ನಾನು ಕೂಡ ಸಾಕಷ್ಟು ಕಷ್ಟದಲ್ಲಿದ್ದೆ ಆಗ ಕೈ ಹಿಡಿದದ್ದು ಕನ್ನಡಿಗ ಎಂದ ಸೆಹ್ವಾಗ್, ಆತ ಕನ್ನಡಿಗ ಯಾರು ಗೊತ್ತೇ??

ನಾನು ಕೂಡ ಸಾಕಷ್ಟು ಕಷ್ಟದಲ್ಲಿದ್ದೆ ಆಗ ಕೈ ಹಿಡಿದದ್ದು ಕನ್ನಡಿಗ ಎಂದ ಸೆಹ್ವಾಗ್, ಆತ ಕನ್ನಡಿಗ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ವೃತ್ತಿ ಜೀವನದಲ್ಲಿಯೂ ಒಳ್ಳೆಯ ದಿನಗಳು ಹಾಗೂ ಕೆಟ್ಟ ದಿನಗಳು ಅಂತ ಇರುತ್ತವೆ. ಅದೇ ರೀತಿ ಒಳ್ಳೆಯ ದಿನಗಳು ಮನಸ್ಸಿಗೆ ಖುಷಿ ನೀಡಿದರೇ, ಕೆಟ್ಟ ದಿನಗಳು ಜೀವನಕ್ಕೆ ಉತ್ತಮವಾದ ಅನುಭವ ನೀಡುತ್ತವೆ. ಈಗ ಭಾರತ ತಂಡದ ಮಾಜಿ ಆರಂಭಿಕ ಆಟಗಾರರಾದ ವಿರೇಂದ್ರ ಸೆಹ್ವಾಗ ತಮ್ಮ ವೃತ್ತಿ ಜೀವನದ ಕೆಟ್ಟ ದಿನಗಳ ಬಗ್ಗೆ ಮಾತನಾಡಿದ್ದಾರೆ. ಅದಲ್ಲದೇ ತಾವು ವೃತ್ತಿ ಜೀವನದ ಕಳಪೆ ಫಾರ್ಮ್ ನಲ್ಲಿ ಬಳಲುತ್ತಿದ್ದಾಗ ನನ್ನ ಕೈ ಹಿಡಿದಿದ್ದು ಈ ಕನ್ನಡಿಗ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಹೌದು ನಜಾಫಘಡ್ ದ ನವಾಬನಾಗಿದ್ದ ವಿರೇಂದ್ರ ಸೆಹ್ವಾಗ್ ಭಾರತ ತಂಡದ ಡ್ಯಾಶಿಂಗ್ ಓಪನರ್ ಆಗಿದ್ಜವರು. ಆದರೇ 2008 ರ ವೇಳೆಯಲ್ಲಿ ಸೆಹ್ವಾಗ್ ಸಂಪೂರ್ಣ ಲಯ ಕಳೆದುಕೊಂಡಿದ್ದರು. ರಣಜಿ ಟೂರ್ನಿಯಲ್ಲಿಯೂ ಸಹ ಸೆಹ್ವಾಗ್ ಕಳಪೆ ಫಾರ್ಮ್ ಮುಂದುವರೆದಿತ್ತು. ಆಗ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲು ರೆಡಿಯಾಗಿತ್ತು. ಎಲ್ಲರೂ ಭಾರತ ತಂಡದ ಆರಂಭಿಕರಾಗಿ ಗೌತಮ್ ಗಂಭೀರ್ ಮತ್ತು ಆಕಾಶ್ ಚೋಪ್ರಾ ಆಯ್ಕೆಯಾಗುತ್ತಾರೆ. ಅವರಿಗೆ ಮೀಸಲು ಆಟಗಾರರಾಗಿ ವಸೀಂ ಜಾಫರ್ ಹಾಗೂ ದಿನೇಶ್ ಕಾರ್ತಿಕ್ ಆಯ್ಕೆಯಾಗಬಹುದು ಎಂದು ಊಹಿಸಿದ್ದರು. ಆದರೇ ಆಗ ಸೆಹ್ವಾಗ್ ಕೈ ಹಿಡಿದ್ದಿದ್ದು, ಅಂದಿನ ಭಾರತ ತಂಡದ ಟೆಸ್ಟ್ ತಂಡದ ನಾಯಕ ಅನಿಲ್ ಕುಂಬ್ಳೆ. ಸೆಹ್ವಾಗ್ ರನ್ನ ಒತ್ತಾಸೆಯಿಂದ ಕುಂಬ್ಳೆ ತಂಡಕ್ಕೆ ಸೇರಿಸಿಕೊಂಡಿದ್ದರು. ನನಗೆ ಗಂಭೀರ್, ಚೋಪ್ರಾ, ಜಾಫರ್ 200 ಎಸೆತಗಳಲ್ಲಿ 100 ರನ್ ಗಳಿಸುತ್ತಾರೆ. ನನಗೆ ಅಂತ ಆರಂಭಿಕರ ಜೊತೆ 100 ಎಸೆತಗಳಲ್ಲಿ 200 ರನ್ ಗಳಿಸುವ ಆರಂಭಿಕನು ಬೇಕು. ಹಾಗಾಗಿ ಸೆಹ್ವಾಗ್ ಇರಲಿ ಎಂದು ಹೇಳಿದ್ದರಂತೆ. ಆದರೇ ನಡೆದ ಮೊದಲೆರೆಡು ಟೆಸ್ಟ್ ಪಂದ್ಯಗಳಲ್ಲಿ ಆಡಿಸಿರಲಿಲ್ಲ.

ಆದರೇ ಆಗ ಸೆಹ್ವಾಗ್ ಬಳಿ ಬಂದ ಕುಂಬ್ಳೆ, ಬಹಳಷ್ಟು ಕಾದಿದ್ದಿರಾ, ಸ್ವಲ್ಪ ತಾಳ್ಮೆ ಇರಲಿ ಎಂದು ಹೇಳಿದ್ದರು. ನಂತರ ನಡೆದ ಪರ್ತ್ ಟೆಸ್ಟ್ ನಲ್ಲಿ ಸೆಹ್ವಾಗ್ ಕಣಕ್ಕಿಳಿದಿದ್ದರು. ಎರಡು ಇನ್ನಿಂಗ್ಸ್ ನಲ್ಲಿ 40, 50 ರನ್ ಗಳಿಸಿದರೂ, ಸೆಹ್ವಾಗ್ ಉತ್ತಮ ಲಯದಲ್ಲಿದ್ದಂತೆ ಕಂಡರು. ಅದಲ್ಲದೇ ಬೌಲಿಂಗ್ ನಲ್ಲಿ ಎರಡು ವಿಕೇಟ್ ಸಹ ಪಡೆದು ಮಿಂಚಿದ್ದರು. ಅದಲ್ಲದೇ ಭಾರತ ಆ ಐತಿಹಾಸಿಕ ಟೆಸ್ಟ್ ಸಹ ಗೆದ್ದಿತ್ತು. ನಂತರ ನಡೆದ ಕೊನೆಯ ಅಡಿಲೇಡ್ ಟೆಸ್ಟ್ ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ್ದ ಸೆಹ್ವಾಗ್, ನಂತರದ ಏರಡನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿ, ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಹೀಗೆ ಕಳಪೆ ಫಾರ್ಮ್ ನಲ್ಲಿದ್ದ ಸೆಹ್ವಾಗ್, ಉತ್ತಮ ಫಾರ್ಮ್ ಗೆ ಮರಳಿದರು. ಹೀಗೆ ಸೆಹ್ವಾಗ್ರವರು, ಅನಿಲ್ ಕುಂಬ್ಳೆ ತಮ್ಮ ಮೇಲಿಟ್ಟ ನಂಬಿಕೆಯನ್ನ ಉಳಿಸಿಕೊಂಡರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.