ಅಪ್ಪು ಅಗಲಿರುವ ಸುದ್ದಿ ಇಡೀ ಪ್ರಪಂಚಕ್ಕೆ ಗೊತ್ತು ಆದರೆ ಇವರಿಗೆ ಮಾತ್ರ ಗೊತ್ತಿಲ್ಲ ಮುಂದೆ ಗೊತ್ತಾಗುವುದು ಕೂಡ ಇಲ್ಲ.

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗ ಎಂದು ಬಂದಾಗ ತ್ರಿಮೂರ್ತಿಗಳು ಮೊದಲಬಾರಿಗೆ ನೆನಪಾಗುತ್ತಾರೆ. ಅಂದು ರಾಜಕುಮಾರ್ ಶಂಕರ್ ನಾಗ್ ಹಾಗೂ ವಿಷ್ಣುವರ್ಧನ್. ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜಕುಮಾರ್. ಆದರೆ ಈ ತ್ರಿಮೂರ್ತಿಗಳಲ್ಲಿ ಮೊದಲ ಸ್ತಂಭವನ್ನು ಈಗ ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ಹೌದು ಗೆಳೆಯರೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಕಳೆದುಕೊಂಡಿದ್ದೇವೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಸಿನಿಮಾ ಚಿತ್ರರಂಗದಲ್ಲಿ ಎಲ್ಲರನ್ನೂ ಕೂಡ ನಗು ಮುಖದಲ್ಲಿ ಕಾಣುತ್ತಿದ್ದ ಅಂತಹ ಶ್ರೀಮಂತ ವ್ಯಕ್ತಿತ್ವವುಳ್ಳವರು. ಆದರೆ ಅವರ ನಗು ಇನ್ನೆಂದು ಕಾಣದ ರೀತಿ ದಿಡೀರನೆ ನಮ್ಮನ್ನು ಅಗಲಿ ಹೋಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರನ್ನು ದ್ವೇಷಿಸುವ ಒಬ್ಬ ವ್ಯಕ್ತಿ ಕೂಡ ಇರಲಿಲ್ಲ ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ಅಜಾತಶತ್ರು ಎಂಬುದಾಗಿ ಕರೆಯುತ್ತಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವುದು ಇಡೀ ಜಗತ್ತಿಗೆ ಈ ಸುದ್ದಿ ತಿಳಿದಿದೆ. ಆದರೆ ಒಬ್ಬರಿಗೆ ಮಾತ್ರ ಈ ಸುದ್ದಿ ಇನ್ನು ತಿಳಿದಿಲ್ಲ ಮುಂದೆ ತಿಳಿಯೋದಿಲ್ಲ.

ಹೌದು ಗೆಳೆಯರೆ ಡಾಕ್ಟರ್ ರಾಜಕುಮಾರ್ ರವರ ತಂಗಿ ಆಗಿರುವ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅತ್ತೆ ಆಗಿರುವ ನಾಗಮ್ಮ ರವರಿಗೆ ಈಗ 90 ವರ್ಷ ವಯಸ್ಸು. ಪುನೀತ್ ರಾಜಕುಮಾರ್ ಎಂದರೆ ಎಲ್ಲಿಲ್ಲದ ಪ್ರೀತಿ. ಅಪ್ಪುವಿಗೂ ಕೂಡ ತಮ್ಮ ಅತ್ತೆ ಎಂದರೆ ಪಂಚಪ್ರಾಣ. ಆದರೆ 90 ವರ್ಷದ ವಯೋವೃದ್ಧರಾಗಿರುವ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ನಾಗಮ್ಮ ಅವರಿಗೆ ಅಪ್ಪು ಅವರ ನಿಧನದ ಸುದ್ದಿಯನ್ನು ತಡೆದುಕೊಳ್ಳುವ ಶಕ್ತಿ ಖಂಡಿತವಾಗಿ ಇರುವುದಿಲ್ಲ. ಹೀಗಾಗಿ ಅವರಿಗೆ ಈ ವಿಷಯದ ಕುರಿತಂತೆ ಹೇಳಿಲ್ಲ ಮುಂದೆ ಹೇಳೋದು ಕೂಡ ಇಲ್ಲ. ಈ ವಿಚಾರವನ್ನು ಕೇಳುತ್ತಾ ಇದ್ದರೆ ವಿಧಿಯನ್ನು ಎಷ್ಟು ಹಳಿದರೂ ಕೂಡ ಸಾಕಾಗದು ಎನ್ನುವ ಮನೋಭಾವ ಮೂಡಿ ಬರುತ್ತದೆ.

Post Author: Ravi Yadav