ವಿಚ್ಛೇದನದ ಬಳಿಕ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದ ಸಮಂತಾ, ನಾನು ಪರ್ಫೆಕ್ಟ್ ಅಲ್ಲ ಎಂದದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸಮಂತ ಹಾಗೂ ನಾಗಚೈತನ್ಯ ದಂಪತಿಗಳು ತಮ್ಮ ಸಂಬಂಧಕ್ಕೆ ಇತಿಶ್ರೀ ಹಾಡಿರುವುದನ್ನು ನೀವು ಅವರ ಸಾಮಾಜಿಕ ಜಾಲತಾಣಗಳ ಖಾತೆಗಳ ಪೋಸ್ಟನ್ನು ನೋಡುವ ಮೂಲಕ ತಿಳಿದು ಕೊಂಡಿರಬಹುದು.

ಹೌದು ಗೆಳೆಯರೇ ಸಮಂತ ಹಾಗೂ ನಾಗಚೈತನ್ಯ ರವರು ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಮಂತ ಅವರು ಒಂಟಿಯಾಗಿ ಬಿಟ್ಟಿದ್ದಾರೆ. ಇನ್ನು ನಾಗಚೈತನ್ಯ ರವರ ಬಳಿ ಸಂಬಂಧವನ್ನು ಕಳೆದುಕೊಂಡ ಮೇಲೆ ಸಮಂತಾ ರವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಕುರಿತಂತೆ ಸಾಮಾಜಿಕ ಸಂದೇಶ ಸಾರುವ ಸಾಲುಗಳನ್ನು ಬರೆಯುವ ಸಂದರ್ಭದಲ್ಲಿ, ನನ್ನ ತಾಯಿ ಹೇಳಿದ್ದರು’ ನಾನು ಸ್ಟ್ರಾಂಗ್​, ಬೇಗ ಚೇತರಿಸಿಕೊಳ್ಳುತ್ತೇನೆ. ನಾನು ಪರ್ಫೆಕ್ಟ್​ ಅಲ್ಲ. ನನ್ನ ತನಕ್ಕೆ ನಾನು ಪರ್ಫೆಕ್ಟ್​. ನಾನೆಂದೂ ಬಿಟ್ಟು ಕೊಡುವುದಿಲ್ಲ. ನಾನು ಪ್ರೀತಿ ಪಾತ್ರಳು. ನಾನು ಬದ್ಧತೆ ಹೊಂದಿರುವವಳು. ನಾನು ಮನುಷ್ಯಳು. ನಾನು ವಾರಿಯರ್ ಎಂಬುದಾಗಿ ಹೆಣ್ಣನ್ನು ವಿವರಿಸುತ್ತಾ ಈ ಮಾತುಗಳನ್ನು ಹೇಳಿದ್ದಾರೆ.

ಇನ್ನು ಇಷ್ಟು ಮಾತ್ರವಲ್ಲದೆ ಪೋಷಕರಿಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಕುರಿತಂತೆ ಯೋಚಿಸಲು ಬಿಡಬೇಡಿ ಅವರಿಗೆ ಅವರ ಜೀವನವನ್ನು ಕಟ್ಟಿಕೊಳ್ಳಲು ಅವಕಾಶ ನೀಡಿ ಅವರು ಸ್ವಾವಲಂಬಿಯಾಗಿ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಪ್ರೋತ್ಸಾಹಿಸಿ ಎಂಬುದಾಗಿ ಹೇಳಿದ್ದಾರೆ. ಹೆಣ್ಣು ಸ್ವಾವಲಂಬಿಯಾಗಿ ಜೀವಿಸಿದರೆ ಕಂಡಿತವಾಗಿಯೂ ಸಮಾಜ ಉದ್ಧಾರವಾಗುತ್ತದೆ ಎಂಬ ಭಾವನೆ ಅವರದು. ಇನ್ನು ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಮಂತ ರವರು ರಿಷಿಕೇಶ ಹಾಗುವುದು ದುಬೈಗೆ ದುಃಖವನ್ನು ಮರೆಯಲು ಹೋಗಿಬಂದಿದ್ದಾರೆ. ಸದ್ಯಕ್ಕೆ ಹಲವಾರು ಚಿತ್ರಗಳು ಅವರ ಕೈಯಲ್ಲಿ ಇದ್ದು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Post Author: Ravi Yadav