ರಾಜ್ ಕುಂದ್ರಾ ಮೇಲೆ ಕೇಸ್ ನ ನಂತರ ಮತ್ತೊಂದು ವಿಚಾರದಲ್ಲಿ ಶಿಲ್ಪಾ ಶೆಟ್ಟಿ ಮೇಲೆ ಬಿತ್ತು ಕೇಸ್?? ಕಂಬಿ ಎಣಿಸುತ್ತಾರಾ ಶಿಲ್ಪಿ?? ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಶಿಲ್ಪಶೆಟ್ಟಿ ಅವರ ಪತಿ ಆಗಿರುವ ರಾಜ್ ಕುಂದ್ರಾ ರವರು ಬೇಡದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಕ್ಕಾಗಿ ಜೈಲು ಸೇವೆಯನ್ನು ಅನುಭವಿಸಿ ಬಂದಿದ್ದರು. ಹೌದು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರ ರವರು ಕೆಟ್ಟ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಪ್ರಕರಣ ದಾಖಲಾಗಿ ಜೈಲುವಾಸವನ್ನು ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಹಲವಾರು ಸಮಯಗಳ ಕಾಲ ತಮ್ಮ ಕುಟುಂಬದಿಂದ ದೂರವಿದ್ದ ಕುಂದ್ರಾ ಈಗ ಜಾಮೀನಿನ ಕಾರಣಕ್ಕಾಗಿ ಕುಟುಂಬದವರೊಂದಿಗೆ ಸಂತೋಷದ ಸಮಯಗಳನ್ನು ಕಳೆಯುತ್ತಿದ್ದಾರೆ ಆದರೆ ಇದರ ನಡುವಲ್ಲೇ ಇನ್ನೊಂದು ತಲೆನೋವು ಬಂದಿದೆ. ಆದರೆ ಈ ಬಾರಿ ಸಿಕ್ಕಿಹಾಕಿಕೊಂಡಿರುವುದು ರಾಜ್ ಕುಂದ್ರಾ ಮಾತ್ರವಲ್ಲದೆ ಶಿಲ್ಪ ಶೆಟ್ಟಿ ಅವರು ಕೂಡ ಹೌದು. ನಿಮಗೆಲ್ಲ ತಿಳಿದಿರುವಂತೆ ಶಿಲ್ಪ ಶೆಟ್ಟಿ ಅವರು ಫಿಟ್ನೆಸ್ ಹಾಗೂ ಯೋಗದ ಕುರಿತಂತೆ ಸಾಕಷ್ಟು ಜ್ಞಾನವನ್ನು ಹೊಂದಿರುವ ನಟಿ. ಇನ್ನು ಇದರ ಬ್ರಾಂಚ್ ಗಳನ್ನು ದೇಶದಾದ್ಯಂತ ಮಾಡಲು ಹಲವಾರು ಉದ್ಯಮಿಗಳಿಂದ 1.5 ಕೋಟಿ ರೂಪಾಯಿ ಹಣವನ್ನು ಪಡೆದು ಕೊಂಡಿದ್ದರು.

ಆದರೆ ಶಿಲ್ಪಾ ಶೆಟ್ಟಿ ಅವರು ಇತ್ತ ಬ್ರಾಂಚ್ ಕೂಡ ಮಾಡಿಲ್ಲ ಅತ್ತ ಹಣವನ್ನು ಕೂಡ ವಾಪಾಸ್ಸು ನೀಡಿಲ್ಲ. ಹೀಗಾಗಿ ಹಣವನ್ನು ಕೊಟ್ಟಿರುವ ಉದ್ಯಮಿಗಳು ದಂಪತಿಗಳಿಬ್ಬರ ಮೇಲೂ ಕೂಡ ಚೀಟಿಂಗ್ ಕೇಸ್ ದಾಖಲು ಮಾಡಿದ್ದಾರೆ. ದಂಪತಿಗಳಿಬ್ಬರ ಮೇಲು ಕೂಡ ಮೋಸ ಹಾಗೂ ನಕಲಿ ಸಹಿಯನ್ನು ಹಾಕಿರುವ ಆರೋಪವನ್ನು ಹೊರಿಸಲಾಗಿದೆ. ಇತ್ತೀಚಿಗಷ್ಟೇ ಹಲವಾರು ಸಮಸ್ಯೆಗಳನ್ನು ಎದುರಿಸಿರುವ ದಂಪತಿಗಳು ನಾರ್ಮಲ್ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಇಂತಹ ಸನ್ನಿವೇಶ ಎದುರಾಗಿರುವುದು ನಿಜಕ್ಕೂ ಶಾಕ್ ತಂದಿದೆ. ಈ ಕಡೆ ರಾಜ್ ಕುಂದ್ರಾ ಕೂಡಾ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಡಿ ಆಕ್ಟಿವೇಟ್ ಮಾಡಿದ್ದಾರೆ.

Post Author: Ravi Yadav