ಪೆಟ್ರೋಲ್, ಡಿಸೇಲ್ ಬೆಲೆ ಇಳಿಸಿದ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಮೋದಿ, ಏನು ಗೊತ್ತಾ??

ಪೆಟ್ರೋಲ್, ಡಿಸೇಲ್ ಬೆಲೆ ಇಳಿಸಿದ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಮೋದಿ, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ದೇಶದಲ್ಲಿ ಸದ್ಯ ಆರ್ಥಿಕ ಸಂಕಷ್ಟ ಎದುರಾಗಿದೆ. ಕೋರೋನಾದಿಂದ ಶುರುವಾದ ಆರ್ಥಿಕ ಕುಸಿತ ಇದುವರೆಗೂ ನಿಂತಿಲ್ಲ. ಮೊದಲೇ ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾದ ಕಾರಣ, ಹಣದುಬ್ಬರ ಸಹ ಏರುಪೇರಾಗುತ್ತಿತ್ತು. ಇನ್ನು ಹಣದ ಅಡಚಣೆ ಕಾರಣ ಮಾರುಕಟ್ಟೆಯಲ್ಲಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಸಹ ಏರಿಕೆ ಆಗಿತ್ತು. ಇದರ ಜೊತೆ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲದ ಬೆಲೆ ಸಹ ವೀಪರೀತ ಅನ್ನುವಂತೆ ಏರಿ, ಜನರಿಗೆ ಬಹಳಷ್ಟು ಕಷ್ಟ ಆಗಿತ್ತು. ಕೋರೋನಾ ಮುನ್ನ ಒಂದು ಲೀಟರ್ ಪೆಟ್ರೋಲ್ 73 ರೂಪಾಯಿ ಇತ್ತು.

ನಂತರದ ದಿನಗಳಲ್ಲಿ ಪೆಟ್ರೋಲ್ ಬೆಲೆ ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ಎಂಬುವಂತೆ 111 ರೂಪಾಯಿ ತನಕ ಬಂದಿತ್ತು. ಇದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುವಂತೆ ಮಾಡಿತ್ತು. ಸರ್ಕಾರಗಳಿಗೆ ಜನ ಹಿಡಿ ಹಿಡಿ ಶಾಪ ಹಾಕಲು ಶುರು ಮಾಡಿದ್ದರು. ಆದರೇ ಜನರ ಸಂಕಷ್ಟ ಅರಿತ ಸರ್ಕಾರಗಳು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳಲ್ಲಿ ಕಳೆದ ವಾರ ಇಳಿಸಿದ್ದವು. ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ 100.58 ಪೈಸೆಗೆ ಇಳಿದಿದೆ.

ಇನ್ನು ಪೆಟ್ರೋಲ್,ಡಿಸೇಲ್ ಮೇಲೆ ಬೆಲೆ ಇಳಿಸಿದ್ದ ಸರ್ಕಾರ ಈಗ ಗೃಹಿಣಿಯರ ಚಿಂತೆಗೆ ಕಾರಣವಾಗಿದ್ದ ಅಡುಗೆ ಎಣ್ಣೆಯ ಬೆಲೆಯನ್ನು ಸಹ ಇಳಿಸಿದೆ. ಅಡುಗೆ ಎಣ್ಣೆ ಬೆಲೆಗಳೀ ಸಹ ವಿಪರೀತ ಏರಿ, ಜನ ಸಂಕಷ್ಟಪಡುವಂತಾಗಿತ್ತು. ಆದರೇ ಈ ಬಗ್ಗೆ ಕ್ರಮ ಕೈಗೊಂಡಿರುವ ಮೋದಿ ಸರ್ಕಾರ, ಅಡುಗೆ ಎಣ್ಣೆ ಸೆಸ್ ಹಾಗೂ ಕೃಷಿ ಸೆಸ್ ನ್ನು ಇಳಿಸಿದೆ. ಈ ಮೂಲಕ ಪ್ರತಿ ಲೀಟರ್ ಅಡುಗೆ ಎಣ್ಣೆಯ ಬೆಲೆ ಮೇಲೆ ಇಪ್ಪತ್ತು ರೂಪಾಯಿ ಇಳಿಯಲಿದೆ ಎಂದು ಸಾರ್ವಜನಿಕಾ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.

ದೇಶದಲ್ಲಿ ಪ್ರಮುಖವಾಗಿ ಬಳಸಲಿರುವ ಅಡುಗೆ ಎಣ್ಣೆಗಳಾದ ಹಾಗೂ ಸೋಯಾಬಿನ್ ಎಣ್ಣೆಯ ಮೇಲೆ ಶೇಕಡಾ 2.5 ರಷ್ಟಿದ್ದ ತೆರಿಗೆಯನ್ನ ಶೂನ್ಯಕ್ಕೆ ಇಳಿಸಿದೆ. ಸೂರ್ಯಕಾಂತಿ ಎಣ್ಣೆ ಮೇಲಿದ್ದ ಶೇಕಡಾ 5 ರಷ್ಟು ತೆರಿಗೆಯನ್ನು ಶೇಕಡಾ 2.5 ಕ್ಕೆ ಇಳಿಸಿದೆ. ತಾಳೆ ಎಣ್ಣೆ ಮೇಲಿದ್ದ ಶೇಕಡಾ 20 ರಷ್ಟು ತೆರಿಗೆಯನ್ನು ಶೇಕಡಾ 7.5 ಕ್ಕೆ ಇಳಿಸಲಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಎಣ್ಣೆ ಬೆಲೆ ಗರಿಷ್ಠ 20 ರೂಪಾಯಿ ಇಳಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ‌