ವಿರಾಟ್ ನಂತರ ಆರ್ಸಿಬಿ ನಾಯಕನ ಸ್ಥಾನಕ್ಕೆ ಫಿಕ್ಸ್ ಆದ ಇಬ್ಬರೂ ಆಟಗಾರರು, ಫೈನಲ್ ಯಾರ್ಯಾರು ಗೊತ್ತೇ?? ಇವರಿಬ್ಬರಲ್ಲಿ ನಿಮ್ಮ ಆಯ್ಕೆ ಯಾರು ಗೊತ್ತೇ??

ವಿರಾಟ್ ನಂತರ ಆರ್ಸಿಬಿ ನಾಯಕನ ಸ್ಥಾನಕ್ಕೆ ಫಿಕ್ಸ್ ಆದ ಇಬ್ಬರೂ ಆಟಗಾರರು, ಫೈನಲ್ ಯಾರ್ಯಾರು ಗೊತ್ತೇ?? ಇವರಿಬ್ಬರಲ್ಲಿ ನಿಮ್ಮ ಆಯ್ಕೆ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ಕ್ರಿಕೇಟ್ ನಲ್ಲಿ ಭಾರತ ತಂಡ ಹೊರಬಿದ್ದಿದೆ. ವಿಶ್ವಕಪ್ ನ ಫೈನಲ್ ಪಂದ್ಯ ನವೆಂಬರ್ 14 ಅಂದರೇ ಶುಕ್ರವಾರ ನಡೆಯಲಿದೆ. ನಂತರ ಮಂಗಳವಾರದಿಂದ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ದದ ಟಿ 20 ಸರಣಿ ಆಡಲಿದೆ. ಇನ್ನು ಡಿಸೆಂಬರ್ ನಲ್ಲಿ ಐಪಿಎಲ್ ನ ಆಟಗಾರರ ಮೆಗಾ ಹರಾಜು ನಡೆಯಲಿದೆ. ಸದ್ಯ ಭಾರತದಲ್ಲಿ ದೇಶಿಯ ಟಿ 20 ಟೂರ್ನಿಯಾದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ ನಡೆಯುತ್ತಿದೆ. ಇನ್ನು ಕನ್ನಡಿಗರ ಮೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಈ ಭಾರಿ ನಾಯಕನಿಗಾಗಿ ಹುಡುಕುತ್ತಿದೆ.

ಸದ್ಯ ಆರ್ಸಿಬಿ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಇನ್ನು ಮುಂದೆ ನಾಯಕನಾಗಿ ಮುಂದುವರೆಯುವುದಿಲ್ಲ ಎಂದು ಘೋಷಿಸಿದ್ದರು. ಹಾಗಾಗಿ ಆರ್ಸಿಬಿ ಹೊಸ ನಾಯಕನನ್ನ ಹುಡುಕುವ ಅನಿವಾರ್ಯತೆಗೆ ಸಿಲುಕಿದೆ.

ಒಂದು ಮೂಲದ ಪ್ರಕಾರ ಆರ್ಸಿಬಿ ತಂಡ ವಿದೇಶಿ ನಾಯಕನನ್ನ ನೇಮಿಸಲು ಚಿಂತನೆ ನಡೆಸಿದೆ ಎಂಬ ಸುದ್ದಿ ಇತ್ತು. ಆಪತ್ಭಾಂದವ ಎಬಿ ಡಿ ವಿಲಿಯರ್ಸ್ ಅಥವಾ ಗ್ಲೆನ್ ಮ್ಯಾಕ್ಸವೆಲ್ ಹಾಗೂ ಡೇವಿಡ್ ವಾರ್ನರ್ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿತ್ತು. ಆದರೇ ಈಗ ವಿದೇಶಿ ನಾಯಕನ ಬದಲು ದೇಶಿ ಆಟಗಾರನನ್ನೇ ನಾಯಕನನ್ನ ಮಾಡಲು ಆರ್ಸಿಬಿ ಮ್ಯಾನೇಜ್ ಮೆಂಟ್ ನಿರ್ಧರಿಸಿದೆ. ಭಾರತದ ಉದಯೋನ್ಮುಖ ಆಟಗಾರರಾದ ಕನ್ನಡಿಗ ಕೆ.ಎಲ್.ರಾಹುಲ್ ಅಥವಾ ಶ್ರೇಯಸ್ ಅಯ್ಯರ್ ಇವರಿಬ್ಬರಲ್ಲಿ ಒಬ್ಬರು ಆರ್ಸಿಬಿ ತಂಡದ ನೂತನ ನಾಯಕನಾಗುವುದು ಬಹುತೇಖ ಖಚಿತವಾಗಿದೆ‌.

ಕೆ.ಎಲ್.ರಾಹುಲ್ ಸದ್ಯ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದು, ಅವರನ್ನ ರಿಟೇನ್ ಮಾಡಿಕೊಳ್ಳುವುದಿಲ್ಲವೆಂದು ಪರೋಕ್ಷವಾಗಿ ಅವರ ಫ್ರಾಂಚೈಸಿ ತಿಳಿಸಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ರವರನ್ನು ಸಹ ಡೆಲ್ಲಿ ತಂಡ ರಿಟೇನ್ ಮಾಡುತ್ತಿಲ್ಲ. ಹಾಗಾಗಿ ಈ ಇಬ್ಬರೂ ದಿಗ್ಗಜ ಆಟಗಾರರು ಮೆಗಾ ಹರಾಜಿನಲ್ಲಿ ಲಭ್ಯವಾಗುವುದು ಗ್ಯಾರೆಂಟಿ.

ಹೀಗಾಗಿ ಕನ್ನಡಿಗ ಎಂಬ ಕಾರಣಕ್ಕೆ ಕೆ.ಎಲ್.ರಾಹುಲ್ ಮೇಲೆ ಕಣ್ಣಿಟ್ಟಿರುವ ಆರ್ಸಿಬಿ ಇವರನ್ನ ಹರಾಜಿನಲ್ಲಿ ಖರೀದಿಸಲು ತೀರ್ಮಾನಿಸಿದೆ. ಒಂದು ವೇಳೆ ರಾಹುಲ್ ರನ್ನ ಖರೀದಿಸಲು ವಿಫಲರಾದಾಗ, ಶ್ರೇಯಸ್ ಅಯ್ಯರ್ ರವರನ್ನ.ಖರೀದಿಸಿ, ಅವರನ್ನ ತಂಡದ ನೂತನ ನಾಯಕನ್ನಾಗಿ ಮಾಡಲು ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್ ನಿರ್ಧರಿಸಿದೆ ಎಂದು ಮೂಲಗಳು ಹೇಳುತ್ತಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.