ಆತ್ಮನಿರ್ಭರ್ ಭಾರತದದ ಅಡಿಯಲ್ಲಿ ಮಹತ್ವದ ಮೈಲಿಗಲ್ಲು, ಸೇನೆಗೆ ಬಾರಿ ಶಕ್ತಿ ತುಂಬಿದ ಕೇಂದ್ರ. ಬದಲಾಗುತ್ತಿದೆ ಭಾರತದ ಮಿಲಿಟರಿ ಆಯಾಮ.

ನಮಸ್ಕಾರ ಸ್ನೇಹಿತರೇ ಭಾರತ ಜಗತ್ತಿನ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮತೊಡಗಿದೆ. ಮೊದಮೊದಲು ಭಾರತ ತನ್ನ ರಕ್ಷಣಾ ವ್ಯವಸ್ಥೆಗೆ ಅಗತ್ಯವಾಗಿದ್ದ ಹಲವಾರು ಶಸ್ತ್ರಾಸ್ತಗಳನ್ನ ಇಷ್ಟು ವರ್ಷಗಳ ಕಾಲ ಆಮದು ಮಾಡಿಕೊಳ್ಳುತ್ತಿತ್ತು. ಆದರೇ ಕೋರೋನಾ ನಂತರ ಇತ್ತಿಚೇಗೆ ಮೇಕ್ ಇನ್ ಆಂಡಿಯಾ ಹಾಗೂ ಆತ್ಮನಿರ್ಭರ್ ಭಾರತ್ ಎಂಬ ಯೋಜನೆಯಡಿ ತನಗೆ ಬೇಕಾದ ಸಾಮಗ್ರಿಗಳನ್ನ ತಯಾರಿಸಿಕೊಳ್ಳುತ್ತಿದೆ.

ಇನ್ನು ಈ ಮೇಕ್ ಇನ್ ಇಂಡಿಯಾ ಯೋಜನೆಯಡಿ ಬರೋಬ್ಬರಿ 7965 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳನ್ನು ಹಾಗೂ ಸುಸಜ್ಜಿತ ಹೆಲಿಕಾಪ್ಟರ್ ಗಳನ್ನು ಸಹ ಖರೀದಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಿದೆ. ಅದಲ್ಲದೇ ಭಾರತದ ಹೆಮ್ಮೆಯ ಪ್ರತೀಕವಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಯಾನೆ ಹೆಚ್.ಎ.ಎಲ್ ನಿಂದ ಹನ್ನೇರೆಡು ಲೈಟ್ ಹೆಲಿಕಾಪ್ಟರ್ ಗಳನ್ನು ಖರೀದಿಸಲು ನಿರ್ಧರಿಸಿದೆ.

ರಕ್ಷಣಾ ಉತ್ಪನ್ನಗಳ ಖರೀದಿಗೆಂದೇ ರಚಿಸಲಾಗಿರುವ ರಕ್ಷಣಾ ಸ್ವಾಧೀನ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ. ಇನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಿಂದ ನೌಕಾದಳದ ಸೇವೆಗೋಸ್ಕರ ನೆವಲ್ ಗನ್ ಫೈರ್ ಕಂಟ್ರೋಲ್ ಸಿಸ್ಟಂ ಖರೀದಿಗೂ ಹಸಿರು ನಿಶಾನೆ ದೊರೆತಿದೆ. ಇದು ನೌಕಾದಳದಲ್ಲಿ ನೌಕೆಗಳ ರಕ್ಷಣೆ ಹಾಗೂ ಖರಾರುವಕ್ಕು ಟ್ರಾಕಿಂಗ್ ಗೆ ಸಹಕಾರಿಯಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿಯೇ ವಿನ್ಯಾಸಗೊಂಡ, ತಯಾರಿಗೊಳಿಸಿದ, ಮತ್ತು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಿರುವ ಮಿಲಿಟರಿ ಉಪಕರಣಗಳ ಖರೀದಿಯೇ ನಮ್ಮ ಮುಖ್ಯ ಉದ್ದೇಶ ಎಂದು ರಕ್ಷಣಾ ಸ್ವಾಧೀನ ಮಂಡಳಿಯ ಅಧ್ಯಕ್ಷ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.