ಪುನೀತ್ ಬಗ್ಗೆ ಯಾರಿಗೂ ತಿಳಿಯದ ಸತ್ಯ ಬಿಚ್ಚಿಟ್ಟ ಕಲರ್ಸ್ ಕನ್ನಡದ ಪರಮೇಶ್ವರ್ ಗುಂಡ್ಕಲ್ – ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಟ ಪುನೀತ್ ರಾಜಕುಮಾರ್ ವಿಶ್ವಾದ್ಯಂತ ಹೆಚ್ಚು ಜನಪ್ರಿಯರಾಗಿದ್ದರೂ, ಅವರು ಮಾಡುವ ಸಮಾಜಮುಖಿ ಕಾರ್ಯಗಳು ಮಾತ್ರ ಎಲೆಮರೆಯ ಖಾಯಿಲೆಯಾಗಿದ್ದವು. ಈಗ ಪುನೀತ್ ರವರ ಸಮಾಜಮುಖಿ ಕೆಲಸಗಳು ಒಂದಾದ ಮೇಲಂತೆ ಒಂದೊಂದೆ ಹೊರಬರುತ್ತಿವೆ.

ಪುನೀತ್ ರಾಜಕುಮಾರ್ ಮೊದಲು ಕಿರುತೆರೆಯತ್ತ ಕಾಲಿಟ್ಟಿದ್ದು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ. ಎರಡು ಸೀಸನ್ ನಡೆಸಿದ ಪುನೀತ್ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಮನೆಮನೆಗಳಲ್ಲಿಯೂ ಜನಪ್ರಿಯರಾದರು.ಇದಾದ ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾದ ಫ್ಯಾಮಿಲಿ ಪವರ್ ಎಂಬ ಸಂಪೂರ್ಣ ಸಾಂಸಾರಿಕ ಕಾರ್ಯಕ್ರಮವನ್ನ ಬಹಳ ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದರು.

ಇನ್ನು ಪುನೀತ್ ರಾಜಕುಮಾರ್ ಜೊತೆ ತಾವು ಕಳೆದ ಕ್ಷಣದ ಬಗ್ಗೆ ಕಲರ್ಸ್ ಟಿವಿಯ ಹೆಡ್ ಪರಮೇಶ್ವರ್ ಗುಂಡ್ಕಲ್ ತಮ್ಮ ಫೇಸ್ ಬುಕ್ ನಲ್ಲಿ ಸುದೀರ್ಘವಾದ ಪೋಸ್ಟ್ ವೊಂದನ್ನು ಹಾಕಿದ್ದು, ಪುನೀತ್ ರವರು ಹೇಗೆ ಬಡವರಿಗೆ ಸಹಾಯ ಮಾಡುತ್ತಿದ್ದರೆಂಬುದನ್ನ ವಿವರಿಸಿದ್ದಾರೆ. ಪುನೀತ್ ರಾಜಕುಮಾರ್ ಕೊನೆಯವರೆಗೂ, ಏಡಗೈಲಿ ಕೊಟ್ಟದ್ದನ್ನು, ಬಲಗೈಗೆ ತಿಳಿಯಲು ಬಿಡುತ್ತಿರಲಿಲ್ಲವಂತೆ. ಆ ತೆರನಾದ ಸಹಾಯವನ್ನ ಪ್ರತಿಫಲಗಳ ನೀರಿಕ್ಷೆಯಿಲ್ಲದೇ ಮಾಡುತ್ತಿದ್ದರಂತೆ.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಎಷ್ಟೋ ಸ್ಪರ್ಧಿಗಳು ಕೊನೆ ಘಳಿಗೆಯಲ್ಲಿ ತಪ್ಪು ಉತ್ತರ ನೀಡುತ್ತಿದ್ದಾರೆ ಎಂದರೇ ಬಹಳಷ್ಟು ನೊಂದುಕೊಳ್ಳುತ್ತಿದ್ದರಂತೆ. ಎಷ್ಟೋ ಸ್ಪರ್ಧಿಗಳು ಕೋಟ್ಯಾಧಿಪತಿಗೆ ಬಂದು ಹಣ ಗೆಲ್ಲದೇ ಅಭ್ಯರ್ಥಿಗಳು ಬೇಸರ ಮಾಡಿಕೊಂಡು ಕೂತಿದ್ದರೇ ಅವರಿಗೆ ಪುನೀತ್ ರವರೇ ತಮ್ಮ ದುಡಿಮೆಯ ಹಣ ನೀಡುತ್ತಿದ್ದರಂತೆ. ಆದರೇ ಅದನ್ನ ಚಾನೆಲ್ ಮೂಲಕ ಕೊಡಿಸಿ, ತಮಗೂ ಅದಕ್ಕೂ ಸಂಭಂದವೇ ಇಲ್ಲದಂತೆ ವರ್ತಿಸುತ್ತಿದ್ದರಂತೆ. ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಬಂದವರಿಗೆಲ್ಲರಿಗೂ ಪುನೀತ್ ರವರೇ ಹಣ ಸಹಾಯ ಮಾಡುತ್ತಿದ್ದರಂತೆ. ಆದರೇ ಹೊರಗಡೆ ಅದನ್ನ ಬಿಟ್ಟುಕೊಡುತ್ತಿರಲಿಲ್ಲವಂತೆ. ಇದು ದೊಡ್ಮನೆ ಹುಡುಗನ ದೊಡ್ಡಗುಣ. ಇದರ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav