ಅಪ್ಪು ವಿಷಯ ತಿಳಿದ ಬೆನ್ನಲ್ಲೇ ಕಿಚ್ಚ ಸುದೀಪ್ ಹಾಗೂ ದರ್ಶನ್ ರವರಿಗೆ ನವರಸ ನಾಯಕ ಜಗ್ಗೇಶ್ ಹೇಳಿದ್ದೇನು ಗೊತ್ತೇ?? ಇದಪ್ಪ ಮಾತು ಅಂದ್ರೆ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ತಮ್ಮ ತಂದೆ ಹಾಗೂ ತಾಯಿಯ ಬಳಿ ಶಾಶ್ವತವಾಗಿ ನೆಲೆಸಲು ಹೋಗಿದ್ದಾರೆ. ಹೌದು ಗೆಳೆಯರೇ ನಿನ್ನೆ ಬೆಳಗ್ಗೆ ಭಜರಂಗಿ ಚಿತ್ರತಂಡಕ್ಕೆ ಶುಭಹಾರೈಸಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರಬೇಕಾದರೆ ತೀವ್ರವಾದ ಹೃದಯಾಘಾತದಿಂದ ಆಸ್ಪತ್ರೆಗೆ ಹೋದ ಕೆಲವೇ ಕ್ಷಣಗಳಲ್ಲಿ ಕೊನೆಯುಸಿರನ್ನು ಎಳೆದಿದ್ದಾರೆ.

ಇನ್ನು ಪುನೀತ್ ರವರ ಅಗಲಿಕೆಗೆ ಗಣ್ಯಾತಿಗಣ್ಯರು ಶ್ರದ್ಧಾಂಜಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುತ್ತಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನೋಡಲು ಕಂಠೀರವ ಸ್ಟೇಡಿಯಂ ಗೆ ಜನರ ದಂಡೇ ಹರಿದು ಬರುತ್ತಿದೆ. ಇನ್ನು ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಆಪ್ತರಾಗಿರುವ ನಟ ನವರಸ ನಾಯಕ ಜಗ್ಗೇಶ್ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿಯನ್ನು ಕೋರಿದ್ದಾರೆ. ಇನ್ನು ಈ ಸಮಯದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ರವರಿಗೆ ಪರೋಕ್ಷವಾಗಿ ಒಂದು ಕಿವಿಮಾತನ್ನು ಕೂಡ ಹೇಳಿದ್ದಾರೆ.

ಇನ್ನು ನವರಸ ನಾಯಕ ಜಗ್ಗೇಶ್ ಅವರು ಈ ಕುರಿತಂತೆ ಟ್ವಿಟರ್ನಲ್ಲಿ ಕನ್ನಡದ ಎಲ್ಲಾ ನನ್ನ ಸಹೋದರ ಕಲಾವಿದ ಬಂಧುಗಳು ಹಾಗು ಅವರ ಅಭಿಮಾನಿಗಳಲ್ಲಿ ವಿನಂತಿ ನಿಮ್ಮಪಾದಗಳಿಗೆ ನಮಸ್ಕರಿಸಿ ಬೇಡುವೆ pls ದಯಮಾಡಿ ದ್ವೇಷಮಾಡದೆ ಪರಸ್ಪರ ಅಣ್ಣತಮ್ಮರಂತೆ ಬಾಳಿ ಬದುಕು ನಶ್ವರ! ಉಸಿರು ನಿಲ್ಲಿಸಿದ ಮೇಲೆ ನಾವ್ಯಾರೋ ನೀವ್ಯಾರೋ? ದೇವರು ಕರೆದರೆ ನಾವೆಲ್ಲಾ ದೇವರ ಮಕ್ಕಳು, ಬದುಕಿದ್ದಾಗ ಒಡಹುಟ್ಟಿದವರಂತೆ ಬಾಳುವ! ಪ್ರೀತಿ ಶಾಶ್ವತ! ದ್ವೇಷ ಕ್ಷಣಿಕ! ಎಂಬುದಾಗಿ ಭಾವನಾತ್ಮಕವಾಗಿ ಬರೆದು ಕೊಂಡಿದ್ದಾರೆ. ಇದು ಪರೋಕ್ಷವಾಗಿ ಕಿಚ್ಚ ಹಾಗೂ ದಚ್ಚು ವಿಗೆ ಹೇಳಿರುವುದು ಎಂಬುದನ್ನು ಎಲ್ಲರೂ ಕೂಡ ಈಗ ಅರಿತುಕೊಂಡಿದ್ದಾರೆ. ಹಾಗೂ ಇದೆ ಸಮಯದಲ್ಲಿ ಇವರಿಬ್ಬರು ಒಂದಾಗಬೇಕು ಎಲ್ಲ ಅಭಿಮಾನಿಗಳು ಕೇಳಿ ಕೊಳ್ಳುತ್ತಿದ್ದಾರೆ.

Post Author: Ravi Yadav