ಯಾರಿಗೂ ತಿಳಿಯದಂತೆ ಸತ್ಯಜಿತ್ ಅವರ ನಿಧನದ ನಂತರ ಅವರ ಮನೆಯವರಿಗೆ ಪುನೀತ್ ಅವರು ಕೊಟ್ಟ ಹಣ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇಂದಿನಕಾಲದಲ್ಲಿ ಐದು ರೂಪಾಯಿ ನೀಡಿ ಹತ್ತು ರೂಪಾಯಿ ಪ್ರಚಾರ ಗಿಟ್ಟಿಸಿಕೊಳ್ಳುವ ಜನರ ನಡುವೆ ಜನರ ಸೇವೆಗಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿದ್ದರು ಕೂಡ ಪುನೀತ್ ರಾಜಕುಮಾರ್ ರವರು ಎಲ್ಲಿಯೂ ಕೂಡ ಇದರ ಕುರಿತಂತೆ ಹೇಳಿಕೊಂಡಿರಲಿಲ್ಲ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬದುಕಿದ್ದಷ್ಟು ದಿನ ಕೂಡ ತಮ್ಮ ಸಮಾಜ ಸೇವೆಗಳ ಕುರಿತಂತೆ ಎಲ್ಲಿ ಕೂಡ ಬಾಯಿಬಿಟ್ಟಿರಲಿಲ್ಲ ಹಾಗೂ ಪ್ರಚಾರವನ್ನು ಕೂಡ ಗಿಟ್ಟಿಸಿ ಕೊಂಡಿರಲಿಲ್ಲ. ಅವರು ಅದೆಷ್ಟು ಅನಾಥಾಶ್ರಮ ಗೋಶಾಲೆ ವೃದ್ಧಾಶ್ರಮ ಉಚಿತ ಶಾಲೆಗಳನ್ನು ನಡೆಸುತ್ತಿದ್ದರು ಎಂಬುದು ನಿಮಗೆಲ್ಲಾ ಅವರ ಮರಣದ ನಂತರ ತಿಳಿದುಬಂದಿದೆ. ಇನ್ನು ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಳ್ಳುವ ಮುನ್ನ ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟನಾಗಿರುವ ಸತ್ಯಜಿತ್ ರವರನ್ನು ನಾವು ಕಳೆದುಕೊಂಡಿದ್ದೇವೆ. ಈ ಸಂದರ್ಭದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅವರ ಕುಟುಂಬಕ್ಕೆ ಸಹಾಯವನ್ನು ಮಾಡಿದ್ದರು ಆದರೆ ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ.

ಈ ಸಂದರ್ಭದಲ್ಲಿ ಸತ್ಯಜಿತ್ ಅವರನ್ನು ಅಂತಿಮ ದರ್ಶನ ಮಾಡಿ ಬರಬೇಕಾದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಮಾಧ್ಯಮದವರು ಸತ್ಯಜಿತ್ ರವರ ಕುರಿತಂತ ಕೇಳಿದಾಗ ಕೇವಲ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರು ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ಹೇಳಿದರಷ್ಟೇ. ಆದರೆ ನಿಜವಾಗಿಯೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಅಂದು ಅವರ ಮನೆಗೆ ಹೋಗಿ ಸಂತೈಸಿ ತಂದೆಯ ಕಾರ್ಯಗಳಿಗಾಗಿ 5 ಲಕ್ಷ ರೂಪಾಯಿಯನ್ನು ಅವರ ಮಗನಿಗೆ ಕೊಟ್ಟು ಬಂದಿದ್ದರಂತೆ. ಇನ್ನು ಈ ಕುರಿತಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನದ ನಂತರ ಸತ್ಯಜಿತ್ ಅವರ ಮಗ ಕಣ್ಣೀರು ಹಾಕಿಕೊಂಡು ಹೇಳಿದ್ದಾರೆ.

Post Author: Ravi Yadav