ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ರಿಟೇನ್ ಮಾಡಿಕೊಳ್ಳುತ್ತಿರುವ ಆಟಗಾರರು ಯಾರ್ಯಾರು ಗೊತ್ತೇ?? ಇವರಲ್ಲಿ ನಿಮ್ಮ ಆಯ್ಕೆ ಯಾರು??

ನಮಸ್ಕಾರ ಸ್ನೇಹಿತರೇ ಐಪಿಎಲ್ ನಲ್ಲಿ ಈ ಭಾರಿ ಎರಡು ಹೊಸ ತಂಡಗಳು ಸೇರುತ್ತಿವೆ. ಮುಂದಿನ ಭಾರಿ ಐಪಿಎಲ್ ನಲ್ಲಿ ಒಟ್ಟು ಹತ್ತು ತಂಡಗಳು. ಬರೋಬ್ಬರಿ 74 ಲೀಗ್ ಮ್ಯಾಚ್ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗಿದೆ. ಸದ್ಯ ಪ್ರತಿ ತಂಡವೂ ನಾಲ್ವರು ಆಟಗಾರರನ್ನು ರಿಟೇನ್ ಮಾಡಿಕೊಳ್ಹಬಹುದು ಎಂದು ಬಿಸಿಸಿಐ ಸೂಚಿಸಿದೆ. ಅದರಂತೆ ಆರ್ಸಿಬಿ ತಂಡ ಯಾವ ಆಟಗಾರರನ್ನು ರಿಟೇನ್ ಮಾಡಿಕೊಳ್ಳಲಿದೆ ಎಂಬುದನ್ನ ನೋಡೋಣ ಬನ್ನಿ.

1.ವಿರಾಟ್ ಕೊಹ್ಲಿ – ಆರ್ಸಿಬಿ ತಂಡದ ನಾಯಕತ್ವ ತ್ಯಜಿಸಿದರೂ, ವಿರಾಟ್ ಕೊಹ್ಲಿ ಆರ್ಸಿಬಿ ತಂಡದಲ್ಲಿ ಮುಂದುವರೆಯುವುದು ಪಕ್ಕಾ ಆಗಿದೆ. ಹೀಗಾಗಿ ಆರ್ಸಿಬಿ ತಂಡ ವಿರಾಟ್ ಕೊಹ್ಲಿಯವರನ್ನ ರಿಟೇನ್ ಮಾಡಿಕೊಳ್ಳುತ್ತದೆ. ಆರ್ಸಿಬಿ ತಂಡ ವಿರಾಟ್ ಗಾಗಿ ಬರೋಬ್ಬರಿ 17 ಕೋಟಿ ರೂಪಾಯಿ ನೀಡಲಿದೆಯಂತೆ.

2.ದೇವದತ್ ಪಡಿಕ್ಕಲ್ – 2020 ಆರ್ಸಿಬಿ ತಂಡದ ಪರ ಪದಾರ್ಪಣೆ ಮಾಡಿದ ಪಡಿಕ್ಕಲ್ ಒಬ್ಬ ಭರವಸೆಯ ಬ್ಯಾಟ್ಸಮನ್ ಆಗಿ ರೂಪುಗೊಂಡಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದ ಪರ ಪದಾರ್ಪಣೆ ಸಹ ಮಾಡಿದರು. ಹೀಗಾಗಿ ದೇವದತ್ ಪಡಿಕ್ಕಲ್ ರನ್ನ ರಿಟೇನ್ ಮಾಡಿಕೊಳ್ಳುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

3.ಎಬಿ ಡಿ ವಿಲಿಯರ್ಸ್ – ಆರ್ಸಿಬಿ ತಂಡದ ಆಪತ್ಭಾಂದವ ಎಂದೇ ಕರೆಸಿಕೊಳ್ಳುತ್ತಿರುವ ‌ಎಬಿಡಿಯನ್ನು ಸಹ ಆರ್ಸಿಬಿ ತಂಡ ರಿಟೇನ್ ಮಾಡಿಕೊಳ್ಳಲಿದೆ. ವಿರಾಟ್ ಗಿಂತ ಎಬಿಡಿ ಮೇಲೆ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಅಭಿಮಾನಿಗಳಾಗಿದ್ದಾರೆ. ಹಾಗಾಗಿ ಎಬಿಡಿಯಿಲ್ಲದ ಆರ್ಸಿಬಿಯನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಎಬಿಡಿ ರಿಟೇನ್ ಆಗುತ್ತಾರೆ.

4.ಯುಜವೇಂದ್ರ ಚಾಹಲ್ ಅಥವಾ ಹರ್ಷಲ್ ಪಟೇಲ್ – ಈ ಆಯ್ಕೆಯಲ್ಲಿ ಆರ್ಸಿಬಿಗೆ ದ್ವಂದ್ವವಿದ್ದು ಇಬ್ಬರಲ್ಲಿ ಯಾರನ್ನೂ ರಿಟೇನ್ ಮಾಡುವುದು ಎಂಬ ಗೊಂದಲದಲ್ಲಿದ್ದಾರೆ. ಇಬ್ಬರೂ ಮ್ಯಾಚ್ ವಿನ್ನರ್ ಬೌಲರ್ ಗಳಾಗಿದ್ದಾರೆ. ಹಾಗಾಗಿ ಇಬ್ಬರಲ್ಲಿ ಯಾರನ್ನ ರಿಟೇನ್ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿದ್ದಾರೆ. ಇಬ್ಬರೂ ಆರ್ಸಿಬಿ ಬೌಲಿಂಗ್ ಗೆ ಅತಿ ಹೆಚ್ಚು ಶಕ್ತಿ ನೀಡಲಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav