ಚಾರ್ಲಿ ಚಾಪ್ಲಿನ್ ಜಗತ್ತನೇ ನಗಿಸಿದ್ದರು, ಆದರೆ ಅವರದ್ದು ಮಾತ್ರ ದುರಂತ ಅಂತ್ಯ; ನಿಜವಾಗಿ ನಡೆದಿದ್ದೇನು ಗೊತ್ತಾ?

ಚಾರ್ಲಿ ಚಾಪ್ಲಿನ್ ಜಗತ್ತನೇ ನಗಿಸಿದ್ದರು, ಆದರೆ ಅವರದ್ದು ಮಾತ್ರ ದುರಂತ ಅಂತ್ಯ; ನಿಜವಾಗಿ ನಡೆದಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಕ್ಕರೆ ಅದೇ ಸ್ವರ್ಗ, ನಾವು ನಗಬೇಕು, ಇತರರನ್ನೂ ನಗಿಸಬೇಕು. ಆದರೆ ಹೀಗೆ ಬೇರೆಯವರನ್ನು ನಗಿಸುವ ಕೆಲಸ ಎಲ್ಲರಿಂದಲೂ ಸಾಧ್ಯವಿಲ್ಲ, ಯಾಕಂದ್ರೆ ನಗಿಸುವುದೂ ಕೂಡ ಒಂದು ಕಲೆ. ಈ ಕಲೆ ಎಲ್ಲರಿಗೂ ಒಲಿದಿರುವುದಿಲ್ಲ. ಇಂದಿಗೂ ಒಬ್ಬ ವ್ಯಕ್ತಿಯನ್ನು ವಿಡಿಯೋ ಮೂಲಕವಾದರೂ ಸರಿ ನೊಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೇವೆ ಅಂದರೆ ಅದು ಬೇರೆ ಯಾರೂ ಅಲ್ಲ, ಜಗತ್ತನ್ನೇ ನಗಿಸಿದ, ಒಂದರ್ಥದಲ್ಲಿ ಜಗತ್ತಿನ ಸ್ವಾಸ್ಥ್ಯಕ್ಕೇ ಕಾರಣವಾದ ಚಾರ್ಲಿ ಚಾಪ್ಲಿನ್!

ಸ್ನೇಹಿತರ್ರೆ, ನಾವು ಸಾಕಷ್ಟು ಜನರನು ನೊಡುತ್ತೇವೆ ಅವರು ಸದಾ ನಗುತ್ತಿರುತ್ತಾರೆ ಆದರೆ ಮನಸ್ಸಿನಲ್ಲಿ ನೋವಿನ ಕಣಜವನ್ನೇ ಹೊತ್ತಿರುತ್ತಾರೆ. ನಟ ಚಾರ್ಲಿ ಚಾಲ್ಪಿನ್ ಕೂಡ ತಮ್ಮ ನೋವನ್ನು ಅದ್ಯಾವತ್ತೂ ಅದ್ಯಾರ ಮುಂದೆಯೂ ತೋರಿಸಿಕೊಳ್ಳಲೇ ಇಲ್ಲ. ನಗಿಸುತ್ತಲೇ ಇದ್ದರು. ಚಾರ್ಲಿ ಚಾಪ್ಲಿನ್ ಹುಟ್ಟಿದ್ದು 1889 ರ ಏಪ್ರಿಲ್ 16 ರಂದು. ಇಂದಿನ ಕಾಲಮಾನಕ್ಕೂ ಅನುಗುಣವಾಗುವಂಥ ಸಾಕಷ್ಟು ಸಾಮಾಜಿಕ ಸಮಸ್ಯೆಗಳನ್ನ ಥೀಮ್ ಮಾಡಿಕೊಂಡು ಹಾಸ್ಯ ಮಾಡಿಯೇ ಅವುಗಳನ್ನು ಜನರಿಗೆ ಅರ್ಥ ಮಾಡಿಸುತ್ತಿದ್ದರು ಚಾಪ್ಲಿನ್. ದಿ ಟ್ರಂಪ್, ಮಾರ್ಡನ್ ಟೈಮ್ಸ್, ದಿ ಗ್ರೇಟ್ ಡಿಕ್ಟೇಟರ್ ಮೊದಲಾದ ಚಿತ್ರಗಳಲಿ ಚಾರ್ಲಿಯನ್ನು ನಾವು ಕಾಣಬಹುದು. ಚಾರ್ಲಿ ಚಾಪ್ಲಿನ್ ಬದುಕಿದ್ದು ಸುಮಾರು 88 ವರ್ಷ. 1977 ರಲ್ಲಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ಕ್ರಿಸ್ಮಸ್ ಹಬ್ಬದಂದು ಇಹಲೋಕ ತ್ಯಜಿಸಿದರು.

ಚಾರ್ಲಿ ಚಾಪ್ಲಿನ್ ಇರಬೇಕಿತ್ತು ಎಂದು ಇಡೀ ಜಗತ್ತು ಇಂದಿಗೂ ಬಯಸುತ್ತದೆ. ಅವರು ಉಸಿರುನಿಲ್ಲಿಸಿದಾಗ ಸಿಟ್ಜರ್ಲ್ಯಾಂಡ್ ಉಸಿರು ಬಿಗಿಹಿಡಿದು ನಿಂತಿತ್ತು. ಚಾರ್ಲಿ ಚಾಪ್ಲಿನ್ ಅವರಿಗೆ ನಾಲ್ಕು ಮಂದಿ ಹೆಂಡತಿಯರು ಹಾಗೂ ಎಂಟು ಜನ ಮಕ್ಕಳು. ಚಾರ್ಲಿ ಚಾಪ್ಲಿನ್ ನ ಕೊನೆಯ ಕಾರ್ಯಗಳನ್ನೇಲ್ಲಾ ಅವರ ನಾಲ್ಕನೆಯ ಹೆಂಡತಿ ನೆರವೇರಿಸುತ್ತಾರೆ. ಅಂತಿಮ ಕಾರ್ಯವನ್ನು ಮುಗಿಸಿ ಮನೆಗೆ ಬಂದ ಊನೋಗೆ ಒಂದು ಶಾ.ಕ್ ಕಾದಿತ್ತು. ಆ ದಿನ ರಾತ್ರಿ ಒಂದು ಅನಾಮಧೇಯ ಕರೆ ಬರುತ್ತೆ. ನಿನ್ನ ಗಂಡನ ಶರೀರವನ್ನು ಸಮಾಧಿಯಿಂದ ಹೊರ ತೆಗೆದು ನಾವು ತೆಗೆದುಕೊಂಡು ಹೋಗಿದ್ದೇವೆ. ಅವರ ದೇಹ ಬೇಕು ಎಂದರೆ ಆರು ಲಕ್ಷ ಡಾಲರ್ ಕೊಡಿ ಎಂಬ ಬೇಡಿಕೆಯನ್ನು ಇಡುತ್ತಾರೆ. ಹಣಕ್ಕಾಗಿ ಏನೆಲ್ಲಾ ಮಾಡುತ್ತಾರೆ ನೋಡಿ!

ಊನೋ ಹಣ ಕೊಡಲು ನಿರಾಕರಿಸಿದಾಗ ಮಕ್ಕಳನ್ನ ಕೂಡ ಮುಗಿಸಿತ್ತೇವೆ ಎಂದು ಹೇಳುತ್ತಾರೆ. ಬೇರೆ ದಾರಿಯಿಲ್ಲದೇ ಊನೋ ಪೋಲಿಸರ ಮೊರೆ ಹೋಗುತ್ತಾರೆ. ಪೋಲಿಸರು ಹೇಳಿದಂತೆ ಅವರಿಗೆ ಹಣ ನೀಡಲು ಒಪ್ಪಿ ಅವರಿದ್ದ ಸ್ಥಳಕ್ಕೆ ಬರುತ್ತಾಳೆ ಊನೋ. ಮಾರುವೇಷದಲ್ಲಿದ್ದ ಪೋಲಿಸರು ಅಪಹರಣಕಾರರನ್ನು ಬಂಧಿಸುತ್ತಾರೆ. ನಂತರ ಚಾರ್ಲಿ ಚಾಪ್ಲಿನ್ ಮೃತ ದೇಹವನ್ನು ತಾವೇ ಅಂತ್ಯ ಸಂಸ್ಕಾರ ಹಾಕಿರುವುದಾಗಿ ಹೇಳುತ್ತಾರೆ. ಇದರಿಂದ ಊನೋ ಹಾಗೂ ಅವರ ಮನೆಯವರು ಪಟ್ಟ ದುಃಖ ಅಷ್ಟಿಷ್ಟಲ್ಲ. ಇಡೀ ಜಗತ್ತನ್ನೇ ನಗುವಿನ ಹೊಳೆಯಲ್ಲಿ ತೇಲಿಸಿದ ಹಾಸ್ಯನಟನ ಕೊನೆಯ ಘಳಿಗೆ ಎಷ್ಟು ವಿಚಿತ್ರವಾಗಿತ್ತು ನೋಡಿ.