ನೇರವಾಗಿ ಅಪ್ಪನನ್ನು ನೋಡಲು ಕಂಠೀರವ ಸ್ಟುಡಿಯೋ ಗೆ ಬರದೆ ದೃತಿ ಏರ್ಪೋರ್ಟ್ ನಿಂದ ಮನೆಗೆ ಹೋಗಿ ಬಂದಿದ್ದು ಯಾಕೆ ಗೊತ್ತಾ?

ನೇರವಾಗಿ ಅಪ್ಪನನ್ನು ನೋಡಲು ಕಂಠೀರವ ಸ್ಟುಡಿಯೋ ಗೆ ಬರದೆ ದೃತಿ ಏರ್ಪೋರ್ಟ್ ನಿಂದ ಮನೆಗೆ ಹೋಗಿ ಬಂದಿದ್ದು ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಆಗಲಿ 12 ದಿನಗಳು ಕಳೆದಿದ್ದಾವೆ. ಕನ್ನಡ ಚಿತ್ರರಂಗದ ಕಳಸದಂತಿದ್ದ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂಬ ಮಾತನ್ನು ಇಂದಿಗೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ. ಆ ನಗು ಮುಖವನ್ನು ಇಂದಿಗೂ ಮರೆಯಲು ಮನಸ್ಸು ಒಪ್ಪುತ್ತಿಲ್ಲ. ಸದಾ ಹಸನ್ಮುಖಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಯಾರೊಂದಿಗೂ ಕೂಡ ಕೋಪದಿಂದ ವರ್ತಿಸಿದವರಲ್ಲ.

ಆದರೆ ಈಗ ಅವರ ಮಗುವಿನಂತಹ ನಗುವನ್ನು ಶಾಶ್ವತವಾಗಿ ನಮಗೆ ಕಾಣಲು ಸಿಗದಂತೆ ಆಗಿರುವುದೇ ದುಖಃಕರ ವಿಷಯ. ಅಕ್ಟೋಬರ್ 29ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಜಿಮ್ ನಲ್ಲಿ ದೈಹಿಕ ಕಸರತ್ತು ಮಾಡುತ್ತಿದ್ದ ಸಂದರ್ಭದಲ್ಲಿ ಸುಸ್ತು ಬಂದು ಫ್ಯಾಮಿಲಿ ಡಾಕ್ಟರ್ ಆಸ್ಪತ್ರೆಗೆ ಕರೆತಂದಾಗ ಅವರಿಗೆ ಹೃದಯದಲ್ಲಿ ಸಮಸ್ಯೆ ಇರುವುದು ತಿಳಿದು ಬಂದಿದೆ. ಹೀಗಾಗಿ ವಿಕ್ರಂ ಆಸ್ಪತ್ರೆಗೆ ಕರೆತರಲು ಪ್ರಯತ್ನ ಪಟ್ಟಾಗ ಮಾರ್ಗ ಮಧ್ಯದಲ್ಲಿ ಅಪ್ಪು ರವರು ಅಸುನೀಗಿದ್ದಾರೆ. ಕೇವಲ 46ನೇ ವಯಸ್ಸಿಗೆ ಅಪ್ಪು ಅವರನ್ನು ಕಳೆದುಕೊಂಡಿದ್ದೇವೆ ಎಂದರೆ ನಂಬಲು ಕೂಡ ಸಾಧ್ಯವಾಗುತ್ತಿಲ್ಲ.

ಇದರಿಂದಾಗಿ ಪತ್ನಿ ಅಶ್ವಿನಿ ಸಹೋದರರು ಕುಟುಂಬಸ್ಥರು ಮಾತ್ರವಲ್ಲದೆ ಇಡೀ ಭಾರತವೇ ಅವರಿಗಾಗಿ ಕಂಬನಿ ಮಿಡಿದಿದೆ. ಬದುಕಿದಷ್ಟು ದಿನ ಪರೋಪಕಾರಿಯಾಗಿ ಬದುಕಿದ್ದವರು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಹೀಗಾಗಿ ಅವರ ಕೊನೆಯ ದರ್ಶನವನ್ನು ಪಡೆಯಲು 25 ಲಕ್ಷಕ್ಕೂ ಅಧಿಕ ಜನರು ಕಂಠೀರವ ಸ್ಟೇಡಿಯಂಗೆ ಪ್ರವಾಹದಂತೆ ಬಂದಿದ್ದರು. ಗೋಶಾಲೆ ಉಚಿತ ಶಾಲೆ ಅನಾಥಾಶ್ರಮ ವೃದ್ಧಾಶ್ರಮ 1800ಕ್ಕೂ ಅಧಿಕ ಮಕ್ಕಳ ಉಚಿತ ಶಿಕ್ಷಣ ಹೀಗೆ ಆಡುಮುಟ್ಟದ ಸೊಪ್ಪಿಲ್ಲ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡದ ಒಳ್ಳೆಯ ಕೆಲಸಗಳಿಲ್ಲ ಎಂಬಂತಿತ್ತು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ದೊಡ್ಡ ಮಗಳು ದೃತಿ ತಂದೆಯ ಮರಣದ ವಾರ್ತೆಯನ್ನು ಕೇಳಿ ಅಮೇರಿಕಾದ ನ್ಯೂಯಾರ್ಕಿನಿಂದ ಓಡೋಡಿ ಬಂದಿದ್ದರು. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರಥಮ ಪುತ್ರಿ ದೃತಿ ಅವರು ನ್ಯೂಯಾರ್ಕ್ ನಿಂದ ತನ್ನ ತಂದೆಯನ್ನು ಕೊನೆಯ ಬಾರಿ ನೋಡಲು 22 ಗಂಟೆಗಳ ವಿಮಾನದ ಪ್ರಯಾಣದಲ್ಲಿ ಒಬ್ಬಂಟಿಯಾಗಿ ಓಡೋಡಿ ಬಂದಿದ್ದರು.

ಈ ಸಂದರ್ಭದಲ್ಲಿ ದೃತಿ ಅವರು ಯಾಕೆ ಸೀದಾ ಅಪ್ಪನನ್ನು ನೋಡಲು ಬರದೆ ಮನೆಗೆ ಹೋಗಿ ಬಂದಿದ್ದರು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪ್ರಶ್ನೆಗಳು ಎದ್ದಿವೆ‌. ಅದಕ್ಕೆ ಇಂದು ಉತ್ತರವನ್ನು ನೀಡಲು ಸಿದ್ಧರಾಗಿದ್ದೇವೆ. ಹೌದು ಸ್ವತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಆಗಿರುವ ಅಶ್ವಿನಿ ಅವರೇ ಮಗಳನ್ನು ಮನೆಗೆ ಕರೆದುಕೊಂಡು ಹೋಗಿ ಸ್ವಲ್ಪ ಸುಧಾರಿಸಿಕೊಂಡ ಬಳಿಕವೇ ಕಂಠೀರವ ಕ್ರೀಡಾಂಗಣಕ್ಕೆ ಕರೆತರಲು ತಮ್ಮ ಕುಟುಂಬಸ್ಥರಿಗೆ ಸೂಚಿಸಿದ್ದರು. ಹೀಗಾಗಿಯೇ ದೃತಿ ಅವರನ್ನು ಮೊದಲಿಗೆ ಮನೆಗೆ ಕರೆದುಕೊಂಡು ಹೋಗಿ ನಂತರ ಸ್ಟೇಡಿಯಂಗೆ ಅಪ್ಪನ ಕೊನೆಯ ದರ್ಶನವನ್ನು ಮಾಡಲು ಕರೆ ತರಲಾಯಿತು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.