ಯಾರಿಗೂ ತಿಳಿಯದಂತೆ ಮಾಸ್ಕ ಧರಿಸಿ ರೈತರ ವೇಷದಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ದಿಡೀರ್ ಎಂಟ್ರಿ ಕೊಟ್ಟ ಐಎಎಸ್ ಅಧಿಕಾರಿ. ಅಲ್ಲಿ ನಡೆದ್ದಡೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತದೇಶ ಮುಖ್ಯವಾಗಿ ರೈತಾಪಿ ವರ್ಗವನ್ನು ನಂಬಿಕೊಂಡಿರುವ ದೇಶ ಎಂದರೆ ಕಂಡಿತವಾಗಿಯೂ ತಪ್ಪಾಗಲಾರದು. ಹೀಗಾಗಿ ರೈತಾಪಿ ವರ್ಗಕ್ಕೆ ಯಾವುದೇ ಅನ್ಯಾಯ ಆಗದಂತೆ ನೋಡಿಕೊಳ್ಳುವುದು ಸರಕಾರಿ ಸಂಸ್ಥೆಗಳ ಹಾಗೂ ಅಧಿಕಾರಿಗಳ ಆದ್ಯ ಕರ್ತವ್ಯ ಆದರೆ ಅದು ಭಾರತದೇಶದಲ್ಲಿ ಕಡಿಮೆಯಾಗಿ ನಡೆಯುತ್ತಿದೆ.

ಹೌದು ಗೆಳೆಯ ರೈತ ರೈತ ಬೆಳೆಗಳಿಗೆ ಸರ್ಕಾರ ಸರಿಯಾದಂತಹ ಮೌಲ್ಯ ಕೊಟ್ಟರು ಕೂಡ ಅಲ್ಲಿರುವ ಮಧ್ಯವರ್ತಿಗಳು ರೈತರಿಗೆ ಮೊತ್ತವನ್ನು ಸಿಗಲು ಬಿಡುತ್ತಿಲ್ಲ. ಹೀಗಾಗಿಯೇ ಕೃಷಿಕಾರ್ಯ ಭಾರತದಲ್ಲಿ ದಿನೇ ದಿನೇ ಕ್ಷೀಣಿಸುತ್ತಿದೆ. ಆದರೆ ಇದಕ್ಕೆಲ್ಲ ತದ್ವಿರುದ್ಧವಾಗಿ ಇತ್ತೀಚಿನ ದಿನಗಳಲ್ಲಿ ಒಂದು ಘಟನೆ ಉತ್ತರಪ್ರದೇಶದ ರಾಂಪುರದಲ್ಲಿ ನಡೆದಿದೆ. ಅಧಿಕಾರಿಗಳು ಎಂದರೆ ಕೇವಲ ಲಂಚ ಹಾಗೂ ಭ್ರಷ್ಟಾಚಾರ ಕಾರ್ಯದಲ್ಲಿ ಭಾಗಿಯಾಗುತ್ತಾರೆ ಎಂಬ ನಂಬಿಕೆಗಳನ್ನು ಅಳಿಸಿ ಹಾಕುವಂತೆ ಒಬ್ಬ ಅಧಿಕಾರಿ ಕೆಲಸ ನಿರ್ವಹಿಸಿದ್ದಾರೆ.

ರಾಂಪುರ ಜಿಲ್ಲೆಯ ಭತ್ತ ಖರೀದಿ ಕೇಂದ್ರದಲ್ಲಿ ರೈತರ ಭತ್ತದ ಮಾರಾಟಕ್ಕೆ ಮೋಸವಾಗುತ್ತಿದೆ ಅವರಿಗೆ ಮೋಸದ ಬೆಲೆಯನ್ನು ನೀಡುತ್ತಿದ್ದಾರೆ ಎಂಬ ಸುದ್ದಿಗಳು ಅಲ್ಲಿನ ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟರಿಗೆ ಬಂದಿತ್ತು. ಬಾಯಿಂದ ಬಾಯಿಗೆ ಕಿವಿಯಿಂದ ಕಿವಿಗೆ ಬಂದಂತಹ ಸುದ್ದಿ ಮ್ಯಾಜಿಸ್ಟ್ರೇಟರಿಗೆ ಬಂದು ತಲುಪಿದಾಗ ಇದರ ಕುರಿತಾಗಿ ಪರೀಕ್ಷಿಸಬೇಕೆಂದು ಸನ್ನದ್ಧಗುತ್ತಾರೆ. ಇನ್ನು ಅಲ್ಲಿಗೆ ಹೋಗುವಾಗ ಸಾಮಾನ್ಯ ರೈತರಂತೆ ಪ್ಯಾಂಟ್ ಹಾಗೂ ಶರ್ಟನ್ನು ಹೊರಗೆ ಹಾಕಿಕೊಂಡು ಹವಾಯಿ ಚಪ್ಪಲಿಯನ್ನು ಧರಿಸಿಕೊಂಡು ಹೋಗುತ್ತಾರೆ.

ತಮ್ಮ ಸರ್ಕಾರಿ ವಾಹನವನ್ನು ದೂರದಲ್ಲಿ ನಿಲ್ಲಿಸಿ ಸಾಮಾನ್ಯ ಬೈಕೊಂದರಲ್ಲಿ ಖರೀದಿ ಕೇಂದ್ರಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋಗುವಾಗ ಮುಖವನ್ನು ಶಾಲಿನಿಂದ ಸುತ್ತಿಕೊಂಡು ಹೋಗಿರುತ್ತಾರೆ ಗುರುತು ಸಿಗಬಾರದು ಎಂಬ ಕಾರಣಕ್ಕಾಗಿ. ಅಲ್ಲಿಗೆ ಹೋದ ಮೇಲೆ ಯಾರು ಕೂಡ ಅವರನ್ನು ಗುರುತು ಹಿಡಿಯಲು ಸಾಧ್ಯವಾಗಲಿಲ್ಲ‌. ಅವರು ಅಲ್ಲಿನ ರೈತರೊಂದಿಗೆ ರೈತರಾಗಿ ಅಲ್ಲಿನ ಗುಟ್ಟುಗಳನ್ನು ತಿಳಿಯಲು ಆರಂಭಿಸಿದರು. ಅಲ್ಲಿ ಕೇಳಿ ತಿಳಿದಂತಹ ಮಾತುಗಳಿಂದ ಅವರು ಕೇಳಿದಂತಹ ಮಾತುಗಳು ಸತ್ಯವಾಗಿತ್ತು ಎಂಬುದು ಅವರ ಅರಿವಿಗೆ ಬಂದಿದೆ.

ಹೌದು ಗೆಳೆಯರೇ ಗೊತ್ತಾ ಖರೀದಿ ಕೇಂದ್ರದಲ್ಲಿ ಮಾಜಿ ಸ್ಟೇಟಸ್ ಆಂಜನೇಯ ಕುಮಾರ್ ಸಿಂಗ್ ಹೋದಾಗ ಅಲ್ಲಿನ ಮಧ್ಯವರ್ತಿಗಳು ಬೇಕುಬೇಕಾದ ಬೆಲೆಯನ್ನು ಕೂಗುತ್ತಿದ್ದರು. ಇದರಿಂದಾಗಿ ಇಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬುದು ತಿಳಿದುಬಂದಿದೆ. ಭತ್ತ ಖರೀದಿ ಕೇಂದ್ರಕ್ಕೆ ಹಾಕಿರುವ ಎಲ್ಲಾ ಕಾನೂನು ಹಾಗೂ ನಿಯಮಗಳನ್ನು ಗಾಳಿಗೆ ತೂರಿದ ಕಾರಣದಿಂದಾಗಿ ಕೇಂದ್ರದ ಮೇಲೆ ಎಫ್ಐಆರ್ ಹಾಕಲು ನಿರ್ಧರಿಸಲಾಗಿದೆ. ರೈತರಿಂದ 400ರಿಂದ 500 ರೂಪಾಯಿಗಳಿಗೆ ಪುಸಲಾಯಿಸಿ ಭತ್ತವನ್ನು ಖರೀದಿಸಿ ಅದನ್ನು 1100 ರಿಂದ 1400 ರೂಪಾಯಿಗಳಿಗೆ ಮಾರಾಟ ಮಾಡುವ ಮೂಲಕ ರೈತರ ಪರಿಶ್ರಮಕ್ಕೆ ಮೋಸವನ್ನು ಮಾಡಲಾಗುತ್ತಿದೆ ಎಂದು ತಿಳಿದು ನಾನು ಇಲ್ಲಿಗೆ ಬಂದಿದ್ದೇನೆ ಎಂಬುದಾಗಿ ಮಾಧ್ಯಮಗಳಲ್ಲಿ ಆಂಜನೇಯ ಕುಮಾರ್ ಸಿಂಗ್ ಹೇಳಿದ್ದಾರೆ.

ಇನ್ನು ಇದಕ್ಕೆ ಸಂಬಂಧಿಸಿರುವ ಅಧಿಕಾರಿಗಳನ್ನು ಕಂಡುಹಿಡಿದು ಅವರಿಗೆ ಶಿಕ್ಷೆ ಕೊಡುವವರೆಗೂ ಕೂಡ ನಾನು ಬಿಡುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಇದರ ಕಾರಣದಿಂದಾಗಿ ಎಲ್ಲಾ ಖರೀದಿ ಕೇಂದ್ರಗಳಲ್ಲಿಯೂ ಕೂಡ ಕಮಿಟಿ ರಚಿಸಿ ಸದಸ್ಯರನ್ನು ಇಡಲಾಗಿದ್ದು ಇದರ ಕುರಿತಂತೆ ಅವ್ಯವಹಾರ ನಡೆಯಲು ಬಿಡದಂತೆ ನಿಗಾವಹಿಸಿ ಕೊಳ್ಳಲಾಗುತ್ತಿದೆಯಂತೆ. ಈ ಕೆಲಸ ಮಾಡಿದಂತಹ ದಕ್ಷ ಅಧಿಕಾರಿ ಆಂಜನೇಯ ಕುಮಾರ್ ಸಿಂಗ್ ರವರಿಗೆ ನಮ್ಮ ಸಲಾಂ. ಇವರ ಈ ಕಾರ್ಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Post Author: Ravi Yadav