ಬಿಗ್ ನ್ಯೂಸ್: ನಿನ್ನೆ ಹೇಳಿದ್ದು ಯಾವುದು ನಿಜವಲ್ಲ, ಅಲ್ಲಿ ನಡೆದ್ದದ್ದೆ ಬೇರೆ ಎಂದ ಅಪ್ಪು ರವರ ಬಾಡಿ ಗಾರ್ಡ್, ಅಷ್ಟಕ್ಕೂ ಅಲ್ಲಿ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಬೆಟ್ಟದ ಹೂವು ಬಾಡಿ ಮುದುಡಿ ಬಿಟ್ಟಿದೆ. ಅದೆಷ್ಟು ಜೀವಗಳಿಗೆ ಆಸರೆಯ ಬೆಳಕನ್ನು ಉಣಿಸಿದ ದೃವತಾರೆ ಅಸ್ತಂಗತ ವಾಗಿದೆ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಆಗಸದ ಶಾಶ್ವತ ನೆಲೆಯಾಗಿದ್ದಾರೆ. ನಿನ್ನೆಯಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕುರಿತಂತೆ ಹಲವಾರು ಸುದ್ದಿಗಳು ಸುದ್ದಿಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿತ್ತು. ಪುನೀತ್ ರಾಜಕುಮಾರ್ ಅವರು ಅಸುನೀಗಿದ ಸುದ್ದಿ ಕೇಳಿದಾಗ ತಾಯಂದಿರು ತಮ್ಮ ಸ್ವಂತ ಮಗನನ್ನೇ ಕಳೆದು ಕೊಂಡಿರುವ ದುಃಖದಲ್ಲಿದ್ದರು.

ಕರ್ನಾಟಕದ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕೂಡ ಅಪ್ಪು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅಪ್ಪುವಿನ ಕೊನೆಯುಸಿರೆಳೆದ ಸುದ್ದಿ ಕೇಳಿದ ತಕ್ಷಣವೇ ಅವರ ಬದಲು ನಮ್ಮ ಜೀವ ವನ್ನಾದರೂ ತೆಗೆದುಕೊಂಡು ಹೋಗು ಭಗವಂತ ಎಂಬುದಾಗಿ ಹಲವಾರು ವಯೋವೃದ್ಧರು ಕಣ್ಣೀರಿನ ಕಟ್ಟೆ ಒಡೆದುಹೋಗುವಂತೆ ಅತ್ತಿದ್ದರು. ಇನ್ನು ಎಲ್ಲಾ ಸುದ್ದಿಮಾಧ್ಯಮಗಳಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬೆಳಿಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರಬೇಕಾದರೆ ಹೃದಯಾಘಾತದಿಂದ ಕುಸಿದುಬಿದ್ದು ಅಸುನೀಗಿದ್ದಾರೆ ಎಂಬುದಾಗಿ ಸುದ್ದಿಯನ್ನು ಹೇಳಲಾಗಿತ್ತು. ಆದರೆ ನಿಜವಾದ ವಿಷಯ ಬೇರೆಯದೆ ಇದೆ. ಇದರ ಕುರಿತಂತೆ ಸದಾ ಅವರ ಜೊತೆಗಿರುವ ಅಂಗರಕ್ಷ ಚಲಪತಿ ಅವರು ವಿವರವಾಗಿ ಹೇಳಿದ್ದಾರೆ.

ಅವರು ಹೇಳುವ ಪ್ರಕಾರ ಸುದ್ದಿಮಾಧ್ಯಮಗಳಲ್ಲಿ ಹೇಳುತ್ತಿರುವಂತೆ ಜಿಮ್ ನಲ್ಲಿ ವರ್ಕೌಟ್ ಮಾಡಲು ಹೋಗಿ ಹೃದಯಘಾತ ಸಂಭವಿಸಿರಲಿಲ್ಲ ಎಂಬುದಾಗಿ ಹೇಳಿದ್ದಾರೆ. ಹೌದು ಬದಲಾಗಿ ಮೊನ್ನೆ ರಾತ್ರಿ ಗುರುಕಿರಣ್ ಅವರ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಬೆಳಗ್ಗೆ ಸುಸ್ತಾಗುತ್ತಿದೆ ಎಂಬ ಕಾರಣದಿಂದ ತಡವಾಗಿ ಎದ್ದಿದ್ದರೆ ಹೊರತು ಜಿಮ್ ಗೆ ಹೋಗಿರಲಿಲ್ಲ‌. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಅವರ ಪತ್ನಿ ಅಶ್ವಿನಿ ಅವರು ಡ್ರೈವರ್ ಜೊತೆಗೆ ಇಬ್ಬರೇ ಆಸ್ಪತ್ರೆಗೆ ಹೋಗಿದ್ದರು.

ಕೆಲವೊಮ್ಮೆ ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ದಂಪತಿಗಳು ಇಬ್ಬರೇ ಹೋಗುತ್ತಿದ್ದರು ಇದಕ್ಕಾಗಿ ಚಲಪತಿ ಅವರ ಹಿಂದೆ ಹೋಗಿರಲಿಲ್ಲ. ಇದಾದ ನಂತರ ರಮಣಶ್ರೀ ಆಸ್ಪತ್ರೆಯಲ್ಲಿ ಪುನೀತ್ ರಾಜಕುಮಾರ್ ರವರಿಗೆ ಇಸಿಜಿ ಮಾಡುತ್ತಿರಬೇಕಾದರೆ ಅಲ್ಲಿಯೇ ಕುಸಿದು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಸಿಗದಿದ್ದ ಕಾರಣ ಕಾರಿನಲ್ಲಿ ಹೋಗಿದ್ದಾರೆ. ಆಗ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಅವರು ಚಲಪತಿ ಅವರಿಗೆ ಕರೆ ಮಾಡಿ ಸರ್ ನ್ನು ವಿಕ್ರಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಬಂದುಬಿಡು ಎಂಬುದಾಗಿ ಹೇಳಿದ್ದಾರೆ.

ಯಾವತ್ತೂ ಪುನೀತ್ ರಾಜಕುಮಾರ್ ಅವರ ಕುರಿತಂತೆ ಹೇಳಬೇಕಾದರೆ ಅಣ್ಣ ಎಂದು ಹೇಳುತ್ತಿದ್ದ ಶ್ರೀನಿ ಅವರು ಸರ್ ಎಂದಾಗ ನಾನು ರಾಘಣ್ಣ ಎಂದು ಭಾವಿಸಿದ್ದೆ ಎನ್ನುವುದಾಗಿ ಚಲಪತಿ ಅವರು ಹೇಳಿದ್ದಾರೆ. ಚಲಪತಿ ಅವರು ಇವರಿಬ್ಬರಿಗಿಂತ ಮುನ್ನವೇ ವಿಕ್ರಮ್ ಆಸ್ಪತ್ರೆಗೆ ಕಾರಿನಲ್ಲಿ ವೇಗವಾಗಿ ಹೋಗಿದ್ದರು. ಅಲ್ಲಿಗೆ ಬಂದು ನೋಡಿದಾಗಲೇ ಗೊತ್ತಾಗಿದ್ದು ಹುಷಾರ್ ಇಲ್ಲದೆ ಇರುವುದು ಪುನೀತ್ ರಾಜಕುಮಾರ್ ಅವರಿಗೆ ಎಂದು.

ಇನ್ನೂ ಅದೇ ಕೂಡಲೇ ಪುನೀತ್ ರಾಜಕುಮಾರ್ ಅವರನ್ನು ಒಳಗೆ ವೈದ್ಯರ ಬಳಿ ಕರೆದೊಯ್ಯ ಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಈಗಾಗಲೇ ಇವರು ಹೋಗಿ ಹತ್ತರಿಂದ ಹದಿನೈದು ನಿಮಿಷಗಳಾಗಿವೆ ಎಂಬುದಾಗಿ ಹೇಳುತ್ತಾರೆ. ಯಜಮಾನನಿಲ್ಲದ ದುಃಖ ಅಂಗರಕ್ಷಕ ಚಲಪತಿ ಅವರಿಗೆ ಬೆಂಬಿಡದೆ ಕಾಡುತ್ತಿದೆ. ವಿಧಿಯ ಆಟದಿಂದ ಆಗಿ ತನ್ನ ಒಡೆಯನನ್ನು ಕಳೆದುಕೊಂಡ ದುಃಖ ಅವರಲ್ಲಿದೆ. ತಾನು ಬದುಕಿದಷ್ಟು ದಿನ ಪರರಿಗೆ ನೆರಳಾಗಿ ಆಲದ ಮರದಂತೆ ಬದುಕಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇಂದು ಭಗವಂತನ ಸಾನಿಧ್ಯಕ್ಕೆ ಸೇರಿದ್ದಾರೆ.

Post Author: Ravi Yadav