ಪುನೀತ್ ರಾಜಕುಮಾರ್ ಅವರ ಮಿಲನ ಚಿತ್ರದಲ್ಲಿ ನಟಿಸಿದ್ದ ಪಾರ್ವತಿ ಮೆನನ್ ಈಗ ಕನ್ನಡದಲ್ಲಿ ಯಾಕೆ ನಟಿಸುತ್ತಿಲ್ಲ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದಲ್ಲಿ ಅದೆಷ್ಟು ಪರಭಾಷಾ ನಟಿಯರು ಬಂದು ನಟಿಸಿ ಹೋಗಿದ್ದಾರೆ. ಆದರೆ ಕೆಲವರು ತಮ್ಮ ಮನೋಜ್ಞವಾದ ನಟನೆ ಹಾಗೂ ವ್ಯಕ್ತಿತ್ವದಿಂದ ಎಲ್ಲರನ್ನೂ ಕೂಡ ಆವರಿಸಿಕೊಂಡಿರುತ್ತಾರೆ. ಇಂದಿನ ಚಿತ್ರ ರಂಗದಲ್ಲಿ ನಟಿಯರು ನಟಿಸಿದೇ ಇರಬಹುದು ಆದರೆ ಅವರು ಇಂದಿಗೂ ಕೂಡ ಕನ್ನಡ ಚಿತ್ರರಂಗವನ್ನು ಗೌರವಿಸುತ್ತಾರೆ ಹಾಗೂ ಕನ್ನಡ ಪ್ರೇಕ್ಷಕರು ಕೂಡ ಅವರನ್ನು ನೆನಪಿಸಿಕೊಳ್ಳುತ್ತಾರೆ.

ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ಮಲಯಾಳಂ ಮೂಲದ ಖ್ಯಾತ ದಕ್ಷಿಣಭಾರತದ ನಟಿಯಾಗಿರುವ ಪಾರ್ವತಿ ಮೆನನ್ ಅವರ ಕುರಿತಂತೆ. ಪಾರ್ವತಿ ಮೆನನ್ ಎಂದಾಗ ನಮಗೆ ಮೊದಲಿಗೆ ನೆನಪಾಗುವುದು 2007 ರಲ್ಲಿ ಬಿಡುಗಡೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿ ನಟಿಸಿರುವ ಮಿಲನ ಚಿತ್ರ. ಹೌದು ಗೆಳೆಯರೆ ಮಿಲನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾರ್ವತಿ ಮೆನನ್ ರವರು ಪಾದರ್ಪಣೆ ಮಾಡುತ್ತಾರೆ. ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರವೇ ಸೂಪರ್ ಹಿಟ್ ಆಗಿರುತ್ತದೆ. ಇದು ಅವರಿಗೆ ಕನ್ನಡದಲ್ಲಿ ನೆಲೆಯೂರಲು ಬಹಳಷ್ಟು ಪ್ರೋತ್ಸಾಹವನ್ನು ನೀಡುತ್ತದೆ. ಇದಾದ ನಂತರ ಪೃಥ್ವಿ ಅಂದರ್-ಬಾಹರ್ ಮಳೆ ಬರಲಿ ಮಂಜು ಬರಲಿ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು.

ಅಂದರ್ ಬಾಹರ್ ಚಿತ್ರದಲ್ಲಿ ಶಿವಣ್ಣನವರೊಂದಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನೂ ಎಲ್ಲಾ ಚಿತ್ರಗಳ ನಂತರ ಮತ್ತೆಂದು ಪಾರ್ವತಿ ಮೆನನ್ ರವರು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಕಾರಣ ಏನೆಂಬುದು ಈಗಾಗಲೇ ಗೊತ್ತಾಗಿದೆ ಗೆಳೆಯರೇ. ಹೌದು ಗೆಳೆಯರೇ ಪಾರ್ವತಿ ಮೆನನ್ ರವರು ಸದಾಕಾಲ ಚಾಲೆಂಜಿಂಗ್ ಪಾತ್ರವನ್ನು ನಟಿಸುವುದರಲ್ಲಿ ಆಸಕ್ತಿಯುಳ್ಳವರು. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ಇಂತಹ ಪಾತ್ರಗಳು ಅವರಿಗೆ ಸಿಗುತ್ತಿರಲಿಲ್ಲ. ಇನ್ನೊಂದು ಅವರಿಗೆ ಸರಿಯಾದಂತಹ ಸಂಭಾವನೆ ಸಿಗದಿದ್ದ ಕಾರಣ ಕನ್ನಡ ಚಿತ್ರರಂಗದಲ್ಲಿ ಈಗ ಅವರು ಕಾಣಿಸಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಪಾರ್ವತಿ ಮೆನನ್ ರವರು ಬಂದು ನಟಿಸಲು ಎಂಬುದೇ ನಮ್ಮೆಲ್ಲರ ಆಸೆ. ಇದಕ್ಕೆ ಮುಖ್ಯ ಕಾರಣ ಅವರು ಕನ್ನಡ ಚಿತ್ರರಂಗಕ್ಕೆ ಬಂದ ಮೇಲೆ ಕನ್ನಡವನ್ನು ಕಲಿತು ತಾವೇ ತಮ್ಮ ವಾಯ್ಸ್ಓವರ್ ನೀಡುತ್ತಿದ್ದರು.

Post Author: Ravi Yadav