ಮತ್ತೆ ಟ್ರ್ಯಾಕ್ ಗೆ ವಾಪಾಸ್ ಬಂದ ಭಜರಂಗಿ 2, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್. ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಅಕ್ಟೋಬರ್ 29ರಂದು ನಮ್ಮೆಲ್ಲರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಹೌದು ಗೆಳೆಯರೆ ಅದೇ ದಿನ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಭಜರಂಗಿ-2 ಚಿತ್ರ ಕೂಡ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಆದರೆ ಪುನೀತ್ ರವರ ದಿಡೀರ್ ನಿಧನದ ವಾರ್ತೆಯನ್ನು ಕೇಳಿದ ಚಿತ್ರತಂಡ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಭಜರಂಗಿ-2 ಪ್ರದರ್ಶನವನ್ನು ರದ್ದು ಮಾಡಿದ್ದು. ಇನ್ನು ಎಲ್ಲಾ ಕಾರ್ಯಗಳು ಮುಗಿದ ನಂತರ ಇದೇ ಸೋಮವಾರದಿಂದ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಭಜರಂಗಿ-2 ಚಿತ್ರ ಮತ್ತೆ ಮರುಪ್ರದರ್ಶನ ವಾಗಲು ಪ್ರಾರಂಭವಾಗಿದೆ. ಹೌದು ಗೆಳೆಯರೇ ಜಯಣ್ಣ ಫಿಲಂಸ್ ನಿರ್ಮಾಣದ ಎ ಹರ್ಷ ನಿರ್ದೇಶನದ ಹಾಗೂ ಶಿವಣ್ಣ ನಾಯಕ ನಟನಾಗಿ ನಟಿಸಿರುವ ಫ್ಯಾಂಟಸಿ ತ್ರಿಲ್ಲರ್ ಚಿತ್ರ ಭಜರಂಗಿ 2 ಎಂದರೆ ಕಂಡಿತವಾಗಿಯೂ ತಪ್ಪಾಗಲಾರದು.

ಇನ್ನು ಭಜರಂಗಿ 2 ಚಿತ್ರದ ಕುರಿತಂತೆ ಸಿನಿಮಾ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು ಆದರೆ ಪುನೀತ್ ಅವರ ನಿಧನದ ವಾರ್ತೆ ಯಿಂದಾಗಿ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಬಾರಿ ಇಳಿತ ಕಂಡಿದೆ. ಹೌದು ಶಿವಣ್ಣ ನಟನೆಯ ಭಜರಂಗಿ 2 ಚಿತ್ರವನ್ನು ನೋಡಲು ಈಗಾಗಲೇ ಪ್ರೇಕ್ಷಕರು ದಿನೇದಿನೇ ಎಲ್ಲವನ್ನು ಮರೆತು ಹೋಗಲಾರಂಭಿಸಿದ್ದಾರೆ. ಇನ್ನು ಇಲ್ಲಿಯವರೆಗೂ ಭಜರಂಗಿ-2 ಚಿತ್ರ ಬಾಕ್ಸಾಫೀಸ್ ನಲ್ಲಿ 30ರಿಂದ 40 ಕೋಟಿ ಕಲೆಕ್ಷನ್ ಮಾಡಿದೆ ಎಂಬುದಾಗಿ ಬಲ್ಲಮೂಲಗಳ ಪ್ರಕಾರ ತಿಳಿದುಬಂದಿದೆ. ಪುನೀತ್ ರವರ ಘಟನೆಯ ಸಂದರ್ಭದಲ್ಲಿ ಕೂಡ ಭಜರಂಗಿ-2 ಚಿತ್ರ ಮಾಡಿರುವ ಗಳಿಕೆ ಖಂಡಿತವಾಗಿ ಚಿತ್ರ ಎಷ್ಟು ಚೆನ್ನಾಗಿದೆ ಎಂಬುದನ್ನು ಸಾಬೀತು ಮಾಡುತ್ತಿದೆ. ಭಜರಂಗಿ 2 ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Post Author: Ravi Yadav