ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪುನೀತ್ ರವರು ಪತ್ನಿಗಾಗಿ ಖರೀದಿ ಮಾಡಿದ್ದ ಮನೆಯ ವೆಚ್ಚ ಎಷ್ಟು ಗೊತ್ತಾ?? ಮನೆ ಒಳಗಡೆ ಹೇಗಿದೆ ಗೊತ್ತೇ??

ಪುನೀತ್ ರವರು ಪತ್ನಿಗಾಗಿ ಖರೀದಿ ಮಾಡಿದ್ದ ಮನೆಯ ವೆಚ್ಚ ಎಷ್ಟು ಗೊತ್ತಾ?? ಮನೆ ಒಳಗಡೆ ಹೇಗಿದೆ ಗೊತ್ತೇ??

12

ನಮಸ್ಕಾರ ಸ್ನೇಹಿತರೇ ಒಬ್ಬ ಮನುಷ್ಯ ಒಳ್ಳೆಯ ಕೆಲಸದಿಂದ ಎಷ್ಟು ಜನರನ್ನು ಸಂಪಾದಿಸಬಹುದು ಎಂಬುದಾಗಿ ನೆನ್ನೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನೋಡಲು ಬಂದ ಅಭಿಮಾನಿಗಳ ಜನಸಾಗರದಿಂದ ತಿಳಿದುಬಂದಿದೆ. ತಂದೆ ರಾಜಕುಮಾರ್ ರವರ ಗುಣಗಳನ್ನು ಜನ್ಮ ಸಿದ್ಧವಾಗಿ ಪಡೆದುಕೊಂಡು ಬಂದಂತಹ ಪುನೀತ್ ರಾಜಕುಮಾರ್ ರವರು ಅವರಂತೆಯೇ ಎಲ್ಲಾ ಒಳ್ಳೆ ಗುಣಗಳನ್ನು ಹೊಂದಿದ್ದರು.

Follow us on Google News

ಅದು ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಆಸರೆಯನ್ನು ನೀಡುವುದಾಗಲಿ ಅಥವಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಆಗಲಿ ಪುನೀತ್ ರಾಜಕುಮಾರ್ ಅವರು ಸದಾ ಮುಂದಿರುತ್ತಿದ್ದರು. ಮಾಡಿದ ಸಹಾಯಕ್ಕೆ ಪ್ರಚಾರವನ್ನು ಗಿಟ್ಟಿಸಿಕೊಳ್ಳುವ ಮನಸ್ಥಿತಿಯವರು ನಮ್ಮ ಅಪ್ಪು ಅಲ್ಲ. ಅದಕ್ಕಾಗಿ ಅವರನ್ನು ನಾವು ರಾಜರತ್ನ ಎಂದು ಕರೆಯುವುದು. ಇನ್ನು ನಿಮಗೆಲ್ಲ ತಿಳಿದಿರುವಂತೆ ಅಪ್ಪು ರವರು ಸದಾಶಿವನಗರದ ಮನೆಯಲ್ಲಿ ತಮ್ಮ ಸಹೋದರ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ಜೀವಿಸುತ್ತಿದ್ದರು. ಇನ್ನೂ ಇದು ಮಾತ್ರವಲ್ಲದೆ ಸದಾಶಿವನಗರದಲ್ಲಿ ಒಂದು ಹೊಸ ಮನೆಯನ್ನು ಕಟ್ಟಿದ್ದರು.

ಹೌದು ಗೆಳೆಯರೇ ಪತ್ನಿ ಅಶ್ವಿನಿಯವರ ಇಷ್ಟದಂತೆ ಮನೆಯನ್ನು ಆಧುನಿಕವಾಗಿ ವಿನ್ಯಾಸಮಾಡಿ ಕಟ್ಟಿಸಿದ್ದರು. ಈ ಮನೆಗೆ ಆಗಾಗ ಬಂದು ಹೋಗುವುದನ್ನು ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ದಂಪತಿಗಳು ಮಾಡುತ್ತಿದ್ದರು. ಇನ್ನು ಈ ಹೊಸ ಮನೆಯನ್ನು ಬರೋಬ್ಬರಿ 15 ಕೋಟಿ ರೂಪಾಯಿ ಮೊತ್ತದಲ್ಲಿ ಕಟ್ಟಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಯಾಂಡಲ್ವುಡ್ನ ನಟರಲ್ಲಿ ಪುನೀತ್ ರಾಜಕುಮಾರ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದರು. ತಮ್ಮ ಕುಟುಂಬಕ್ಕೆ ಅಮೂಲ್ಯ ಸಮಯಗಳನ್ನು ನೀಡುತ್ತಿದ್ದರು. ಆಗಾಗ ತಮ್ಮ ಕುಟುಂಬದೊಂದಿಗೆ ಪ್ರವಾಸಗಳಿಗೆ ಹೋಗುತ್ತಿದ್ದರು. ಆದರೆ ಇಂದು ಭೂಮಂಡಲದ ಆಚೆಗೆ ಎಲ್ಲರನ್ನೂ ಬಿಟ್ಟು ಒಬ್ಬರೇ ಪ್ರವಾಸಕ್ಕೆ ಹೋಗಿದ್ದಾರೆ.