ವಿರಾಟ್, ರೋಹಿತ್ ನಂತರ ಭಾರತ ತಂಡವನ್ನು ಎತ್ತರಕ್ಕೆ ಕೊಂಡೊಯ್ಯುವ ಭವಿಷ್ಯ ನಾಯಕನನ್ನು ಆಯ್ಕೆ ಮಾಡಿದ ಗ್ರೇಮ್ ಸ್ವಾನ್, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ಕ್ರಿಕೇಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. ಭಾರತ ತಂಡದ ಹೊಸ ನಾಯಕರಾಗಿ ರೋಹಿತ್ ಶರ್ಮಾ ಹಾಗೂ ಉಪನಾಯಕರಾಗಿ ಕೆ.ಎಲ್.ರಾಹುಲ್ ಆಯ್ಕೆಯಾಗಿದ್ದಾರೆ. ಇನ್ನು ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ವಿರಾಟ್ ನಾಯಕನಾಗಿ ಮುಂದುವರೆಯಲಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಗ್ರೆಮ್ ಸ್ವಾನ್ ಮುಂದಿನ ಹತ್ತು ವರ್ಷಗಳವರೆಗೆ ಭಾರತ ತಂಡವನ್ನು ಮುನ್ನಡೆಸುವ ವ್ಯಕ್ತಿಯನ್ನ ಹೆಸರಿಸಿದ್ದಾರೆ.

2023 ರ ವಿಶ್ವಕಪ್ ವೇಳೆಗೆ ರೋಹಿತ್ ಹಾಗೂ ವಿರಾಟ್ 35 ಹಾಗೂ 34 ವರ್ಷಕ್ಕೆ ತಲುಪುತ್ತಾರೆ. ಹಾಗಾಗಿ ರೋಹಿತ್ ಭಾರತಕ್ಕೆ ದೀರ್ಘಾವದಿ ನಾಯಕನಾಗುವುದು ಕಷ್ಟ. ಹಾಗಾಗಿ ರೋಹಿತ್ ಬದಲು ಬಿಸಿಸಿಐ ಭಾರತ ತಂಡದ ಭವಿಷ್ಯದ ದೃಷ್ಠಿಯಿಂದ ಮುಂದಿನ ಹತ್ತು ವರ್ಷಗಳ ಕಾಲ ಕ್ರಿಕೇಟ್ ಆಡುವಂತಹ ಆಟಗಾರನಿಗೆ ನಾಯಕನ ಪಟ್ಟ ನೀಡಬೇಕು. ಅಂತಹ ಆಟಗಾರ ಟೀಮ್ ಇಂಡಿಯಾದಲ್ಲಿದ್ದಾನೆ ಎಂದು ಹೇಳಿದರು.

ಆತ ಬೇರಾರೂ ಅಲ್ಲ ರಿಷಭ್ ಪಂತ್. ಸದ್ಯ ಪಂತ್ ಟೆಸ್ಟ್, ಏಕದಿನ, ಟಿ 20 ಹೀಗೆ ಮೂರು ಮಾದರಿಯಲ್ಲಿ ಭಾರತ ತಂಡದ ಖಾಯಂ ಸದಸ್ಯ.ಅದಲ್ಲದೇ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ತಂಡವನ್ನ ಪ್ಲೇ ಆಫ್ ವರೆಗೆ ತೆಗೆದುಕೊಂಡು ಬಂದರು. ಅದಲ್ಲದೇ ಬ್ಯಾಟಿಂಗ್ ನಲ್ಲಿಯೂ ಸಹ ಉಪಯುಕ್ತ ಕಾಣಿಕೆ ನೀಡಿದ್ದರು. ಹಾಗಾಗಿ ಪಂತ್ ಗೆ ಉತ್ತಮ ನಾಯಕನಾಗುವ ಸಾಮರ್ಥ್ಯವಿದೆ. ಹಾಗಾಗಿ ರೋಹಿತ್ ನಂತರ ಪಂತ್ ನಾಯಕನ ಸ್ಥಾನಕ್ಕೆ ಉತ್ತಮ ಆಯ್ಕೆ. ಈಗಿನಿಂದಲೇ ರಿಷಭ್ ಪಂತ್ ರನ್ನ ನಾಯಕನಾಗಿ ಬೆಳೆಸುವುದು ಉತ್ತಮ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav