ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ಸೃಷ್ಟಿಯಾಯಿತು ಹೊಸ ದಾಖಲೆ. ಅಪ್ಪು ಅವರ ಅನ್ನಸಂತರ್ಪಣೆ ದಿನದಂದು ನೇತ್ರದಾನ ಮಾಡಿದ ಅಭಿಮಾನಿಗಳ ಸಂಖ್ಯೆ ಎಷ್ಟು ಗೊತ್ತಾ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಹದಿನೈದು ದಿನಗಳು ಕಳೆದರೂ ಕೂಡ ಅವರ ಅಭಿಮಾನಿಗಳ ಪ್ರೀತಿ ಇನ್ನು ಕೂಡ ಕಡಿಮೆಯಾಗಿಲ್ಲ. ತಮ್ಮ ನಟ ಇಲ್ಲದಿದ್ದರೂ ಕೂಡ ಅವರ ಸಮಾಧಿಗೆ ದಿನಕ್ಕೆ ಸಾವಿರಾರು ಮಂದಿ ಕಂಠೀರವ ಸ್ಟುಡಿಯೋಕ್ಕೆ ಹೋಗಿ ಅವರ ದರ್ಶನವನ್ನು ಪಡೆದು ಬರುತ್ತಾರೆ. ಅಪ್ಪು ಅವರು ಎಷ್ಟೊಂದು ಒಳ್ಳೆಯ ಕೆಲಸ ಮಾಡುತ್ತಿದ್ದರು ಎಂಬುದನ್ನು ಅವರ ಮರಣದ ನಂತರ ಇಡೀ ರಾಜ್ಯದ ಜನತೆ ತಗೊಂಡಿದ್ದಾರೆ. ಅವರಿಂದ ಪ್ರಭಾವಿತರಾಗಿ ಈಗ ಎಲ್ಲರೂ ಕೂಡ ಜನಸೇವೆಯತ್ತ ತಮ್ಮ ಗಮನವನ್ನು ಹರಿಸಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನೇತ್ರದಾನದ ನಂತರವಂತೂ ರಾಜ್ಯಾದ್ಯಂತ ನೇತ್ರದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನೇತ್ರದಾನ ದಿಂದಾಗಿ ನಾಲ್ಕು ಜನ ಅಂಧರ ಬಾಳಿಗೆ ಬೆಳಕು ಸಿಕ್ಕಿದೆ ಎಂದರೆ ಅದು ಎಷ್ಟರಮಟ್ಟಿಗೆ ರಾಜ್ಯದ ಜನರನ್ನು ಪ್ರಭಾವಿತರನ್ನಾಗಿ ಮಾಡಿರಬಹುದು ಎಂಬುದನ್ನು ನೀವೇ ಲೆಕ್ಕ ಹಾಕಿಕೊಳ್ಳಿ. ಇನ್ನು ಅಪ್ಪು ಅವರನ್ನು ನೋಡಲು 25 ಲಕ್ಷಕ್ಕೂ ಅಧಿಕ ಜನರು ಕಂಠೀರವ ಸ್ಟೇಡಿಯಂ ಗೆ ಬಂದಿದ್ದರು. ಇದಾದ ನಂತರ 12ನೇ ದಿನದ ಅನ್ನಸಂತರ್ಪಣೆ ಕಾರ್ಯದಲ್ಲಿ ಕೂಡ 40 ಸಾವಿರಕ್ಕೂ ಅಧಿಕ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಿಂದಲೂ ಕೂಡ ಬಂದಿದ್ದರು.

ಇನ್ನು ಈ ಸಂದರ್ಭದಲ್ಲಿಯೇ ಅಲ್ಲಿ ರಕ್ತದಾನ ಹಾಗೂ ನೇತ್ರದಾನ ಶಿಬಿರವನ್ನು ಕೂಡ ಮಾಡಲಾಗಿತ್ತು. ನೇತ್ರದಾನ ಶಿಬಿರದಲ್ಲಿ ಸಾಕಷ್ಟು ಮಂದಿ ಮರಣಾನಂತರ ನೇತ್ರದಾನ ಮಾಡುವ ಶಪಥವನ್ನು ಕೈಗೊಂಡಿದ್ದಾರೆ. ಅನ್ನ ಸಂತರ್ಪಣೆಯ ದಿನ ಕಾರ್ಯ ಗ್ರೌಂಡ್ನಲ್ಲಿ 3100 ಜನರು ನೇತ್ರದಾನ ಮಾಡುವ ಅರ್ಜಿಗೆ ಸಹಿ ಹಾಕಿದ್ದಾರೆ. ಅದೊಂದೇ ದಿನ ಕರ್ನಾಟಕದಾದ್ಯಂತ 4000 ಜನರು ನೇತ್ರದಾನಕ್ಕೆ ಸಹಿ ಹಾಕಿದ್ದಾರೆ. ಇದುವರೆಗೂ 7000 ಜನ ಅಪ್ಪು ಅವರ ನೇತ್ರದಾನದ ನಂತರ ನೇತ್ರದಾನ ಮಾಡಲು ಒಪ್ಪಿಗೆ ನೀಡಿ ಸಹಿ ಹಾಕಿದ್ದಾರೆ. ತಮ್ಮ ಮರಣದಲ್ಲಿ ಕೂಡ ಸಾಮಾಜಿಕ ಸಂದೇಶವನ್ನು ಸಾರಿ ಹೋಗಿರುವ ಪುನೀತ್ ರಾಜಕುಮಾರ್ ಅವರಿಗೆ ನಮ್ಮ ಸಲಾಂ.

Get real time updates directly on you device, subscribe now.