ಅಪ್ಪು ಇಲ್ಲದಿದ್ದರೂ ಪುನೀತ್ ಹಾದಿಯಲ್ಲಿಯೇ ನಡೆಯಲು ನಿರ್ಧಾರ ಮಾಡಿದ ಪತ್ನಿ ಅಶ್ವಿನಿ, ತೆಗೆದುಕೊಂಡ ದೃಢ ನಿರ್ಧಾರ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಮ್ಮನ್ನೆಲ್ಲಾ ಅಗಲಿ ಇಂದು ಪಂಚಭೂತಗಳಲ್ಲಿ ಸಕಲಶಾಸ್ತ್ರ ವಿಧಿ-ವಿಧಾನಗಳ ಮೂಲಕ ಲೀನವಾಗಿದ್ದಾರೆ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹೃದಯಾಘಾತದಿಂದಾಗಿ ಆಸ್ಪತ್ರೆಗೆ ಹೋಗುತ್ತಿದ್ದ ಮಾರ್ಗಮಧ್ಯದಲ್ಲಿ ಅಸುನೀಗಿದ್ದರು.

ಇದೀಗ ನಿಮಗೆಲ್ಲ ತಿಳಿದಿರುವಂತೆ ನಿನ್ನೆ ಬೆಳಗ್ಗೆಯಷ್ಟೇ ರಾಘವೇಂದ್ರ ರಾಜಕುಮಾರ್ ರವರ ಹಿರಿಯ ಮಗನಾಗಿರುವ ವಿನಯ್ ರಾಜಕುಮಾರ್ ರವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅವರ ಸಂಪ್ರದಾಯದ ಪ್ರಕಾರ ಎಲ್ಲಾ ವಿಧಿವಿಧಾನಗಳನ್ನು ಪೂರೈಸಿದರು. ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಹಾಗೂ ಮಕ್ಕಳು ವಂದನ ಹಾಗು ದೃತಿ, ಶಿವಣ್ಣ ಹಾಗೂ ಕುಟುಂಬಸ್ಥರ ಎಲ್ಲರೂ ಕೂಡ ಬಿಕ್ಕಿಬಿಕ್ಕಿ ಅಳುತ್ತಿದ್ದುದು ಎಲ್ಲರ ಮನಕಲಕುವಂತಿತ್ತು. ಇನ್ನು ಪುನೀತ್ ರಾಜಕುಮಾರ್ ಅವರು ಪಂಚಭೂತಗಳಲ್ಲಿ ಲೀನ ವಾಗುತ್ತಿದ್ದ ಬೆನ್ನಲ್ಲೇ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಅವರು ದೃಢವಾದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಹೌದು ಗೆಳೆಯರೆ ಅದೇನೆಂದರೆ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಪುನೀತ್ ರಾಜಕುಮಾರ್ ಅವರು ಪ್ರಾರಂಭಿಸಿದ ಸಿನಿಮಾ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ಸ್ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ಹಾಗೂ ಸಮಾಜ ಮೂಕಿ ಕಾರ್ಯಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ರವರು ತಮ್ಮ ಮಕ್ಕಳೊಂದಿಗೆ ಸೇರಿ ನಡೆಸುತ್ತಾರೆ ಎಂಬ ದೃಢ ನಿರ್ಧಾರ ಕೈಗೊಂಡಿದ್ದಾರೆ. ಉತ್ತಮ ಪ್ರತಿಭೆಗಳಿಗೆ ಅವಕಾಶ ಸಿಗಬೇಕೆಂಬ ಪುನೀತ್ ರವರ ಆಸೆಯನ್ನು ಅವರನ್ನು ಪೂರೈಸುವುದಾಗಿ ನಿರ್ಧರಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Post Author: Ravi Yadav