ಪುನೀತ್ ಎದೆ ನೋಡಿದ ತಕ್ಷಣ ಆಗಲೇ ಭವಿಷ್ಯ ನುಡಿದಿದ್ದೆ ಎಂದು ಷಾಕಿಂಗ್ ಹೇಳಿಕೆ ನೀಡಿದ ಮಾವ ಚಿನ್ನೇಗೌಡ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುನೀತ್ ನಮನ ಕಾರ್ಯಕ್ರಮ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅರಮನೆ ಮೈದಾನದಲ್ಲಿ ನಡೆದಿದೆ. ಪುನೀತ್ ಅವರಿಗೆ ನಮನವನ್ನು ಸಲ್ಲಿಸಲು ಚಿತ್ರರಂಗದ ಗಣ್ಯಾತಿಗಣ್ಯರು ಜೊತೆಯಾಗಿ ಸೇರಿದ್ದರು. ಇನ್ನು ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರ ಮಾವ ಆಗಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ವಿಜಯ್ ರಾಘವೇಂದ್ರ ರವರ ತಂದೆಯಾಗಿರುವ ಚಿನ್ನೇಗೌಡರು ಪುನೀತ್ ರಾಜಕುಮಾರ್ ಅವರೊಂದಿಗಿನ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ.

ಚಿಕ್ಕವರಿಗೆ ಬೇಕಾದರೆ ಮೈಸೂರಿಗೆ ಬಂದಿದ್ದಾಗ ಚಿನ್ನೇಗೌಡರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಸ್ನಾನ ಮಾಡಿಸುತ್ತಿದ್ದರಂತೆ. ಈ ಸಂದರ್ಭದಲ್ಲಿ ಚಿನ್ನೇಗೌಡರು ತಮಾಷೆಗಾಗಿ ತಮ್ಮ ಅಳಿಯನ ಬಳಿ ನೀನು ದೊಡ್ಡವನಾದ ಮೇಲೆ ದೊಡ್ಡ ನಟನಾ ಗುತ್ತಿಯ ಎಂಬುದಾಗಿ ಹೇಳುತ್ತಾರೆ. ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು ಚಿನ್ನಿ ಗೌಡರಿಗೆ ಏ ಅದೆಲ್ಲ ಇಷ್ಟ ಇಲ್ಲ ಮಾಮಾ ಎಂಬುದಾಗಿ ಹೇಳುತ್ತಾರಂತೆ. ನೀನು ದೊಡ್ಡ ಕಲಾವಿದನಾದ ಮೇಲೆ ನನಗೆ ಕಾಲ್ಶೀಟ್ ಕೊಡುತ್ತೀಯಾ ಎಂಬುದಾಗಿ ಕೂಡ ಚಿನ್ನೇಗೌಡರು ಅಪ್ಪು ಅವರನ್ನು ಚಿಕ್ಕವಯಸ್ಸಿನಲ್ಲಿ ಕೇಳಿದ್ದರಂತೆ. ಆಗ ನನಗೆ ಅದು ಇಷ್ಟವಿಲ್ಲ ಎಂಬುದಾಗಿ ಅಪ್ಪು ಅವರು ಹೇಳುತ್ತಿದ್ದರಂತೆ.

ಇನ್ನು ಅಣ್ಣಾವ್ರ ಹತ್ತಿರ ಕೂಡ ಅಣ್ಣ ನಿಮ್ಮ ನಂತರ ಯಾರು ಎಂದು ಕೇಳಿದಾಗಲೆಲ್ಲ ರಾಜಕುಮಾರ್ ರವರು ಚೆನ್ನಾಗಿರುವ ಕಲಾವಿದರ ಬರಬೇಕು ಎಂಬುದಾಗಿ ಆಶಿಸುತ್ತಿದ್ದರಂತೆ. ಆದರೆ ದೇವರು ನೀಡಿದ ಫಲವೆಂಬಂತೆ ಅಣ್ಣಾವ್ರಿಗೆ ಶಿವರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರಂತಹ ಅದ್ಭುತ ಪ್ರತಿಭೆಗಳನ್ನು ಹೊಂದಿರುವ ಮಕ್ಕಳನ್ನು ನೀಡಿದ್ದಾರೆ ಎಂಬುದನ್ನು ಕೂಡ ನೆನಪಿಸಿಕೊಳ್ಳುತ್ತಾರೆ. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಿಟ್ಟು ಹೋದಂತಹ ಸ್ಥಾನವನ್ನು ಕನ್ನಡಚಿತ್ರರಂಗದಲ್ಲಿ ಬೇರೆ ಯಾರೂ ಕೂಡ ತುಂಬಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ.

Post Author: Ravi Yadav