ತಾನೊಬ್ಬ ದೊಡ್ಡಮನೆ ಮಗನಾಗಿದ್ದರೂ ಕೊನೆಯ ಸಂದರ್ಶನದಲ್ಲಿ ಸುದೀಪ್ ದರ್ಶನ್ ಹಾಗೂ ಯಶ್ ರವರ ಬಗ್ಗೆ ಪುನೀತ್ ಹೇಳಿರುವುದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೇವಲ ನಟನಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿ ಕೂಡ ಎಲ್ಲರಿಗೂ ಇಷ್ಟವಾಗಿದ್ದರು. ಹೀಗಾಗಿಯೇ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಯ ವರೆಗೂ ಕೂಡ ಎಲ್ಲರಿಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಕನ್ನಡ ಚಿತ್ರರಂಗದ ದೇವರು ಎಂದೇ ಖ್ಯಾತರಾಗಿರುವ ಅಣ್ಣಾವ್ರ ಮಗನಾಗಿದ್ದರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಂದಿಗೂ ಕೂಡ ಸರಳತೆಯನ್ನು ಬಿಟ್ಟವರಲ್ಲ.

ಅಣ್ಣಾವ್ರ ಮಗ ಎಂಬ ಹಮ್ಮು-ಬಿಮ್ಮುಗಳನ್ನು ಎಂದಿಗೂ ತೋರಿಸಿದವರಲ್ಲ. ಸಾಮಾನ್ಯರಲ್ಲಿ ಅತಿಸಾಮಾನ್ಯ ರಾಗಿ ಎಲ್ಲರಲ್ಲೂ ಪ್ರೀತಿಯನ್ನು ಹಂಚಿದರು. ಅದಕ್ಕಾಗಿಯೇ ಕನ್ನಡ ಪ್ರೇಕ್ಷಕರಿಗೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಕೂಡ ಪವರ್ಸ್ಟಾರ್ ನಮ್ಮ ನೆಚ್ಚಿನ ಹೀರೋ ಎಂದು ಹೇಳುವುದು. ಆದರೆ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇಲ್ಲ ಎಂಬುದು ಎಲ್ಲರ ದುಃಖಕ್ಕೆ ಕಾರಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಿತ್ರರಂಗದಲ್ಲಿ ಕೂಡ ಎಲ್ಲರ ಸ್ನೇಹಿತರಾಗಿದ್ದರು. ಯಾರೊಂದಿಗೂ ಕೂಡ ಯಾವ ಸುದ್ದಿಯನ್ನು ಸಿಲುಕಿ ಕೊಂಡವರಲ್ಲ ನಮ್ಮ ಅಪ್ಪು. ಎಲ್ಲರೊಂದಿಗೆ ಸ್ನೇಹ ಸೌಹಾರ್ದತೆಯಿಂದ ಇದ್ದರು. ಇದಕ್ಕಾಗಿ ಕನ್ನಡ ಚಿತ್ರರಂಗದ ಅಜಾತಶತ್ರು ಎಂಬುದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಚಿತ್ರರಂಗ ಕರೆದಿತ್ತು. ಇನ್ನು ತಮ್ಮ ಕೊನೆಯ ಸಂದರ್ಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸುದೀಪ್ ದರ್ಶನ್ ಹಾಗೂ ಯಶ್ ಕುರಿತಂತೆ ಏನು ಹೇಳಿದ್ದಾರೆ ಎಂಬುದರ ಕುರಿತಂತೆ ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮುಂದಿನ ಚಿತ್ರಗಳ ಬಗ್ಗೆ ಹೇಳುತ್ತಾ ಈ ಮೂರು ನಟರ ಕುರಿತಂತೆ ಹೇಳಿದ್ದಾರೆ. ಮೊದಲಿಗೆ ದರ್ಶನ್ ರವರ ಬಗ್ಗೆ ನಾನು ದರ್ಶನ್ ಚಿಕ್ಕಂದಿನಿಂದಲೂ ಕೂಡ ಪರಸ್ಪರ ಪರಿಚಿತರಾಗಿದ್ದೇವೆ. ಇಬ್ಬರೂ ಕೂಡ ಒಟ್ಟಿಗೆ ಬೆಳೆದುಕೊಂಡು ಬಂದಿದ್ದೇವೆ. ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿ ಜೊತೆಯಾಗಿ ಸಿನಿಮಾ ಮಾಡುತ್ತೇವೆ ಎಂದಿದ್ದರು.

ಇನ್ನು ಸುದೀಪ್ ರವರ ಕುರಿತಂತೆ ಸುದೀಪ್ ನಾನು ಒಳ್ಳೆಯ ಗೆಳೆಯರು ತಿಂಗಳಿಗೆ ಒಮ್ಮೆಯಾದರೂ ಕೂಡ ಸಿಗುತ್ತವೆ. ಸುದೀಪ್ ಇಸ್ ಮೈ ಬೆಸ್ಟ್ ಫ್ರೆಂಡ್ ಎಂದಿದ್ದಾರೆ ನಮ್ಮ ಅಪ್ಪು. ಇನ್ನು ಯಶ್ ರವರ ಕುರಿತಂತೆ, ನಮ್ಮ ಕನ್ನಡ ಚಿತ್ರರಂಗವನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋದಂತಹ ನಟ ಯಶ್. ಅವರಿಗೆ ನಾವೆಲ್ಲರೂ ಸೇರಿ ಬೆಂಬಲವನ್ನು ನೀಡಬೇಕು ಅವರಿಗೆ ತುಂಬಾನೇ ಮುಂದಾಲೋಚನೆ ಇದೆ ಎಂದು ಹೇಳಿದ್ದಾರೆ.

ಈ ಮಾತುಗಳನ್ನು ಕೇಳಿದರೆ ಸಾಕು ಅಪ್ಪು ಅವರ ಮುಗ್ಧ ವ್ಯಕ್ತಿತ್ವದ ಪರಿಚಯ ನಮಗಾಗುತ್ತದೆ. ಯಾರಿಗೂ ಕೂಡ ಕೆಟ್ಟದ್ದನ್ನು ಮಾತನಾಡಿದ ಕೆಟ್ಟದ್ದನ್ನು ಬಯಸದ ಬಂಗಾರದ ವ್ಯಕ್ತಿತ್ವ ನಮ್ಮ ಅಪ್ಪು ಅವರದು. ಆದರ ಅವರನ್ನು ಕಳೆದುಕೊಂಡಿರುವ ಕನ್ನಡಿಗರಾದ ನಮ್ಮ ದೌರ್ಭಾಗ್ಯ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Post Author: Ravi Yadav