ಪುನೀತ್ ನಿಧನದ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ನಟಿ ಲಕ್ಷ್ಮಿ ಮಂಚು ಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಅಕ್ಟೋಬರ್ 29ರಂದು ಹೃದಯಾಘಾತದಿಂದ ಕಳೆದುಕೊಂಡಿದ್ದೇವೆ. ಇವೆಲ್ಲ ನಡೆದು ಒಂದು ವಾರವಾದರೂ ಕೂಡ ಅಪ್ಪು ಅವರನ್ನು ನಿನ್ನೆ ಮೊನ್ನೆಯಷ್ಟೇ ನೋಡಿದ ಹಾಗೆ ಇದೆಯಲ್ಲ ಎಂಬ ಭಾವನೆ ಇನ್ನೂ ಕೂಡ ಕಾಡುತ್ತಿದೆ.

ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸದಾ ಲವಲವಿಕೆಯಿಂದ ಇದ್ದಂತಹ ವ್ಯಕ್ತಿ. ತಾವು ನಗುತ್ತಾ ತಮ್ಮ ಸುತ್ತಮುತ್ತಲಿನವರನ್ನು ಕೂಡ ನಗಿಸುತ್ತ ಇದ್ದವರು. ಆದರೆ ಅವರಿಗೆ ಹೀಗೆ ಒಂದೇ ಸಮನೆ ಹೃದಯಾಘಾತದಿಂದ ಹೀಗೆಲ್ಲಾ ಆಗುತ್ತದೆ ಎಂದು ಯಾರು ಕೂಡ ಕನಸು ಮನಸಿನಲ್ಲೂ ಕೂಡ ಅಂದುಕೊಂಡಿರಲಿಲ್ಲ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾದ ಮೇಲೆ ಅವರಿಗೆ ದೇಶ-ವಿದೇಶದಾಧ್ಯಂತ ಗಣ್ಯಾತಿಗಣ್ಯರ ಶ್ರದ್ಧಾಂಜಲಿ ಹಾಗೂ ಕೊನೆಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದಿದ್ದವು.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ತೆಲುಗು ಚಿತ್ರರಂಗದ ನಟಿ ಲಕ್ಷ್ಮಿ ಮಂಜುರವರು ಕೂಡ ಟ್ವೀಟ್ ಮೂಲಕ ವಿಧಾಯವನ್ನು ತಿಳಿಸಿದರು. ಆದರೆ ಅವರಿಗೆ ಟ್ವೀಟ್ ಮಾಡಿದ್ದಕ್ಕಾಗಿ ವ್ಯಾಪಕವಾಗಿ ಛೀಮಾರಿ ಹಾಕಿದ್ದಾರೆ ನೆಟ್ಟಿಗರು. ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನಿಧನದ ಸುದ್ದಿಯನ್ನು ಆಸ್ಪತ್ರೆಯಿಂದ ಮಾಧ್ಯಮಗಳಿಗೆ ಅಧಿಕೃತವಾಗಿ ಹೇಳಿಕೆ ನೀಡುವ ಮುನ್ನವೇ ಲಕ್ಷ್ಮಿ ರವರು ತಮ್ಮ ಟ್ವಿಟರ್ನಲ್ಲಿ ಶ್ರದ್ದಾಂಜಲಿಯನ್ನು ಅರ್ಪಿಸಿದ್ದರು. ಇದಕ್ಕಾಗಿ ನೆಟ್ಟಿಗರು ಅಧಿಕೃತ ಘೋಷಣೆ ಬರುವವರಿಗೆ ಕಾಯುವುದಕ್ಕೆ ಆಗುವುದಿಲ್ಲ ಅಷ್ಟೊಂದು ಆತುರವೇ ಎಂಬುದಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Post Author: Ravi Yadav