ವಿದೇಶದಿಂದ ಬಂದ ಪುನೀತ್ ಮಗಳು ದ್ರುತಿ ಮೊದಲು ಮಾಡಿದ ಕೆಲಸ ನೋಡಿದ್ರೆ ಮನ ಹಿಂಡುತ್ತೆ. ದೇವರೇ ಯಾಕಪ್ಪ ಹೀಗೆ ಮಾಡಿದೆ.

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಸೂತಕದ ಛಾಯೆ ಆವರಿಸಿದ್ದು ನೀರವ ಮೌನ ತುಂಬಿ ತುಳುಕಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ದೊಡ್ಮನೆ ರಾಜಕುಮಾರನಿಲ್ಲದ ಅರಮನೆಯಾಗಿದೆ. ಸಹೋದರನನ್ನು ಕಳೆದುಕೊಂಡಿರುವ ದುಃಖದಲ್ಲಿ ರಾಘಣ್ಣ ಹಾಗೂ ಶಿವಣ್ಣ ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ತನ್ನ ಸುಖದ ಕಷ್ಟಗಳಲ್ಲಿ ಜೊತೆಯಾಗಿದ್ದ ಪತಿ ನನ್ನೊಂದಿಗೆ ಇಲ್ಲ ಎಂಬ ದುಃಖದಲ್ಲಿ ಪತ್ನಿ ಅಶ್ವಿನಿ ಕೂಡ ಕಂಗಾಲಾಗಿದ್ದಾರೆ.

ಇನ್ನು ನ್ಯೂಯಾರ್ಕ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪುತ್ರಿ ದೃತಿ ಈಗಾಗಲೇ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದು ಕಣ್ಣೀರಿಡುತ್ತ ಏನು ಹೇಳಿದ್ದಾರೆ ಗೊತ್ತಾ. ಹೌದು ಗೆಳೆಯರೇ ಕೆಲವು ದಿನಗಳ ಹಿಂದೆಯಷ್ಟೇ ತಂದೆ ವಿಡಿಯೋ ಕಾಲ್ ಮಾಡಿದರೂ ಆಗ ನನ್ನ ಆರೋಗ್ಯ ಶ್ರಮವನ್ನು ವಿಚಾರಿಸಿದ್ದರು ಅವರು ಕೂಡ ಚೆನ್ನಾಗಿದ್ದರು. ಈಗ ಹೀಗೆ ಆಗಿದೆ ಎಂದರೆ ಏನು ಮಾಡಲಿ ಎಂಬುದಾಗಿ ಹೇಳಿದ್ದಾರೆ.

ನಮ್ಮೊಂದಿಗೆ ಇನ್ನುಮುಂದೆ ದೊಡ್ಡಪ್ಪನವರು ಇರುತ್ತಾರೆ ಆದರೆ ನನ್ನ ತಂದೆಯನ್ನು ಯಾರ ಜಾಗದಲ್ಲಿ ಹುಡುಕಲಿ ಅವರಿಲ್ಲದ ಬದುಕನ್ನು ಹೇಗೆ ಸಾಗಿಸಲಿ ಎಂಬುದಾಗಿ ಗೋಳಾಡಿದ್ದಾರೆ. ಇನ್ನು ನಾಳೆ ಕಂಠೀರವ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ವಿಧಿವಿಧಾನಗಳು ಸಕಲ ಸರ್ಕಾರಿ ಗೌರವ ಗಳಿಂದ ಶಾಸ್ತ್ರೋಕ್ತವಾಗಿ ನಡೆಯಲಿದೆ ಎಂಬ ಸುದ್ದಿಯನ್ನು ಕುಟುಂಬಸ್ಥರು ಹೊರಹಾಕಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ದೊಡ್ಡ ಮಗಳು ದೃತಿ ತಂದೆಯ ಮುಂದೆ ಗೋಳಾಡುತ್ತಿದ್ದ ದೃಶ್ಯ ಎಂಥವರ ಮನಸ್ಸನ್ನು ಕೂಡ ಕರಗಿಸುವಂತಿತ್ತು‌‌. ಈ ದೃಶ್ಯವನ್ನು ನೋಡಿದ ಪ್ರತಿಯೊಬ್ಬರು ಕೂಡ ಆ ದೇವರನ್ನು ಶಪಿಸಿದ್ದು ಮಾತ್ರ ಸುಳ್ಳಲ್ಲ.

Post Author: Ravi Yadav