ಅಪ್ಪನ ಆಸೆಯನ್ನು ತೀರಿಸಲು ಎಷ್ಟೇ ನೋವಿದ್ದರೂ ದೃಢ ಮನಸ್ಸು ಮಾಡಿದ ದೃತಿ, ಶುಭವಾಗಲಿ ಎಂದ ಫ್ಯಾನ್ಸ್.

ಅಪ್ಪನ ಆಸೆಯನ್ನು ತೀರಿಸಲು ಎಷ್ಟೇ ನೋವಿದ್ದರೂ ದೃಢ ಮನಸ್ಸು ಮಾಡಿದ ದೃತಿ, ಶುಭವಾಗಲಿ ಎಂದ ಫ್ಯಾನ್ಸ್.

ನಮಸ್ಕಾರ ಸ್ನೇಹಿತರೇ ಕೋಟ್ಯಂತರ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಸ್ವರ್ಗಸ್ಥ ರಾಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಆರಾಧ್ಯ ದೇವರಂತೆ ಪೂಜಿಸುತ್ತಿರುವ ಅಭಿಮಾನಿಗಳಿಗೆ ಎಲ್ಲಿಲ್ಲದ ದುಃಖ ಉಮ್ಮಳಿಸಿ ಬರುತ್ತಿದೆ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿಗೆ 25 ಲಕ್ಷಕ್ಕೂ ಅಧಿಕ ಜನರು ಬಂದು ಅಂತಿಮ ದರ್ಶನ ಮಾಡಿ ಹೋಗಿರುವುದು ಅವರು ಕರ್ನಾಟಕದಲ್ಲಿ ಜನಿಸಿ ಏನನ್ನು ಸಂಪಾದಿಸಿದ್ದಾರೆ ಎಂಬುದಕ್ಕೆ ಜೀವಂತ ಉದಾಹರಣೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಾಲುತುಪ್ಪ ಕಾರ್ಯಕ್ರಮ ನಿನ್ನೆ ನಡೆದಿದ್ದು ಈ ಸಂದರ್ಭದಲ್ಲಿ ವಿದೇಶದಿಂದ ಬಂದಿರುವ ಅಪ್ಪು ಅವರ ಹಿರಿಯ ಮಗಳು ಒಂದು ದೃಢ ನಿರ್ಧಾರವನ್ನು ಕೈಗೊಂಡಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಗಳು ದೃತಿ ಅಮೆರಿಕದ ಪ್ರತಿಷ್ಠಿತ ಯುನಿವರ್ಸಿಟಿ ಒಂದರಲ್ಲಿ ಸ್ಕಾಲರ್ಶಿಪ್ ಮೂಲಕ ಓದುತ್ತಿದ್ದಾರೆ. ಇನ್ನು ಎಲ್ಲರೂ ಕೂಡ ಇನ್ನೂ ಅವರು ಮತ್ತೊಮ್ಮೆ ಹಿಂದಿರುಗಿ ಹೋಗುವುದಿಲ್ಲ ಎಂಬುದಾಗಿ ಭಾವಿಸಿದ್ದರು.

ಈಗ ದೃತಿ ಹಾಲುತುಪ್ಪ ಕಾರ್ಯಕ್ರಮದ ನಂತರ ಮತ್ತೆ ಕೂಡಲೇ ಅಮೆರಿಕಕ್ಕೆ ಹೋಗುವ ನಿರ್ಧಾರ ಮಾಡಿದ್ದಾರೆ. ತಂದೆ ಅಪ್ಪು ಅವರಿಗೆ ತನ್ನ ಮಗಳು ಅಮೆರಿಕಾದಲ್ಲಿ ವಿದ್ಯಾಭ್ಯಾಸ ನಡೆಸಿ ಬಂದು ಕರ್ನಾಟಕದಲ್ಲಿ ಜನಸೇವೆ ಮಾಡಬೇಕೆಂಬುದು ಆಸೆಯಾಗಿತ್ತು. ಆ ಆಸೆಯನ್ನು ತೀರಿಸಲು ದೃತಿ ಅವರು ಮನಸ್ಸಿಲ್ಲದಿದ್ದರೂ ಕೂಡ ಅಮೇರಿಕಾಗೆ ವಿದ್ಯಾಭ್ಯಾಸಕ್ಕಾಗಿ ಹಿಂದಿರುಗುತ್ತಿದ್ದಾರಂತೆ. ಇನ್ನು ಶಿವಣ್ಣ ಕೂಡ ಇಲ್ಲ ಇದ್ದರೆ ಆಕೆಯ ತಂದೆಯ ನೆನಪಿನಲ್ಲಿ ಇನ್ನಷ್ಟು ದುಃಖವನ್ನು ಅನುಭವಿಸುತ್ತಾಳೆ ಎಂಬ ಕಾರಣಕ್ಕಾಗಿ ಅವಳನ್ನು ಅಮೆರಿಕಕ್ಕೆ ಕಳಿಸಲು ಎಲ್ಲ ತಯಾರಿಗಳನ್ನು ಕೂಡ ಮಾಡುತ್ತಿದ್ದಾರಂತೆ. ಇನ್ನು ಈ ನಿರ್ಧಾರಕ್ಕೆ ಫ್ಯಾನ್ಸ್ ಕೂಡ ಮೆಚ್ಚುಗೆ ಸೂಚಿಸಿದ್ದು ನಿಮ್ಮ ಬರುವಿಕೆಗೆ ಕರ್ನಾಟಕ ಕಾಯುತ್ತಿರುತ್ತದೆ, ಶುಭವಾಗಲಿ ಸಹೋದರಿ ಎಂದು ಹೇಳಿಕೆ ನೀಡಿದ್ದಾರೆ.