ಅಪ್ಪುವಿನ ಜೀವನದ ಅತಿ ದೊಡ್ಡ ಕನಸು ಪಿ ಆರ್ ಕೆ ಪ್ರೊಡಕ್ಷನ್ಸ್ ಏನಾಗಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವುದನ್ನು ಇಂದಿಗೂ ಕೂಡ ಕರ್ನಾಟಕದ ಒಬ್ಬನು ಕೂಡ ನಂಬಲು ಸಾಧ್ಯವಾಗುತ್ತಿಲ್ಲ. ನಡೆದಿದ್ದೆಲ್ಲವೂ ಕೆಟ್ಟ ಕನಸಾಗಿ ಬಿಡಲಿ ಎಂಬುದಾಗಿ ಎಲ್ಲರೂ ಕೂಡ ಹಾರೈಸುತ್ತಿದ್ದಾರೆ ಆದರೆ ನಡೆದಿರುವುದು ನಿಜ ತಾನೇ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನ್ನೆಲ್ಲಾ ಅಗಲಿ ಸ್ವರ್ಗಸ್ಥ ರಾಗಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಕನ್ನಡ ಚಿತ್ರರಂಗವನ್ನು ಬೇರೆಯದೇ ಹಂತಕ್ಕೆ ತೆಗೆದುಕೊಂಡು ಹೋಗುವ ಆಸೆಯನ್ನು ಹೊಂದಿದ್ದರು.

ಅದಕ್ಕಾಗಿಯೇ ತಮ್ಮ ಪಿಆರ್ ಕೆ ಪ್ರೊಡಕ್ಷನ್ಸ್ ಮೂಲಕ ಹೊಸ ಹೊಸ ಪ್ರತಿಭಾನ್ವಿತ ಪ್ರತಿಭೆಗಳಿಗೆ ಚಿತ್ರವನ್ನು ಮಾಡಲು ಸಹಾಯ ಮಾಡುತ್ತಿದ್ದರು. ತಮ್ಮ ಪ್ರೊಡಕ್ಷನ್ ಸಂಸ್ಥೆಯಲ್ಲಿ ಕವಲುದಾರಿ ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲು ಪ್ರಾರಂಭಿಸಿದರು. ಇದಾದ ನಂತರ ಅವರು ಅದೆಷ್ಟು ಯುವ ಪ್ರತಿಭೆಗಳಿಗೆ ಭರವಸೆಯ ದಾರಿದೀಪವಾಗಿ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಇನ್ನು ಈಗಾಗಲೇ ಹಲವಾರು ಚಿತ್ರಗಳ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ಇದೆಲ್ಲದರ ನಡುವೆ ಅರ್ಧ ದಾರಿಯಲ್ಲಿ ಎಲ್ಲರನ್ನೂ ಬಿಟ್ಟು ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರು ಬಾನಂಗಳದ ದಾರಿಯಲ್ಲಿ ಸಾಗುತ್ತಿದ್ದಾರೆ. ಇನ್ನು ಈ ಹಿಂದೆ ಪಿಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಹಾಗೂ ಪಿಆರ್ ಕೆ ಆಡಿಯೋ ಸಂಸ್ಥೆಯ ಎರಡನ್ನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ನಿರ್ವಹಿಸುತ್ತಿದ್ದರು. ಅಂದು ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರಿಗೆ ಮಾರ್ಗದರ್ಶಕರಾಗಿದ್ದರು. ಇಂದು ಅವರು ಹಾಕಿಕೊಟ್ಟಿರುವ ದಾರಿಯನ್ನು ಜವಾಬ್ದಾರಿಯುತವಾಗಿ ಅಶ್ವಿನಿ ಅವರು ನಡೆಸಿಕೊಂಡು ಹೋಗಲಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಪ್ರತಿಭೆಗಳಿಗೆ ಸಹಾಯ ಆಗುವ ಕೆಲಸ ಅಶ್ವಿನಿ ಅವರಿಂದಲೂ ಕೂಡ ನಡೆಯಲಿ ಎಂಬುದು ನಮ್ಮ ಆಸೆ.

Post Author: Ravi Yadav