ಸದಾ ಖಡಕ್ ಆಗಿ ಮಾತನಾಡುವ ದರ್ಶನ್ ರವರು ಡಿ ಬಾಸ್ ಪುನೀತ್ ರವರ ಅಂತಿಮ ಕ್ಷಣಕ್ಕೆ ಹೋಗಲಿಲ್ಲ ಯಾಕೆ ಗೊತ್ತೇ?? ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿರುವುದು ಕರ್ನಾಟಕ ಚಿತ್ರರಂಗದ ಅತ್ಯಂತ ಕರಾಳ ಸುದ್ದಿ ಎಂದರೆ ತಪ್ಪಾಗಲಾರದು. ಇನ್ನು ಗಾಂಧೀಜಿಯವರನ್ನು ಕಳೆದುಕೊಂಡಾಗ ಬಂದಷ್ಟು ಜನ ಬಿಟ್ಟರೆ ಪುನೀತ್ ರಾಜಕುಮಾರ್ ಅವರು ಅಸುನೀಗಿದ್ದಾಗ ಕೊನೆಯ ದರ್ಶನವನ್ನು ಪಡೆದಿರುವ ಜನರು ಕೂಡ ಎರಡನೇ ಸ್ಥಾನದಲ್ಲಿ ಹೆಚ್ಚಂತೆ.

ಹೌದು ಗೆಳೆಯರೆ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಜನರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕೊನೆಯ ಬಾರಿಗೆ ಕಂಠೀರವ ಸ್ಟೇಡಿಯಂನಲ್ಲಿ ನೋಡಿ ಅಂತಿಮ ದರ್ಶನವನ್ನು ಪಡೆದು ಕೊಂಡಿದ್ದಾರೆ. ಇನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೆ ರಾಜಕೀಯ ಹಾಗೂ ಚಿತ್ರರಂಗದ ಹಲವಾರು ಗಣ್ಯರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನವನ್ನು ಪಡೆದು ಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರು ಜೀವಿತಾವಧಿಯಲ್ಲಿ ಏನನ್ನು ಸಂಪಾದಿಸಿದರು ಎಂದು ಕೇಳಿದರೆ ಖಂಡಿತವಾಗಿ ನೀವು ಈ ದೃಶ್ಯಗಳನ್ನು ತೋರಿಸಬಹುದಾಗಿದೆ. ಈ ಸಂದರ್ಭ ಎಲ್ಲರೂ ಬಂದಿದ್ದರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬಂದಿರಲಿಲ್ಲ.

ಈ ಕುರಿತಂತೆ ಕೇಳಿರುವ ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಕೂಡ ಆಪ್ತರಲ್ಲಿ ದರ್ಶನ್ ರವರು ಪುನೀತ್ ನನ್ನ ಅಚ್ಚುಮೆಚ್ಚಿನ ಗೆಳೆಯ ಅವನನ್ನು ನಾನು ನಗುಮುಖದಲ್ಲಿ ನೋಡಿದ್ದೇನೆ ನನಗೆ ಅವನ ಅದೇ ಮುಖ ಕೊನೆಯವರೆಗೂ ಇರಲು ಬಿಡಿ ಅದಕ್ಕಾಗಿ ನಾನು ಅಂತಿಮ ದರ್ಶನವನ್ನು ಪಡೆಯಲು ಹೋಗಿಲ್ಲ ಎಂಬುದಾಗಿ ಹೇಳಿದ್ದಾರೆ, ಸದಾ ಖಡಕ್ ಆಗಿ ಮಾತನಾಡಿದರೂ ಕೂಡ ಇಂತಹ ಮುಗ್ದ ಮನಸ್ಸನ್ನು ಡಿ ಬಾಸ್ ಹೊಂದಿದ್ದಾರೆ ಅಲ್ಲವೇ?? ಇಂತಹ ಭಾವನಾತ್ಮಕ ಮಾತುಗಳನ್ನು ಕೇಳಿ ಎಂತಹ ಕಟುಕನ ಮನಸ್ಸಿನಲ್ಲಿಯೂ ಕೂಡ ಕಣ್ಣೀರಿನ ಕಾರಂಜಿಗಳು ಹರಿಯೋದು ಶತಸಿದ್ಧ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Post Author: Ravi Yadav