ಮಂತ್ರಾಲಯದಲ್ಲಿ ಪುನೀತ್ ಬಂದಾಗ ತೊಟ್ಟಿಲು ಅಲುಗಾಡಿದ ವಿಡಿಯೋ ಗೆ ಕೊನೆಗೂ ಸಿಕ್ಕಿತು ಸ್ಪಷ್ಟನೆ, ಸುಮ್ಮನೆ ಮನಬಂದಂತೆ ಮಾತನಾಡಬೇಡಿ. ಅಸಲಿ ಕಥೆ ಇಲ್ಲಿದೆ ನೋಡಿ.

ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯ ಕಳೆದ ಮೂರು ದಿನಗಳಿಂದ ತಬ್ಬಿಬ್ಬಾಗಿ ಕುಳಿತಿರುವ ಪರಿಸ್ಥಿತಿ ಎದುರಾಗಿತ್ತು. ಕನ್ನಡಾಂಬೆಯ ನೆಚ್ಚಿನ ಕಂದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಡೀ ರಾಜ್ಯ ನಲುಗಿತ್ತು ಎಂದರೂ ಕೂಡ ತಪ್ಪಾಗಲಾರದು. ಹೌದು ಗೆಳೆಯರೇ ವ್ಯಾಯಾಮ ಮಾಡುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಒಂದೇ ಸಮನೆ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಬಾರದ ಲೋಕಕ್ಕೆ ನಮ್ಮನ್ನೆಲ್ಲ ಬಿಟ್ಟು ಹೊರಟುಹೋಗಿದ್ದಾರೆ.

ಅಪ್ಪು ಅವರನ್ನು ಕಳೆದುಕೊಂಡಿರುವ ದುಃಖ ಕರ್ನಾಟಕದ ಪ್ರತಿಯೊಂದು ಮನೆಯಲ್ಲಿ ಕೂಡ ಎದ್ದು ಕಾಣಿಸುತ್ತಿದೆ. ನಮ್ಮ ಬಂಧು ಬಳಗ ಅಲ್ಲದಿದ್ದರೂ ಅವರನ್ನು ನಾವು ಎದುರುಗಡೆ ಭೇಟಿಯಾಗದಿದ್ದರೂ ಕೂಡ ನಮ್ಮವನೇ ನಮ್ಮನ್ನು ಬಿಟ್ಟು ಹೋದ ಎಂಬಷ್ಟರಮಟ್ಟಿಗೆ ನೋವನ್ನು ನೀಡಿ ಸ್ವರ್ಗಸ್ಥರಾಗಿದ್ದಾರೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಅಪ್ಪು. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯವರ ದರ್ಶನಕ್ಕೆ ಹೋಗಿದ್ದರು.

ಈ ಸಂದರ್ಭದಲ್ಲಿ ರಾಯರ ಮೂರ್ತಿ ಹಾಗೂ ವೀಣೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲುಗಾಡಿತ್ತು ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿ ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನಿಧನದ ಮುನ್ಸೂಚನೆಯಾಗಿತ್ತು ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಮಂತ್ರಾಲಯದ ಪೀಠಾಧಿಪತಿ ಆಗಿರುವ ಶ್ರೀ ಸುಬುದೇಂದ್ರ ತೀರ್ಥರು ಇದನ್ನು ಯಾರು ಕೂಡ ಅನ್ಯತಾ ಕೆಟ್ಟದಾಗಿ ಭಾವಿಸಬಾರದು ಇದು ಕೇವಲ ಕಾಕತಾಳೀಯ ಮಾತ್ರ ಎಂಬುದಾಗಿ ಸ್ಪಷ್ಟಿಕರಣ ಮಾಡಿದ್ದಾರೆ, ಹಾಗೂ ಇದಕ್ಕೂ ಪುನೀತ್ ರವರಿಗೆ ಆಗಿರುವುದನ್ನು ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅದೇನೇ ಆಗಲಿ ಬೆಟ್ಟದ ಹೂವು ಬಾಡಿ ಹೋಗಿರುವುದು ಎಲ್ಲರ ಮನದಾಳವನ್ನು ಅತ್ಯಂತ ಆಳವಾಗಿ ನಾಟಿದೆ. ಪುನೀತನಿಲ್ಲದ ಈ ಚಿತ್ರರಂಗ ಮತ್ತೆಂದು ಅದೇ ವೈಭವವನ್ನು ಪಡೆದುಕೊಳ್ಳುವುದು ಅಸಾಧ್ಯ.

Post Author: Ravi Yadav