ಇಡೀ ರಾಜ್ಯ ಪುನೀತ್ ರವರನ್ನು ಕಳೆದುಕೊಂಡಿರುವ ದುಃಖ ದಲ್ಲಿ ಇದ್ದರೇ, ಯಶ್ ಹಾಗೂ ಡಿ ಬಾಸ್ ಅಭಿಮಾನಿಗಳು ಮಾಡಿರುವುದೇನು ಗೊತ್ತೇ??

ಇಡೀ ರಾಜ್ಯ ಪುನೀತ್ ರವರನ್ನು ಕಳೆದುಕೊಂಡಿರುವ ದುಃಖ ದಲ್ಲಿ ಇದ್ದರೇ, ಯಶ್ ಹಾಗೂ ಡಿ ಬಾಸ್ ಅಭಿಮಾನಿಗಳು ಮಾಡಿರುವುದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಒಂದು ವಾರ ಕಳೆದು ಬಿಟ್ಟಿದೆ. ಕನ್ನಡ ಚಿತ್ರರಂಗದ ಧ್ರುವತಾರೆ ಯಾಗಿದ್ದ ಅಪ್ಪು ಅವರನ್ನು ಕಳೆದುಕೊಂಡು ಇನ್ನು ಕೂಡ ದುಃಖದಿಂದ ಹೊರಬರಲು ಯಾರಿಗೂ ಕೂಡ ಸಾಧ್ಯವಾಗುತ್ತಿಲ್ಲ. ತಮ್ಮ ಸಿನಿಮಾಗಳಲ್ಲೂ ಹಾಗು ತಮ್ಮ ನಿಜ ಜೀವನದಲ್ಲಿ ಕೂಡ ಸಮಾಜಕ್ಕೆ ಮಾದರಿಯಾಗಿದ್ದವರು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29ರಂದು ಬೆಳಿಗ್ಗೆ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಸುಸ್ತಾಗಿ ಆಸ್ಪತ್ರೆಗೆ ಕರೆತರುವ ವೇಳೆಯಲ್ಲಿ ಅಸುನೀಗಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಇನ್ನು ಇವರನ್ನು ಕಳೆದುಕೊಂಡು ಕೇವಲ ಕುಟುಂಬಸ್ಥರು ಮಾತ್ರವಲ್ಲದೆ ಕೋಟ್ಯಾಂತರ ಕನ್ನಡಿಗರು ಕೂಡ ದುಃಖತಪ್ತರಾಗಿ ದ್ದಾರೆ. ಯಾರೊಂದಿಗೂ ಕೂಡ ದ್ವೇಷವನ್ನು ಸಾಧಿಸದಂತಹ ಅಜಾತಶತ್ರು ಮನೋಭಾವದವರು ನಮ್ಮ ಅಪ್ಪು. ಅವರಿಗೆ ಹೀಗಾಯಿತಲ್ಲ ಎಂದು ಅಭಿಮಾನಿಗಳು ದೇವರನ್ನು ನಂಬುವುದನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಹೇಳಬಹುದಾಗಿದೆ.

ಇಂತಹ ಒಳ್ಳೆಯ ವ್ಯಕ್ತಿಗಳನ್ನು ಕರೆದು ಕೊಳ್ಳುತ್ತೀಯ ನಮ್ಮನ್ನಾದರೂ ಕರೆದುಕೊಳ್ಳು ಎಂಬುದಾಗಿ ಅಭಿಮಾನಿಗಳು ಗೋಗರೆದಿದ್ದಾರೆ. ಇನ್ನು ಈಗಾಗಲೇ ಮೊನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 5ನೇ ದಿನದ ಹಾಲುತುಪ್ಪ ಕಾರ್ಯಕ್ರಮ ಮುಗಿದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿಗೆ ನೋಡಲು ರಾಜ್ಯದ ಬೇರೆ ಬೇರೆ ಭಾಗಗಳಿಂದ 25 ಲಕ್ಷಕ್ಕೂ ಹೆಚ್ಚಿನ ಜನರು ಬಂದಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನವನ್ನು ಪಡೆಯಲು ಹಲವಾರು ಗಣ್ಯಾತಿಗಣ್ಯ ನಟರು ರಾಜಕೀಯ ನಾಯಕರು ಎಲ್ಲರೂ ಕೂಡ ಬಂದಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಹಾಗೂ ಯಶ್ ಅಭಿಮಾನಿಗಳು ನಡೆದುಕೊಂಡಿರುವ ರೀತಿ ಎಲ್ಲರೂ ಮೆಚ್ಚುವಂತೆ ಆಗಿದೆ. ಹಾಗಿದ್ದರೆ ಇದರ ಹಿಂದಿನ ಸಂಪೂರ್ಣ ವಿವರ ಏನು ಎಂಬುದನ್ನು ನಾನು ನಿಮಗೆ ವಿವರಿಸಿ ಹೇಳುತ್ತೇವೆ.

ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನ ಹೊಂದಿದ್ದು ಅಕ್ಟೋಬರ್ 29ರಂದು. ದರ್ಶನ್ ರವರ ಮಗ ವಿನೀಶ್ ರವರ ಜನ್ಮ ದಿನ ಅಕ್ಟೋಬರ್ 31ರಂದು ಹಾಗೂ ರಾಕಿಂಗ್ ಸ್ಟಾರ್ ಯಶ್ ರವರ ಮಗ ಯಥರ್ವ ಹುಟ್ಟಿದ್ದು ಅಕ್ಟೋಬರ್ 30ರಂದು. ಇಬ್ಬರು ಮಕ್ಕಳ ಜನ್ಮದಿನಾಚರಣೆಗೆ ಅವರ ತಂದೆಯರು ಸಾಕಷ್ಟು ತಯಾರಿಗಳನ್ನು ಕೂಡ ಮಾಡಿಕೊಂಡಿದ್ದರು. ಆದರೆ ಅಪ್ಪು ಅವರ ನಿಧನದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯನ್ನು ರದ್ದುಗೊಳಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ಇಬ್ಬರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ದರ್ಶನಕ್ಕೆ ಆಗಮಿಸಿದ್ದರು. ಇಬ್ಬರೂ ಕೂಡ ದೊಡ್ಮನೆ ಕುಟುಂಬವನ್ನು ಸಂತೈಸುವುದು ರಲ್ಲಿ ಕೂಡ ನಿರತರಾಗಿದ್ದರು. ಇದು ಇವರಿಬ್ಬರ ಕಾಳಜಿ ಹಾಗೂ ಗುಣವನ್ನು ಎತ್ತಿಹಿಡಿಯುತ್ತದೆ. ಇನ್ನು ಅವರ ಅಭಿಮಾನಿಗಳು ಕೂಡ ಈ ದುಃಖದ ಸಮಯದಲ್ಲಿ ಅವರಿಬ್ಬರಿಗೆ ಜನ್ಮದಿನದ ಶುಭಾಶಯಗಳನ್ನು ಕೂಡ ಹೇಳಿಲ್ಲ. ಈ ಮೂಲಕ ಅಪ್ಪುವಿನ ನಿಧನಕ್ಕೆ ಗೌರವನ್ನು ಸೂಚಿಸಿದ್ದಾರೆ ದರ್ಶನ್ ಹಾಗೂ ಯಶ್ ಅಭಿಮಾನಿಗಳು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.