5 ತಿಂಗಳ ನಂತರ ಬದಲಾಗಲಿದೆ ಶನಿಯ ವಕ್ರ ದೃಷ್ಟಿ, ಮೂರು ರಾಶಿಯವರಾಗಿ ದೋಷದಿಂದ ಮುಕ್ತಿ, ಯಾರ್ಯಾರಿಗೆ ಗೊತ್ತೇ??

5 ತಿಂಗಳ ನಂತರ ಬದಲಾಗಲಿದೆ ಶನಿಯ ವಕ್ರ ದೃಷ್ಟಿ, ಮೂರು ರಾಶಿಯವರಾಗಿ ದೋಷದಿಂದ ಮುಕ್ತಿ, ಯಾರ್ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಮೊದಲಿನಿಂದಲೂ ಕೂಡ ಭಾರತ ಸಂಸ್ಕೃತಿಯನ್ನು ಅನುಸರಿಸುತ್ತಿರುವವರು ಜ್ಯೋತಿಷ್ಯ ಶಾಸ್ತ್ರವನ್ನು ನಂಬಿಕೊಂಡು ಬಂದಿದ್ದೇವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಕಾಟದ ಕುರಿತಂತೆ ಕೂಡ ಉಲ್ಲೇಖವಿದೆ. ಇನ್ನು ಒಮ್ಮೆ ಶನಿ ಹೆಗಲೇರಿ ಕುಳಿತು ಕೊಂಡರೆ ಏಳೂವರೆ ವರ್ಷ ಇರುತ್ತಾನೆ ಎಂಬ ಮಾತು ಕೇವಲ ಬಾಯಿ ಮಾತಿಗಷ್ಟೇ ಮಾತ್ರವಲ್ಲದೇ ನಿಜ ಜೀವನದಲ್ಲಿ ಕೂಡ ಜ್ಯೋತಿಷ್ಯ ದಲ್ಲಿ ಕೂಡ ಸಾಬೀತು ಆಗಿರುವ ಮಾತು.

ಇನ್ನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಶನಿ ಪ್ರವೇಶಿಸುವಾಗ ಎರೂಡವರೆ ವರ್ಷಗಳ ಕಾಲ ಸಮಯವನ್ನು ಕಳೆಯುತ್ತದೆ. ಹೀಗಾಗಿ ಸಾಡೇ ಸಾತಿ ಶನಿ ಎನ್ನುವುದು 3 ಚರಣಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ಈ ಸಮಯದಲ್ಲಿ 5 ರಾಶಿಯಲ್ಲಿ ಶನಿ ಕಾಟ ನಡೆದರೆ ಇನ್ನು ಅದರಲ್ಲಿ 5 ತಿಂಗಳ ನಂತರ 3 ರಾಶಿಯಯವರಿಗೆ ಶನಿಯ ಪ್ರಕೋಪದಿಂದ ಮುಕ್ತಿ ದೊರಕಲಿದೆ. ಹಾಗಿದ್ದರೆ ಮೊದಲು ಶನಿ ಪರಮಾತ್ಮನ ವಕ್ರದೃಷ್ಟಿ ಯಾರ ಮೇಲಿದೆ ನೋಡೋಣ.

ಸದ್ಯಕ್ಕೆ ಶನಿಮಹಾತ್ಮನ ಕಣ್ಣು ಮಕರ ರಾಶಿಯ ಮೇಲಿದೆ. ಇನ್ನು ಈಗ ಮಕರ ಧನು ಹಾಗೂ ಕುಂಭ ರಾಶಿಗಳ ಮೇಲೆ ಶನಿ ಪರಮಾತ್ಮನ ಏಳೂವರೆ ವರ್ಷಗಳ ದೋಷ ನಡೆಯುತ್ತಿದೆ. ಪ್ರತಿಯೊಂದು ರಾಶಿಯಿಂದ ಶನಿಯ ದೃಷ್ಟಿ ಹೋಗಲು ಏಳೂವರೆ ವರ್ಷಗಳಾಗಲು ಕಾರಣ ಕೂಡ ಇದು ಎರಡಕವರೆ ವರ್ಷಗಳ 3ಚರಣಗಳು.ಹೀಗಾಗಿ ಇದೀ ಮುಗಿಯಲು ಏಳೂವರೆ ವರ್ಷಗಳು ಹಿಡಿಯುತ್ತದೆ. ಸದ್ಯಕ್ಕೆ ಧನು ರಾಶಿಯವರ ಮೇಲೆ ಶನಿಯ ಕೊನೆಯ ಚರಣ ನಡೆಯುತ್ತಿದೆ‌.

2022 ರ ಏಪ್ರಿಲ್ 29 ರ ಮೇಲೆ ಶನಿಯ ದೋಷ ಈ ರಾಶಿಯವರಿಂದ ಇಳಿದು ಹೋಗುತ್ತದೆ. ಮಕರ ರಾಶಿಯಯವರ ಮೇಲೆ ಶನಿಯ ಎರಡನೇ ಚರಣ ನಡೆಯುತ್ತಿದೆ. ಹೀಗಾಗಿ ಈ ರಾಶಿಯವರಿಗೆ ಶನಿ ಪ್ರಕೋಪ ಇಳಿಯಲು ಇನ್ನೂ ಮೂರು ವರ್ಷಗಳ ಕಾಲ ಕಾಯಬೇಕು. ಮಿಥುನ ಹಾಗೂ ತುಲಾ ರಾಶಿಯವರ ಮೇಲೆ ಶನಿ ದೇವರ ಕೊನೆಯ ಎರಡೂವರೆ ವರ್ಷದ ದೋಷದ ಸಮಯ ನಡೆಯುತ್ತಿದೆ.

ಇನ್ನು ಯಾವೆಲ್ಲ 3 ರಾಶಿಯವರಿಗೆ ಶನಿ ದೇವರಿಂದ ಮುಕ್ತಿ ಸಿಗಲಿದೆ ಎಂಬುದನ್ನು ಕೂಡ ತಿಳಿಯೋಣ. ಈ ಸಾಲಿನಲ್ಲಿ ಶನಿದೇವರ ಎರಡೂವರೆ ವರ್ಷಗಳ ಕೊನೆಯ ಚರಣವನ್ನು ಅನುಭವಿಸುತ್ತಿರುವ ಎರಡು ರಾಶಿಗಳು ಕೂಡ ಶಾಮೀಲಾಗಿದೆ. ಧನು ರಾಶಿಯವರ ಶನಿ ದೋಷದ ಕೊನೆಯ ಚರಣ ನಡೆಯುತ್ತಿರುವುದರಿಂದ ಇದೇ ಏಪ್ರಿಲ್ 29 2022 ರ ಸಮಯಕ್ಕೆ ಶನಿದೇವರು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಲ್ಲಿಸುವ ಸಂದರ್ಭದಲ್ಲಿ ಇವರ ದೋಷ ಮುಕ್ತಾಯವಾಗುತ್ತದೆ.

ಇದಾದ ಐದು ತಿಂಗಳ ನಂತರ ಶನಿದೇವರ ದೋಷದ ಮೂರನೇ ಚರಣವನ್ನು ಅನುಭವಿಸುತ್ತಿರುವ ತುಲಾ ಹಾಗೂ ಮಿಥುನ ರಾಶಿಯವರಿಗೆ ಕೂಡ ಶನಿದೇವರ ವಕ್ರದೃಷ್ಟಿಯಿಂದ ಮುಕ್ತಿ ಸಿಗಲಿದೆ. ಬದುಕಿನಲ್ಲಿ ಹಾಗೂ ವ್ಯಾಪಾರದಲ್ಲಿ ಎಲ್ಲಾ ಕಡೆಯಲ್ಲೂ ಕೂಡ ಕೈ ಹಾಕಿದಲ್ಲಿ ಲಾಭ ಸಿಗಲಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.