ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಡವರಿಗೆ ಆಪರೇಷನ್ ಗೆ ದುಡ್ಡು ಕೊಡಲು ಸಿದ್ಧವಾಗಿತ್ತು ಪುನೀತ್ ಕುಟುಂಬ, ಆದರೆ ವೈದ್ಯರು ಚಾರ್ಜ್ ಮಾಡಿದ್ದು ಎಷ್ಟು ಗೊತ್ತಾ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಪುನೀತ್ ರಾಜಕುಮಾರ್ ಅವರ ಕಣ್ಣುಗಳನ್ನು ನಾಲ್ಕು ಜನರಿಗೆ ಅತ್ಯಾಧುನಿಕ ಟೆಕ್ನಾಲಜಿಯನ್ನು ಬಳಸಿ ಅಳವಡಿಸಲಾಗಿದೆ. ಸಾಮಾನ್ಯ ಟೆಕ್ನಾಲಜಿಯನ್ನು ಬಳಸಿದ್ದರೆ ಪುನೀತ್ ರವರ ಕಣ್ಣುಗಳಿಂದ ಒಬ್ಬೊಬ್ಬರಿಗೆ ಒಂದು ಕಣ್ಣಿನಂತೆ ಕೇವಲ ಇಬ್ಬರಿಗೆ ಮಾತ್ರ ದೃಷ್ಟಿ ನೀಡ ಬಹುದಾಗಿತ್ತು. ಆದರೆ ವೈದ್ಯರು ಹೊಸ ರೀತಿಯ ಟೆಕ್ನಾಲಜಿಯನ್ನು ಬಳಸಿ ಅಗತ್ಯವಿರುವ ಪದರಗಳನ್ನು ತೆಗೆದುಕೊಂಡು ನಾಲ್ಕು ಜನರಿಗೆ ದೃಷ್ಟಿ ಭಾಗ್ಯವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಪುನೀತ್ ಅವರ ಕಣ್ಣುಗಳು ಎಂದು ತಿಳಿಯದೆ ಅವರಿಗೆ ದೃಷ್ಟಿ ನೀಡಲಾಗಿದ್ದು, ಮೂಲಗಳ ಪ್ರಕಾರ ಒಬ್ಬರು ಯುವತಿಗೆ ಹಾಕುವ ಮೂವರು ಯುವಕರಿಗೆ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಇನ್ನು ನಾಲ್ಕು ಜನರಿಗೆ ಹೇಗೆ ಸಾಧ್ಯ ಎಂದು ಅಂದುಕೊಂಡರೆ ಮುಂಭಾಗದ ಕಣ್ಣು ಹಾಗೂ ಹಿಂಬದಿ ಪದರಗಳನ್ನು ವಿಭಾಗ ಮಾಡಿ ನಾಲ್ಕು ಜನರಿಗೆ ದೃಷ್ಟಿ ನೀಡಿದ್ದೇವೆ ಎಂದು ಡಾಕ್ಟರ್ಗಳು ಉತ್ತರ ನೀಡಿದ್ದಾರೆ. ಇನ್ನು ಈ ಸಮಯದಲ್ಲಿ ಡಾಕ್ಟರ್ಗಳು ಈ ಶಸ್ತ್ರಚಿಕಿತ್ಸೆ ಮಾಡುವಾಗ ಪುನೀತ್ ರವರ ಕಣ್ಣುಗಳನ್ನು ಯಾರಿಗೆ ಅಳವಡಿಸಲಾಗುತ್ತದೆಯೋ ಆ ಶಸ್ತ್ರ ಚಿಕಿತ್ಸೆಗೆ ಪುನೀತ್ ಅವರ ಕುಟುಂಬ ಹಣ ನೀಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿತ್ತು.

ಆದರೆ ಡಾಕ್ಟರ್ಗಳು ವೈಜ್ಞಾನಿಕ ಟೆಕ್ನಾಲಜಿಯನ್ನು ಬಳಸಿ ಇಬ್ಬರಿಗೆ ನೀಡುವ ದೃಷ್ಟಿಯನ್ನು ನಾಲ್ಕು ಜನರಿಗೆ ನೀಡಿದ್ದರೂ ಕೂಡ ನಾಲ್ಕು ಜನರಿಂದ ಯಾವುದೇ ರೀತಿಯಲ್ಲಿ ಹಣ ಪಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಪುನೀತ್ ರವರ ಕಣ್ಣು ಎಂಬ ಕಾರಣಕ್ಕೆ ಒಂದು ರೂಪಾಯಿ ಕೂಡ ಹಣ ಪಡೆಯದೆ ನಾಲ್ಕು ಜನರಿಗೆ ದೃಷ್ಟಿ ತರಿಸಿರುವ ಡಾಕ್ಟರ್ ಭುಜಂಗ ಶೆಟ್ಟಿ ರವರ ತಂಡಕ್ಕೆ ನಮ್ಮದೊಂದು ಸಲಾಂ ಹೇಳಲೇಬೇಕು. ನಿಜಕ್ಕೂ ಇದು ಒಂದು ರೀತಿಯ ಸಾರ್ಥಕತೆಯ ಕೆಲಸವಾಗಿದ್ದು ಪುನೀತ್ ರವರ ಕಣ್ಣುಗಳು 4 ಕರ್ನಾಟಕದ ಜನರಿಗೆ ಉಚಿತವಾಗಿ ದೃಷ್ಟಿಯನ್ನು ತರಿಸುವಲ್ಲಿ ಯಶಸ್ವಿಯಾಗಿದೆ.

Get real time updates directly on you device, subscribe now.