ಸೇರಬೇಕಾದವರಿಗೆ ಸೇರಿದ ಪುನೀತ್ ಕಣ್ಣು, ಹುಡುಕಿ ಹುಡುಕಿ ದಾನವಾಗಿ ಕೊಟ್ಟದ್ದು ಯಾರ್ಯಾರಿಗೆ ಗೊತ್ತೆ?? ಕಣ್ಣು ದಾನವಷ್ಟೇ ಅಲ್ಲಾ, ಅಲ್ಲೂ ದೊಡ್ಡತನ ಮೆರೆದ ಅಣ್ಣಾವ್ರ ಕುಟುಂಬ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಸ್ತಬ್ಧವಾಗಿ ಹೋಗಿದೆ. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಕಾರ್ಯಗಳಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಗುನಗುತ್ತಲೇ ಭಾಗಿಯಾಗುತ್ತಿದ್ದರು.

ಕನ್ನಡ ಚಿತ್ರರಂಗದಲ್ಲಿ ಯಾವ ನಟರನ್ನು ಕೂಡ ಇಷ್ಟಪಡದೆ ಇರುವ ಜನರನ್ನು ನೀವು ಹುಡುಕಬಹುದು ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಇಷ್ಟಪಡದ ಒಬ್ಬ ವ್ಯಕ್ತಿಯನ್ನು ಕೂಡ ನೀವು ಇಡೀ ಕರ್ನಾಟಕದಲ್ಲಿ ಹುಡುಕಿದರು ಕೂಡ ಸಿಗುವುದಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದಾಗಿ ನಮ್ಮನ್ನೆಲ್ಲಾ ಅಗಲಿ ಕೋಟ್ಯಂತರ ಅಭಿಮಾನಿಗಳ ಹೃದಯಕ್ಕೆ ಘಾಸಿ ಮಾಡಿ ಹೋಗಿದ್ದಾರೆ. ಇನ್ನು ತಮ್ಮ ಕೊನೆಯ ಕ್ಷಣದಲ್ಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತಂದೆ ಹಾಕಿ ಕೊಟ್ಟಂತಹ ದಾರಿಯನ್ನೇ ಅನುಸರಿಸಿದ್ದಾರೆ. ಹೌದು ಗೆಳೆಯರೆ ಅಣ್ಣಾವ್ರು ಕೂಡ ತಮ್ಮ ಮರಣಾನಂತರ ಎರಡು ಕಣ್ಣುಗಳನ್ನು ದಾನ ಮಾಡಿದ್ದರು.

ಈಗ ಇದೇ ಮಾದರಿಯಲ್ಲಿ ನಿಧನಾನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ. ಇನ್ನು ಈಗಾಗಲೇ ಒಂದು ಕಣ್ಣನ್ನು ನೆನ್ನೆ ಒಬ್ಬ ವ್ಯಕ್ತಿಗೆ ಶಸ್ತ್ರಚಿಕಿತ್ಸೆಯ ಮೂಲಕ ಹಾಕಲಾಗಿದ್ದು ಇನ್ನು ಇಂದು ಕೂಡ ಒಬ್ಬ ವ್ಯಕ್ತಿಯ ಕಣ್ಣಿಗೆ ಪುನೀತ್ ರಾಜಕುಮಾರ್ ಅವರ ಕಣ್ಣುಗಳನ್ನು ಜೋಡಿಸಲಾಗಿದೆ, ಈ ವಿಚಾರದಲ್ಲಿ ಅಗತ್ಯತೆ ಹೆಚ್ಚು ಇರುವವರಿಗೆ ಹಾಗೂ ಬಡವರನ್ನು ಹುಡುಕಿ ಅಣ್ಣಾವ್ರ ಕುಟುಂಬದ ದುಡ್ಡಿನಲ್ಲಿಯೇ ದಾನ ಮಾಡಿದ ಕಣ್ಣುಗಳನ್ನು ಕೂಡ ಜೋಡಿಸಲಾಗುತ್ತಿದೆ ಎಂಬುದು ತಿಳಿದು ಬಂದಿದೆ. ಇನ್ನು ನಿಯಮಗಳ ಪ್ರಕಾರ ಕಣ್ಣನ್ನು ದಾನವಾಗಿ ಪಡೆದವರ ಹೆಸರನ್ನು ಬಹಿರಂಗ ಗೊಳಿಸುವಂತಿಲ್ಲ. ನೀವು ಕೂಡ ಪುನೀತ್ ರಾಜಕುಮಾರ್ ಅವರಂತೆ ಮರಣಾನಂತರ ಕಣ್ಣನ್ನು ದಾನ ಮಾಡುವ ಒಳ್ಳೆಯ ಕೆಲಸಕ್ಕೆ ಮುಂದಾಗಿ. ಈ ಮೂಲಕವಾದರೂ ಪುನೀತ್ ರಾಜಕುಮಾರ್ ಅವರ ಒಳ್ಳೆಯ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳೋಣ.

Post Author: Ravi Yadav