾಗೂ ಪುನೀತ್ ರವರಿಗೆ ಇದ್ದ ಸಂಬಂಧ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಅಗಲಿರುವ ದುಃಖ ಕೇವಲ ಒಂದೇ ವರ್ಗದವರಿಗೆ ಮಾತ್ರವಲ್ಲದೆ ಎಲ್ಲಾ ವರ್ಗದವರಿಗೂ ಕೂಡ ಆಗಿದೆ. ಅವರ ಅಂತಿಮ ದರ್ಶನವನ್ನು ಪಡೆಯಲು ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಸೆಲೆಬ್ರಿಟಿಗಳು ರಾಜಕೀಯ ಗಣ್ಯರು ಉದ್ಯಮಿಗಳು ಹೀಗೆ ಎಲ್ಲರೂ ಕೂಡ ಆಗಮಿಸಿದ್ದರು. ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕೇವಲ ನಟನಾಗಿ ಮಾತ್ರವಲ್ಲದೆ ಸಮಾಜದಲ್ಲಿ ಒಳ್ಳೆಯ ಮನಸ್ಸನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕನನ್ನಾಗಿ ಕೂಡ ಇಷ್ಟಪಟ್ಟಿದ್ದರು.

ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಷ್ಟೊಂದು ಒಳ್ಳೆಯ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂಬುದು. ಇನ್ನು ಪುನೀತ್ ರಾಜಕುಮಾರ್ ಅವರು ನಿಧನ ಹೊಂದಿದ ಸಂದರ್ಭದಲ್ಲಿ ದೇಶಾದ್ಯಂತ ಹಲವಾರು ಗಣ್ಯಾತಿಗಣ್ಯರು ಪುನೀತ್ ರಾಜಕುಮಾರ್ ರವರ ಮರಣಕ್ಕೆ ಸಂತಾಪವನ್ನು ಸೂಚಿಸಿದರು. ಇನ್ನು ಇದರಲ್ಲಿ ಮೈಸೂರು ರಾಜಮನೆತನದ ವರಾದ ಶ್ರೀ ಯದುವೀರ್ ಅವರು ಕೂಡ ಒಬ್ಬರು.

ಅವರು ಕೂಡ ಪುನೀತ್ ರಾಜಕುಮಾರ್ ರವರ ಫೋಟೋ ಜೊತೆಗೆ ಮೈಸೂರು ರಾಜ ಲಾಂಛನವನ್ನು ಪೋಸ್ಟ್ ಮಾಡಿ ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ನೀಡಿ ಅವರನ್ನು ಕಳೆದುಕೊಂಡಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನೀಡಲಿ ಎಂಬುದಾಗಿ ಪೋಸ್ಟ್ ಮಾಡಿದ್ದರು. ಇನ್ನು ಇಷ್ಟು ಮಾತ್ರವಲ್ಲದೆ ಮೊನ್ನೆಯಷ್ಟೇ ಅರಮನೆ ಮೈದಾನದಲ್ಲಿ ನಡೆದಂತಹ ಪುನೀತ್ ನಮನ ಕಾರ್ಯಕ್ರಮದಲ್ಲಿ ಕೂಡ ಶ್ರೀ ಯದುವೀರ್ ಅವರು ಭಾಗವಹಿಸಿದ್ದರು. ಇನ್ನು ಪುನೀತ್ ರಾಜಕುಮಾರ್ ರವರ ಕುರಿತಂತೆ ವೇದಿಕೆಯಲ್ಲಿ ಕೂಡ ಶ್ರೀ ಯದುವೀರ್ ಅವರು ಮಾತನಾಡಿದರು.

ರಾಜಮನೆತನದವರಿಗೆ ಹಾಗೂ ರಾಜ್ ಕುಟುಂಬದವರಿಗೂ ಏನು ಸಂಬಂಧ ಅವರು ಬಂದು ಪುನೀತ್ ರಾಜಕುಮಾರ್ ಅವರ ಕುರಿತಂತೆ ಮಾತನಾಡಲು ಕಾರಣವೇನು ಏನು ಸಂಬಂಧ ಎಂಬ ಕುರಿತಂತೆ ಎಲ್ಲರಿಗೂ ಕೂಡ ಕುತೂಹಲ ಇರುತ್ತದೆ. ಇದೆಲ್ಲಾ ಪ್ರಶ್ನೆಗಳಿಗೂ ಕೂಡ ಸ್ವತಹ ಶ್ರೀ ಯದುವೀರ್ ಅವರು ಸ್ವತಃ ಖುದ್ದು ಉತ್ತರ ನೀಡಿದ್ದಾರೆ.

ಒಮ್ಮೆ ಅಣ್ಣಾವ್ರು ಶ್ರೀಕಂಠ ನರಸರಾಜ ಒಡೆಯರ್ ರವರ ಕುರಿತಂತೆ ಸಿನಿಮಾ ಮಾಡಿ ಕೇವಲ ಇತಿಹಾಸದಲ್ಲಿ ಮಾತ್ರ ಕೇಳಲು ಸಿಗುತ್ತಿದ್ದ ನಮ್ಮ ಪೂರ್ವಜರ ಇತಿಹಾಸವನ್ನು ಸಿನಿಮಾದಲ್ಲಿ ಕೂಡ ವೀಕ್ಷಿಸಲು ಸಾಧ್ಯವಾಯಿತು ಹೀಗೆ ಸಂಬಂಧ ಪ್ರಾರಂಭವಾಯಿತು ಎನ್ನುತ್ತಾರೆ. ಇನ್ನು ರಾಜಕುಮಾರ್ ರವರ ಭಾಗ್ಯದ ಬಾಗಿಲು ಚಿತ್ರದಲ್ಲಿ ಕೂಡ ನಮ್ಮ ತಾತಯ್ಯನವರು ಭಾಗಿಯಾಗುತ್ತಾರೆ ಹೀಗೆ ನಮ್ಮ ಸಂಬಂಧ ಬೆಳೆಯಿತು ಎನ್ನುತ್ತಾರೆ.

ಈ ಸ್ನೇಹಸಂಬಂಧ ಅದೇ ರೀತಿ ನಮ್ಮ ವಂಶಪಾರಂಪರ್ಯವಾಗಿ ಮುಂದುವರೆದುಕೊಂಡು ಬಂದಿದೆ. ಪುನೀತ್ ಅವರ ಧಿಡೀರ್ ನಿಧನದ ವಾರ್ತೆ ಅರಮನೆಗು ಕೂಡ ದುಃಖವನ್ನು ತಂದಿತ್ತು. ಅವರನ್ನು ಕಳೆದುಕೊಂಡಿರುವ ದುಃಖ ಅವರ ಅಭಿಮಾನಿಗಳು ಕುಟುಂಬಸ್ಥರು ಹಾಗೂ ಹಿತೈಷಿಗಳಿಗೆ ಸಹಿಸುವ ಶಕ್ತಿ ನೀಡಲಿ ಎಂಬುದಾಗಿ ಆ ಚಾಮುಂಡೇಶ್ವರಿ ತಾಯಿಯ ಬಳಿ ನಾನು ಪ್ರಾರ್ಥಿಸುತ್ತೇನೆ ಎನ್ನುತ್ತಾರೆ. ಒಬ್ಬ ನಟ ಅನ್ನೋದಕ್ಕಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳಿಂದ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿದ್ದರು ನಮ್ಮ ಪುನೀತ್ ರಾಜಕುಮಾರ್ ಅವರು. ಕನ್ನಡಿಗನಾಗಿ ನಾನು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎನ್ನುತ್ತಾರೆ.

Post Author: Ravi Yadav