ರೈತಪರ ಯೋಜನೆಗಳಿಂದಾಗಿಯೇ ರೈತರ ನೆಚ್ಚಿನ ನಾಯಕ ಕೃಷಿ ಮಂತ್ರಿಗಳಾದ ಶ್ರೀ ಬಿ ಸಿ ಪಾಟೀಲ್ ಸಾಹೇಬರು

ರೈತಪರ ಯೋಜನೆಗಳಿಂದಾಗಿಯೇ ರೈತರ ನೆಚ್ಚಿನ ನಾಯಕ ಕೃಷಿ ಮಂತ್ರಿಗಳಾದ ಶ್ರೀ ಬಿ ಸಿ ಪಾಟೀಲ್ ಸಾಹೇಬರು

ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜಕಾರಣ ಎಷ್ಟೋ ರಾಜಕೀಯ ನಾಯಕರನ್ನು ಕಂಡಿರಬಹುದು ಆದರೆ ಜನಾನುರಾಗಿ ನಾಯಕರನ್ನು ಕಂಡಿರುವುದು ಕೆಲವೇ ಕೆಲವು ಮಂದಿ ಅಷ್ಟು ಮಾತ್ರ. ರಾಜಕೀಯ ಕ್ಷೇತ್ರದಲ್ಲಿ ರಾಜಕಾರಣ ಮಾಡಲು ಮಾತ್ರ ಬರುವವರು ಎಂದು ಅಂದುಕೊಳ್ಳುವ ಸಮಯದಲ್ಲಿ ಅಲ್ಲೊಬ್ಬರು ಪಾರದರ್ಶಕ ಆಡಳಿತವನ್ನು ನಡೆಸಿ ರೈತರಿಗೆ ನೆರವಾಗಿದ್ದರು.

ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಕನ್ನಡಿಗರ ನೆಚ್ಚಿನ ಕೌರವ ರಾಜ್ಯದ ಕೃಷಿ ಮಂತ್ರಿ ಗಳಾಗಿರುವ ಶ್ರೀ ಸನ್ಮಾನ್ಯ ಬಿ ಸಿ ಪಾಟೀಲ್ ಅವರ ಕುರಿತಂತೆ ಹೇಳುತ್ತಿರುವುದು. ರಾಜ್ಯದ ಕೃಷಿ ಮಂತ್ರಿ ಆದ ಮೇಲೆ ಶ್ರೀ ಮಾನ್ಯ ಬಿ ಸಿ ಪಾಟೀಲ್ ಅವರು ರೈತರ ಕುರಿತಂತೆ ಪಾರದರ್ಶಕ ಆಡಳಿತವನ್ನು ಜಾರಿಗೆ ತಂದಿದ್ದಾರೆ. ರೈತರಿಗೆ ಉಪಯೋಗಕಾರಿ ಆಗುವಂತಹ ಎಲ್ಲಾ ಕಾರ್ಯಗಳನ್ನು ಕೂಡ ಅವರ ಮನೆ ಬಾಗಿಲಿಗೆ ತಲುಪಿಸುವಂತೆ ಮಾಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಯಾವ ಮಧ್ಯವರ್ತಿಗಳ ಮಾತಿಗೂ ಕೂಡ ಕಿವಿಕೊಡದೆ ರೈತರ ಬಳಿ ನೇರವಾಗಿ ಅವರ ಕಷ್ಟಗಳನ್ನು ಆಲಿಸಿ ಅದಕ್ಕೆ ಶೀಘ್ರವಾಗಿ ಪ್ರತಿಸ್ಪಂದಿಸುವ ಮಹತ್ತರ ಕೆಲಸವನ್ನು ಕೂಡ ಮಾಡಿದ್ದಾರೆ. ಇಂತಹ ಸಿಂಪಲ್ ಜನನಾಯಕನನ್ನು ಹಿಂದೆಂದೂ ಕರ್ನಾಟಕ ರಾಜಕೀಯ ಕಂಡಿಲ್ಲ ಕಾಣುವುದು ಇಲ್ಲ ಎಂದು ಹೇಳಬಹುದು.

ತಾನು ಮಂತ್ರಿ ಯಾಗಿದ್ದೇನೆ ಎನ್ನುವ ದರ್ಪವನ್ನು ತೋರುವ ಅದೆಷ್ಟು ಮಂತ್ರಿಗಳ ನಡುವೆ ಜನರ ಪ್ರಧಾನ ಸೇವಕನಂತೆ ಜನರಿಗಾಗಿ ನನ್ನ ಮಂತ್ರಿಗಿರಿ ಎಂಬ ಮನೋಭಾವವುಳ್ಳ ಬಿಸಿ ಪಾಟೀಲ್ ರವರು ರೈತರಿಗೆ ದೇವ ಸ್ವರೂಪಿ ಎನ್ನುವಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ತಮ್ಮ ಜನ್ಮದಿನವನ್ನು ಕೂಡ ನೆನ್ನೆಯಷ್ಟೇ ಪಾಟೀಲ್ ಸಾಹೇಬರು ಜನರ ನಡುವೆ ಆಚರಿಸಿಕೊಂಡಿದ್ದಾರೆ. ಹೌದು ತಮ್ಮ 66ನೇ ಜನ್ಮದಿನಾಚರಣೆಯನ್ನು ರೈತರೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮದಡಿಯಲ್ಲಿ ರೈತರ ಕಷ್ಟಗಳನ್ನು ಆಲಿಸಿ ಅದಕ್ಕೆ ಪರಿಹಾರವನ್ನು ಸ್ಥಳದಲ್ಲಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಹಲವಾರು ರೈತ ಪರ ಕಾನೂನುಗಳನ್ನು ಕೂಡ ಈಗಾಗಲೇ ಜಾರಿಗೆ ತಂದಿರುವ ಬಿ ಸಿ ಪಾಟೀಲ್ ರವರು ಮುಂದೆಯೂ ಕೂಡ ಕೃಷಿ ಮಂತ್ರಿಗಳಾಗಿ ಮತ್ತೆ ಬರಲಿ ಎಂಬುದಾಗಿ ಕೂಡಾ ರೈತರು ಹಾರೈಸಿದ್ದಾರೆ.