ಹಿಂದೂಗಳ ಹಬ್ಬ ಬಂದಾಗ ಮಾತ್ರ ಪರಿಸರ ಕಾಳಜಿ ಮೆರೆಯುವವರಿಗೆ ಟಾಂಗ್ ನೀಡಿದ ಕಂಗನಾ, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ದೀಪಾವಳಿ ಬಂತು ಎಂದರೇ ಸಡಗರ ಸಂಭ್ರಮಗಳ ಜೊತೆ ಕೆಲವು ವಿವಾದಗಳು ಸಹ ಹುಟ್ಟಿಕೊಳ್ಳುತ್ತವೆ. ಅದರಲ್ಲೂ ಪಟಾಕಿ ವಿಚಾರದಲ್ಲಂತೂ ಹಲವಾರು ಅಸಹಿಷ್ಣುತೆಗಳು ಹುಟ್ಟಿಕೊಳ್ಳುತ್ತವೆ. ಪ್ರತಿ ಭಾರಿ ದೀಪಾವಳಿ ಸಮಯದಲ್ಲಿ ದೀಪದ ದೀಪಾವಳಿ ಆಚರಿಸೋಣ, ಆದರೇ ಮಾಲೀನ್ಯಕಾರಕವಾದ ಪಟಾಕಿಯಂತೂ ಬೇಡವೇ ಬೇಡ ಎಂಬ ಅಭಿಯಾನಗಳು ಸೆಲೆಬ್ರಿಟಿಗಳಿಂದ ಜೋರಾಗಿ ಕೇಳಿ ಬರುತ್ತವೆ.

ಈ ಬಗ್ಗೆ ಇತ್ತಿಚೇಗೆ ಮನೆಯಲ್ಲಿ ವರ್ಷಪೂರ್ತಿ ಎಸಿ ಬಳಸುವವರು, ಪಟಾಕಿ ಹೊಡೆದರೇ ಪರಿಸರ ಮಾಲೀನ್ಯವಾಗುತ್ತದೆ ಎಂದು ಬೊಂಬಡಾ ಬಜಾಯಿಸುತ್ತಾರೆ ಎಂಬ ಹೇಳಿಕೆ ವೈರಲ್ ಆಗಿತ್ತು. ಇನ್ನು ಖ್ಯಾತ ಗುರುಗಳಾದ ಜಗ್ಗಿ ವಾಸುದೇವ್ ಸಹ ಪಟಾಕಿ ಬೇಡ ಎಂದು ಹೇಳಿದ್ದರು. ಈಗ ಪಟಾಕಿ ವಿರೋಧಿಸುವವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಹೇಳಿಕೆ ನೀಡಿದ್ದಾರೆ, ಬಾಲಿವುಡ್ ನಟಿ ಕಂಗನಾ ರಾಣಾವತ್.

ಹೌದು ಸದಾಕಾಲ ಬಲಪಂಥೀಯ ಹೇಳಿಕೆ ನೀಡಿಕೊಂಡು ಬರುತ್ತಿರುವ ಕಂಗನಾ ಈಗ ಪಟಾಕಿ ಬೇಡ ಎಂದವರಿಗೆ ಸರಿಯಾಗಿ ಝಾಡಿಸಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ರವರ ವಿಡಿಯೋ ಶೇರ್ ಮಾಡಿ ಬರೆದುಕೊಂಡಿರುವ ಕಂಗನಾ, ಪಟಾಕಿ ಹೊಡೆಯುವುದರಿಂದ ಪರಿಸರ ಮಾಲೀನ್ಯ ಆಗುತ್ತದೆ ಎನ್ನುವ ನೀವುಗಳು ಪ್ರತಿ ದಿನ ಏಕೆ ವಾಹನಗಳನ್ನ ಬಳಸುತ್ತಿರಾ, ಅದರ ಬದಲು ನಡೆದುಕೊಂಡು ಹೋಗಿ. ವರ್ಷಪೂರ್ತಿ ವಾಹನಗಳಲ್ಲಿ ಓಡಾಡಿ, ಈಗ ಪರಿಸರ ಮಾಲೀನ್ಯ ಅಂದರೇ ಹೇಗೆ ಎಂದು ಟಾಂಗ್ ನೀಡಿದ್ದಾರೆ. ನೀವು ನಡೆಸುವ ಶಿವರಾತ್ರಿಗೆ ಬರುವ ಜನರಿಗೂ ಸಹ ನಡೆದುಕೊಂಡು ಬನ್ನಿ ಎಂದು ಸಲಹೆ ನೀಡಿ ಎಂದು ಕಾಲೆಳೆದಿದ್ದಾರೆ. ಇನ್ನೂ ಕಂಗನಾಗೆ ಸಾಥ್ ನೀಡಿರುವ ನಟ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್, ಪಟಾಕಿ ಹೊಡೆಯುವುದು ನಮ್ಮ ಹಳೇಯ ಪದ್ದತಿಯಾಗಿದ್ದು, ಅದನ್ನು ನಾವು ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav