ಕೌನ್ ಬಾನೇಹ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದವರು, ಕೆ.ಬಿ.ಸಿ ಯಲ್ಲಿ ಗೆದ್ದ ಹಣವೆಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕೌನ್ ಬನೇಗಾ ಕರೋಡ್ ಪತಿ, ಕಿರುತೆರೆಯ ಎವರ್ ಗ್ರೀನ್ ಶೋ. 2000 ದಲ್ಲಿ ಆರಂಭವಾದ ಈ ಕಾರ್ಯಕ್ರಮ ಇಂದಿಗೂ ತನ್ನ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಅಮಿತಾಭ್ ಬಚ್ಚನ್ ರಿಂದ ಶುರುವಾದ ಈ ಕಾರ್ಯಕ್ರಮ ಸರಣಿ, ದೇಶದ ಬೇರೆ ಬೇರೆ ಭಾಷೆಯ ಚಾನೆಲ್ ಗಳಲ್ಲಿ ಸಹ ಮೂಡಿ ಬಂದಿದೆ. ಇತ್ತಿಚೆಗೆ ನಮ್ಮನ್ನಗಲಿದ ಪುನೀತ್ ರಾಜ್ ಕುಮಾರ್ ಸಹ ಕನ್ನಡದಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.

ಇನ್ನು ಹಿಂದಿಯ ವಾಹಿನಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಯ ಹದಿಮೂರನೇ ಸೀಸನ್ ಶುರುವಾಗಿದೆ. ಈ ಸೀಸನ್ ಗೂ ಸಹ ನಿರೂಪಕರಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇದ್ದಾರೆ. ಮೊನ್ನೆ ತಾನೇ ಗ್ರಾಂಡ್ ಓಪನಿಂಗ್ ಸಹ ನಡೆಯಿತು. ಮೊದಲನೇ ಶೋಗೆ ವಿಶೇಷ ಅತಿಥಿಗಳು ಬಂದಿದ್ದರು. ಅವರು ಯಾರೆಂದರೇ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಗ ಗೆದ್ದ ಜಾವೆಲಿನ್ ಥ್ರೋ ಹೀರೋ ನೀರಜ್ ಚೋಪ್ರಾ ಹಾಗೂ ಪಿ.ಶ್ರೀಜೇಶ್ ಆಗಮಿಸಿದ್ದರು.

ಪ್ರಶ್ನಾವಳಿ ಶುರುವಾಗುವ ಮುನ್ನ ಒಲಂಪಿಕ್ಸ್ ನಲ್ಲಿ ಈ ಇಬ್ಬರೂ ಆಟಗಾರರು ನೀಡಿದ್ದ ಪ್ರದರ್ಶನದ ವಿಡಿಯೋಗಳನ್ನ ಪ್ರಸಾರ ಮಾಡಲಾಯಿತು. ಈ ಇಬ್ಬರೂ ಆಟಗಾರರು ತಾವು ಈ ಶೋದಿಂದ ಗೆದ್ದವನ್ನು ಚಾರಿಟಿಗಳಿಗೆ ನೀಡುತ್ತೇವೆ ಎಂದು ಮೊದಲೇ ಘೋಷಿಸಿದರು. ಅಮಿತಾಭ್ ಹಾಗೂ ಮಾಸ್ಟರ್ ಜೀ ಕೇಳುವ ಒಂದೊಂದೆ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿದರು.

ಒಲಂಪಿಕ್ಸ್ ನಲ್ಲಿ ಪದಕ ಗೆದ್ದಂತೆ ಇಲ್ಲಿಯೂ ಹಣವನ್ನು ಗೆಲ್ಲುತ್ತಾ ಹೊರಟ ಈ ಜೋಡಿ ಕೊನೆಗೆ ಒಟ್ಟು ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಎಲ್ಲರೂ ಅಮಿತಾಭ್ ರ ಅಭಿಮಾನಿಯಾಗಿದ್ದರೇ, ಅಮಿತಾಭ್ ತಾವು ನಿಮ್ಮಿಬ್ಬರ ಅಭಿಮಾನಿ, ನಿಮ್ಮನ್ನ ಭೇಟಿ ಮಾಡಿದ್ದು ಖುಷಿ ನೀಡಿತು ಎಂದು ಸಂತಸ ಹಂಚಿಕೊಂಡರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav