ಇದೆಂಥ ದುರ್ವಿಧಿ, ಅಣ್ಣಾವ್ರು ಹಾಗೂ ಮೂರು ಮಕ್ಕಳಿಗೂ ಹೃದಯದ ಸಮಸ್ಯೆ, ಯಾಕೆ ಹೀಗೆ?? ಅಸಲಿ ವಿಚಾರದ ಬಗ್ಗೆ ನಿಮಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ದೃವತಾರೆ ಭಾಗ್ಯವಂತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡು ಅನಾಥವಾಗಿದೆ. ಅಣ್ಣಾವ್ರ ಕಿರಿಮಗ ಇಷ್ಟೊಂದು ಬೇಗ ನಮ್ಮನ್ನೆಲ್ಲಾ ಅಗಲಿ ಹೋಗುತ್ತಾರೆ ಎಂಬುದಾಗಿ ಯಾರು ಕೂಡ ಊಹಿಸಿರಲಿಲ್ಲ. ಕೇವಲ 46 ವಯಸ್ಸಿಗೆ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗುವಂತಹ ಅವಸರವೂ ಕೂಡ ಅಪ್ಪು ರವರಿಗೆ ಏನಿತ್ತು. ಇದಕ್ಕೆಲ್ಲ ಉತ್ತರವನ್ನು ಯಾರ ಬಳಿ ಹುಡುಕಲು ಸಾಧ್ಯ.

ಆದರೆ ಒಂದು ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಗೆಳೆಯರೇ ಅದೇನೆಂದರೆ ಹೃದಯದ ಸಮಸ್ಯೆ ಅಂದಿನಿಂದಲೂ ಕೂಡ ಅಣ್ಣಾವ್ರ ಕುಟುಂಬವನ್ನು ಬೆಂಬಿಡದೆ ಕಾಡಿಕೊಂಡು ಬಂದಿದೆ. ಹೌದು ಗೆಳೆಯರೆ ಅಣ್ಣಾವ್ರ ಕಾಲದಿಂದಲೂ ಕೂಡ ಇದು ಅಣ್ಣಾವ್ರ ಕುಟುಂಬವನ್ನು ಕಾಡಿಕೊಂಡು ಬಂದಂತಹ ಮಹಾಮಾರಿ. ನಮ್ಮ ಕನ್ನಡ ಚಿತ್ರರಂಗದಲ್ಲಿ ಯೋಗಾಭ್ಯಾಸ ಹಾಗೂ ದೈಹಿಕ ಕಸರತ್ತನ್ನು ಮೊದಲಬಾರಿಗೆ ಪರಿಚಯಿಸಿದವರು ನಮ್ಮ ನೆಚ್ಚಿನ ವರನಟ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಎಂದರೂ ಕೂಡ ತಪ್ಪಾಗಲಾರದು.

ಇನ್ನು ಅಣ್ಣಾವ್ರನ್ನು 2000 ಇಸವಿಯಲ್ಲಿ ಕಾಡುಗಳ್ಳ ವೀರಪ್ಪನ್ ಅಪಹರಿಸಿಕೊಂಡು ಹೋಗಿದ್ದ. 108 ದಿನಗಳ ಕಾಲ ಕಾಡಿನಲ್ಲಿ ಇದ್ದರೂ ಕೂಡ ಮರಣವನ್ನು ಗೆದ್ದುಬಂದಿದ್ದರು ನಮ್ಮ ಮುತ್ತುರಾಜ್. ಆದರೆ 2006 ರಲ್ಲಿ ಇದೇ ಹೃದಯಾಘಾತದಿಂದಾಗಿ ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ ನಮ್ಮನ್ನೆಲ್ಲಾ ಅಗಲಿ ಶಾಶ್ವತವಾಗಿ ದೂರವಾಗಿದ್ದರು. ಇನ್ನು ಇದು ಇಷ್ಟಕ್ಕೇ ನಿಲ್ಲಲಿಲ್ಲ ರಾಘವೇಂದ್ರರಾಜಕುಮಾರ ರವರು 27ನೇ ವಯಸ್ಸಿನಲ್ಲಿಯೇ ಹೃದಯದ ಸಮಸ್ಯೆಯಿಂದಾಗಿ ಹಲವಾರು ಸರ್ಜರಿ ಗಳನ್ನು ಕೂಡ ಮಾಡಿಸಿಕೊಂಡಿದ್ದರು.

ಇದಾದ ನಂತರ 2013 ರಲ್ಲಿ ಕೂಡ ವ್ಯಾಯಾಮ ಮಾಡುತ್ತಿರಬೇಕಾದರೆ ಕುಸಿದುಬಿದ್ದು ಅವರ ಮೆದುಳಿನಲ್ಲಿ ರಕ್ತ ಸಂಚಾರ ಹೆಪ್ಪುಗಟ್ಟಿ ಹಲವಾರು ಸಮಸ್ಯೆಗಳು ಉಂಟಾಗಿತ್ತು. ಈ ಸಂದರ್ಭದಲ್ಲಿ ಇದೇ ಅಣ್ಣನನ್ನು ಪುನೀತ್ ರಾಜಕುಮಾರ್ ರವರು ಉತ್ತಮ ಮಟ್ಟದ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಉಳಿಸಿಕೊಂಡಿದ್ದರು. ಇನ್ನು 2015 ರಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ಟ್ರೆಡ್ಮಿಲ್ ನಲ್ಲಿ ವ್ಯಾಯಾಮ ಮಾಡುತ್ತಿರಬೇಕಾದರೆ ಲಘು ಹೃದಯಾಘಾತ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಶಿವಣ್ಣನವರಿಗೆ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲಾಗಿತ್ತು.

ಈ ಎರಡು ಸಂದರ್ಭದಲ್ಲಿ ಕೂಡ ಹೃದಯಾಘಾತ ಸಂಭವಿಸಿದ್ದರೂ ಕೂಡ ಇಬ್ಬರು ಅಣ್ಣತಮ್ಮಂದಿರು ಉಳಿದುಕೊಂಡು ಬಂದಿದ್ದರು. ಆದರೆ ಈ ಬಾರಿ ಕಿರಿಯಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ವ್ಯಾಯಾಮ ಮಾಡುತ್ತಿರಬೇಕಾದರೆ ಹೃದಯಾಘಾತದಿಂದ ಕುಸಿದುಬಿದ್ದು ಮತ್ತೆ ಮೇಲೇಳಲೇ ಇಲ್ಲ. ಅಣ್ಣಾವ್ರ ಕುಟುಂಬಕ್ಕೆ ಹೃದಯಾಘಾತ ಎನ್ನುವುದು ಬೆಂಬಿಡದ ಶಾಪವಾಗಿ ಬಂದು ಈಗ ದೊಡ್ಡಮನೆಯ ಕುಡಿಯನ್ನೇ ವಿಧಿಯ ಕೈಗೆ ಸೇರಿಸಿಬಿಟ್ಟಿದೆ. ಕೇವಲ ತಮ್ಮ ಅಭಿಮಾನಿಗಳನ್ನು ಮಾತ್ರವಲ್ಲದೆ ಅವರನ್ನೇ ನಂಬಿಕೊಂಡಿದ್ದ ಅಂತಹ ಅದೆಷ್ಟೋ ಜೀವಗಳನ್ನು ಬಿಟ್ಟು ಪಂಚಭೂತಗಳಲ್ಲಿ ಲೀನ ಆಗಲು ತನ್ನ ಪ್ರಯಾಣವನ್ನು ಬೆಳೆಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಇಂದು ಮುಂದು ಎಂದೆಂದೂ ಪವರ್ ಆಗಿರುತ್ತಾರೆ. ಇನ್ನೂ ಮೂವರು ಜನ ಅಣ್ಣತಮ್ಮಂದಿರು ವ್ಯಾಯಾಮ ಮಾಡುತ್ತಿರಬೇಕಾದರೆ ಹೃದಯಾಘಾತ ಸಂಭವಿಸಿದ್ದು ಎನ್ನುವುದು ಮತ್ತೊಂದು ಗಮನಿಸಿಕೊಳ್ಳಬೇಕಾದ ವಿಷಯ. ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ವ್ಯಾಯಾಮ ಮಾಡುತ್ತಾರೆ ಆದರೆ ಈ ಆರೋಗ್ಯವನ್ನು ಸಂಪೂರ್ಣವಾಗಿ ಮುಗಿಸಿಬಿಡುವ ವ್ಯಾಯಾಮ ಯಾಕೆ ಬೇಕು ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಪುನೀತ್ ರಾಜಕುಮಾರ್ ರಂತಹ ಬಂಗಾರದ ಮನಸ್ಸಿನ ರಾಜಕುಮಾರನನ್ನು ಕಳೆದುಕೊಂಡ ದುಃಖದಲ್ಲಿ ಕರ್ನಾಟಕ ಬಡವಾಗಿದೆ. ಪಪ್ಪು ಬಿಟ್ಟುಹೋಗಿರುವ ಶೂನ್ಯವನ್ನು ತುಂಬಿಸ ಬಂದಂತಹ ಮತ್ತೊಂದು ವ್ಯಕ್ತಿತ್ವ ಕರುನಾಡಲ್ಲಿ ಮತ್ತೊಮ್ಮೆ ಜನಿಸಲು ಸಾಧ್ಯವಿಲ್ಲ.

Post Author: Ravi Yadav