ಪುನೀತ್ ಕಣ್ಣುಗಳಿಂದ ದೃಷ್ಟಿ ಸಿಕ್ಕಿದ್ದು ಇಬ್ಬರಿಗಲ್ಲ, ಮತ್ತೆಷ್ಟು ಜನರಿಗೆ ಗೊತ್ತಾ?? ಇದಪ್ಪ ಪುಣ್ಯದ ಕೆಲಸ ಅಂದ್ರೆ, ಡಾಕ್ಟರ್ ಗಳಿಗೆ ನಮ್ಮದೊಂದು ಸಲಾಂ.

ನಮಸ್ಕಾರ ಸ್ನೇಹಿತರೇ ಮನುಷ್ಯ ಹುಟ್ಟಿನಿಂದ ತನ್ನ ಅಂತ್ಯದವರೆಗೂ ಪರೋಪಕಾರಿಯಾಗಿರುತ್ತಾನೆ. ಆದರೇ ಅಂತ್ಯದ ನಂತರವೂ ತನ್ನ ದೇಹ, ಹಾಗೂ ಕಣ್ಣನ್ನ ದಾನ ಮಾಡುವ ಮೂಲಕ ತನ್ನ ಜೀವನದ ಸಾರ್ಥಕತೆಯನ್ನ ಕಾಣುತ್ತಾನೆ. ಕನ್ನಡಿಗರ ಆರಾಧ್ಯದೈವ, ನಟಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್ ಸಹ ತಮ್ಮ ಕಣ್ಣನ್ನ ದಾನ ಮಾಡಿದ್ದರು. ಇನ್ನು ಮೊನೆ ತಾನೇ ನಮ್ಮನ್ನಗಲಿದ ನಟಸಾರ್ವಭೌಮರ ಪುತ್ರ , ಕರುನಾಡ ಅಪ್ಪು, ಪುನೀತ್ ರಾಜ್ ಕುಮಾರ್ ಸಹ ತಮ್ಮ ಕಣ್ಣನ್ನು ದಾನ ಮಾಡಿದ್ದರು.

ಅಂದು ವಿಕ್ರಂ ಆಸ್ಪತ್ರೆಯಿಂದ ಅಪ್ಪು ಕಣ್ಣನ್ನ ಒಯ್ದಿದ್ದ ಡಾಕ್ಟರ್ ಭುಜಂಗ ಶೆಟ್ಟಿಯವರ ತಂಡ, ಇಂದು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, ಅಪ್ಪುರವರ ಎರಡು ಕಣ್ಣುಗಳಿಂದ ಒಟ್ಟು ನಾಲ್ವರಿಗೆ ದೃಷ್ಠಿ ಭಾಗ್ಯವನ್ನ ತರಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಡಾಕ್ಟರ್ ಭುಜಂಗಶೆಟ್ಟಿ, ಅಪ್ಪುರವರ ಎರಡು ಕಣ್ಣುಗಳನ್ನ ಮೊನ್ನೆಯೇ ಪಡೆದು ಸಂರಕ್ಷಿಸಡಲಾಗಿತ್ತು. ಅದರಂತಗ ಇಂದು ನಡೆದ ಯಶಸ್ವಿ ಶಸ್ತ್ರ ಚಿಕಿತ್ಸೆಯಲ್ಲಿ ನಾಲ್ವರಿಗೆ ಅಪ್ಪು ಕಣ್ಣುಗಳಿಂದ ದೃಷ್ಠಿ ಭಾಗ್ಯ ಲಭಿಸಿದೆ. ಒಬ್ಬ ಯುವತಿ ಹಾಗೂ ಮೂವರು ಯುವಕರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಅವರೆಲ್ಲರೂ ಈಗ ದೃಷ್ಠಿ ಪಡೆದಿದ್ದಾರೆಂದು ಹೇಳಿದ್ದಾರೆ.

ಇನ್ನು ಇದೇ ವೇಳೆ, ಎರಡು ಕಣ್ಣುಗಳಿಂದ ನಾಲ್ವರು ಹೇಗೆ ದೃಷ್ಠಿ ಪಡೆದರು ಎಂಬ ಪ್ರಶ್ನೆ ಎಲ್ಲರಿಗೂ ಎದುರಾಯಿತು. ಈ ವೇಳೆ ಈ ವಿಷಯಕ್ಕೆ ಸಂಭಂದಿಸಿದಂತೆ ಸ್ಪಷ್ಠೀಕರಣ ನೀಡಿದ, ಅಪ್ಪುರವರಿಗೆ ಕೇವಲ 46 ವರ್ಷ ವಯಸ್ಸಾಗಿತ್ತು. ಜೊತೆಗೆ ಅವರ ದೃಷ್ಠಿ ಸಹ ಉತ್ತಮವಾಗಿತ್ತು. ಅವರು ಓದುವಾಗ ಕನ್ನಡಕವನ್ನು ಸಹ ಬಳಸುತ್ತಿರಲಿಲ್ಲ. ಹೀಗಾಗಿ ನಾವು ಹೊಸ ತಂತ್ರಜ್ಞಾನ ಉಪಯೋಗಿಸಿ , ಅಪ್ಪುರವರ ಎರಡು ಕಣ್ಣುಗಳಿಂದ ನಾಲ್ವರಿಗೆ ದೃಷ್ಠಿ ನೀಡುವ ನಿರ್ಧಾರ ಕೈಗೊಂಡೆವು. ಇದರಂತೆ ಕಾರ್ನಿಯಾಗಳನ್ನು ಎರಡು ಭಾಗ ಮಾಡಿದೆವು.

ಮುಂಭಾಗದ ಕಣ್ಣು ಹಾಗೂ ಹಿಂಬದಿ ಆಳವಾದ ಪದರಗಳನ್ನು ವಿಭಾಗಿಸಿದ್ದೆವು. ಯಾರಿಗೆ ಮುಂಭಾಗದ ಕಾರ್ನಿಯಾದ ಹಾನಿಯಿಂದಾಗಿ ದೃಷ್ಠಿ ಕಳೆದುಕೊಂಡಿದ್ದರೋ ಅವರಿಗೆ ಮುಂಭಾಗದ ಕಾರ್ನಿಯಾವನ್ನು ನೀಡಿದೆವು. ಯಾರಿಗೆ ಹಿಂಭಾಗದ ಪದರದ ಹಾನಿಯಿಂದ ದೃಷ್ಠಿ ಹೀನರಾಗಿದ್ಧರೋ ಅವರಿಗೆ ಹಿಂಭಾಗದ ಪದರದ ಯಶಸ್ವಿ ಆಪರೇಷನ್ ನಡೆಸಿದೆವು.

ಒಟ್ಟು ನಾಲ್ಕು ಜನರಿಗೆ ಒಂದೇ ದಿನ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ವಿಶೇಷ ಎಂದರೇ ನಾಲ್ವರು ಕರ್ನಾಟಕದವರು ಹಾಗೂ ನಾಲ್ವರು ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ರವರ ಅಭಿಮಾನಿಗಳೆಂಬುದು ವಿಶೇಷ. ಶಸ್ತ್ರ ಚಿಕಿತ್ಸೆ ಮಾಡಿಕೊಂಡವರ ಮಾಹಿತಿಯನ್ನ ಗೌಪ್ಯವಾಗಿ ಇಡಲಾಗಿದ್ದು, ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು. ಒಟ್ಟಿನಲ್ಲಿ ಅಪ್ಪುರವರ ಆ ಎರಡು ಕಣ್ಣುಗಳು, ನಾಲ್ವರು ಅಂಧರ ಬಾಳಿನಲ್ಲಿ, ದೀಪಾವಳಿ ಸಮಯದಲ್ಲಿ ಬೆಳಕು ತಂದವೆಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav