ಅಪ್ಪು ತರ್ಪಣವನ್ನು ವಿನೋದ್ ರಾಜ್ ಬಿಟ್ಟಿದ್ದಕ್ಕೆ ಕೊನೆಗೂ ಪ್ರತಿಕ್ರಿಯೆ ನೀಡಿದ ಶಿವಣ್ಣ ಹೇಳಿದ್ದೇನು ಗೊತ್ತಾ?? ಅಚ್ಚರಿಯ ಹೇಳಿಕೆ ನೀಡಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಹಲವಾರು ದಿನಗಳು ಕಳೆದಿದ್ದರೂ ಕೂಡ ಇಂದು ಕೂಡ ಅವರ ಭಾವಚಿತ್ರವನ್ನು ನೋಡಿದಾಗ ಇನ್ನೂ ಜೀವಂತವಾಗಿದ್ದಾರೆ ಎಂಬುದಾಗಿ ಮನಸ್ಸು ಸಾರಿ ಸಾರಿ ಹೇಳುತ್ತಿದೆ. ಅಪ್ಪು ಅವರು ಬದುಕಿದ್ದಾರೆ ನಿಜ ಆದರೆ ಅವರ ಒಳ್ಳೆಯ ಕೆಲಸಗಳ ಮೂಲಕ ನಮ್ಮ ಹೃದಯಾಂತರಾಳದಲ್ಲಿ ಬದುಕಿದ್ದಾರೆ.

ಅಪ್ಪು ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಕರ್ನಾಟಕದಲ್ಲಿ ಎಲ್ಲರಿಗೂ ಕೂಡ ಅಚ್ಚುಮೆಚ್ಚು ಆಗಿದ್ದರು. ಯಾರೊಂದಿಗೂ ಕೂಡ ಯಾವ ವಿಷಯಕ್ಕೂ ಕೂಡ ಹೋದವರಲ್ಲ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ಅಜಾತಶತ್ರು ಎಂದು ಕರೆಯಲಾಗುತ್ತದೆ. ಈಗಾಗಲೇ ನಿಮಗೆ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 11ನೇ ಹಾಗೂ 12ನೇ ದಿನದ ಕಾರ್ಯಕ್ರಮಗಳು ಈಗಾಗಲೇ ನಡೆದುಹೋಗಿವೆ. ದೊಡ್ಮನೆ ಕುಟುಂಬಸ್ಥರು ಅಪ್ಪು ಅವರ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ವಿಧ ವಿಧಾನವಾಗಿ ನಡೆಸಿದ್ದಾರೆ. ಇನ್ನು ಇದೇ ದಿನ ಕುಟುಂಬದವರೊಂದಿಗೆ ಸೇರದೆ ವಿನೋದ್ ರಾಜ್ ಹಾಗೂ ಲೀಲಾವತಿಯವರು ಅಪ್ಪು ಅವರ ವೈದಿಕ ಕ್ರಿಯಾಕರ್ಮಗಳನ್ನು ಶ್ರೀರಂಗಪಟ್ಟಣದಲ್ಲಿ ತರ್ಪಣ ಬಿಡುವುದರ ಮೂಲಕ ಶಾಸ್ತ್ರೋಕ್ತವಾಗಿ ಆಚರಿಸಿದರು.

ಇನ್ನು ಇದರ ಕುರಿತಂತೆ ವಿನೋದ್ ರಾಜ್ ರವರ ಬಳಿ ಕೇಳಿದಾಗ ಅಪ್ಪು ನನಗೆ ಅಣ್ಣ ಇದ್ದಂತೆ ನನ್ನ ತಾಯಿ ಕೂಡ ನಾವು ಇಂತಹ ಕಾರ್ಯವನ್ನು ಮಾಡಬೇಕು ಎಂಬುದಾಗಿ ಹೇಳಿದ್ದರಿಂದ ನಾವು ಮಾಡಿದ್ದೇವೆ ಕಾರ್ಯವನ್ನು ಯಾರು ಮಾಡಿದರೇನು ಅವರ ಆತ್ಮಕ್ಕೆ ಶಾಂತಿ ಸಿಗುವುದು ಮುಖ್ಯ ಎಂಬುದಾಗಿ ಹೇಳಿದ್ದರು. ಇನ್ನೊಂದಕ್ಕೆ ಶಿವಣ್ಣ ಕೂಡ ಪ್ರತಿಕ್ರಿಯಿಸಿದ್ದು ಅಪ್ಪು ಇಂತಹ ಕಾರ್ಯ ಮಾಡುವಂತಹ ಗೌರವವನ್ನು ಎಲ್ಲರಿಂದ ಕೂಡ ಸಂಪಾದಿಸಿದ್ದಾನೆ. ಲೀಲಾವತಿ ಅಮ್ಮ ಹಾಗು ವಿನೋದ್ ರಾಜ್ ಅವರು ಈ ಕೆಲಸ ಮಾಡಿರುವುದಕ್ಕೆ ಧನ್ಯವಾದಗಳು ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ ಎಂಬುದಾಗಿ ಹೇಳಿದ್ದಾರೆ.

Post Author: Ravi Yadav