ತಂದೆಯ ಹಾದಿಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟಿರುವ ಮಗಳು ಧೃತಿ, ಮಾಡಿರುವ ಕೆಲಸ ನೋಡಿದರೇ ನೀವೇ ಭೇಷ್ ಎನ್ನುತ್ತೀರಾ.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿದ್ದೇವೆ. ನಾವು ನಂಬುವುದಕ್ಕೆ ಸಾಧ್ಯವಾಗದಿದ್ದರೂ ಕೂಡ ನಂಬಲೇ ಬೇಕಾದಂತಹ ಸತ್ಯ. ಆದರೆ ಅವರು ಮಾಡಿರುವ ಅದೆಷ್ಟೋ ಘನ ಕಾರ್ಯಗಳು ಇಂದಿಗೂ ಕೂಡ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದೆ.

ಹೌದು ಗೆಳೆಯರೇ ಹೇಗೆ ಪಾರ್ವತಮ್ಮ ರಾಜಕುಮಾರ್ ಹಾಗೂ ರಾಜಕುಮಾರ್ ಅವರು ತಮ್ಮ ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಿದ್ದಾರೆ. ಅದೇ ರೀತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ತಮ್ಮ ಹೆಣ್ಣುಮಕ್ಕಳನ್ನು ಸಾಕಷ್ಟು ಸಂಸ್ಕಾರವಂತರಾಗಿ ಬೆಳೆಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೂಡ ಅದೆಷ್ಟು ಅನಾಥಾಶ್ರಮ ವೃದ್ಧಾಶ್ರಮ ಹಾಗೂ ಶಾಲೆಗಳನ್ನು ಗೋಶಾಲೆಗಳನ್ನು ಮತ್ತು ಹೆಣ್ಣುಮಕ್ಕಳ ಶಕ್ತಿ ಧಾಮವನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ ಇದೆಲ್ಲಾ ಹೊರಗೆ ಬಂದಿದ್ದು ಅವರು ನಮ್ಮನ್ನು ಬಿಟ್ಟು ಹೋದಮೇಲೆ ಅಲ್ಲಿವರೆಗೂ ಕೂಡ ಯಾರು ಇದರ ಕುರಿತಂತೆ ಮಾತನಾಡಲು ಹೋಗಿರಲಿಲ್ಲ. ಇನ್ನು ಕೇವಲ ಪುನೀತ್ ರಾಜಕುಮಾರ್ ರವರು ಮಾತ್ರವಲ್ಲದೆ ಅವರ ದೊಡ್ಡ ಮಗಳು ದೃತಿ ಕೂಡ ಜನಸೇವೆಯಲ್ಲಿ ಹಿಂದೆಬಿದ್ದಿಲ್ಲ.

ಹೌದು ಗೆಳೆಯರೇ ಧೃತಿ ಅವರು ಅಂಧ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಖರ್ಚುವೆಚ್ಚಗಳನ್ನು ನೋಡುವ ಕೆಲಸವನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಾಡಲು ಮುಂದಾಗಿದ್ದರು. ಇನ್ನು ತಂದೆ ಕಾಲವಾದ ಅನಂತರ ಅವರು ನಡೆಸಿಕೊಂಡು ಹೋಗುತ್ತಿದ್ದ ಎಲ್ಲಾ ವೃದ್ಧಾಶ್ರಮ ಅನಾಥಾಶ್ರಮ ಶಾಲೆಗಳನ್ನು ತಾವೇ ನೋಡಿಕೊಳ್ಳುವುದಾಗಿ ದೃತಿ ಅವರು ನಿರ್ಧರಿಸಿದ್ದಾರಂತೆ. ಇದು ಪುನೀತ್ ರಾಜಕುಮಾರ್ ಅವರು ತಮ್ಮ ಮಕ್ಕಳಿಗೆ ಕಲಿಸಿ ಕೊಟ್ಟಂತಹ ಸಂಸ್ಕಾರ ಇದನ್ನು ನಾವು ನೋಡಿ ಹೆಮ್ಮೆ ಪಡಲೇಬೇಕು. ಅದಕ್ಕೆ ಅಲ್ವಾ ಹೇಳೋದು ದೊಡ್ಡ ಮನೆಯವರು ದೊಡ್ಡ ಮನಸ್ಸುಳ್ಳವರು ಎಂದು.

Post Author: Ravi Yadav