ಪುನೀತ್ ರಾಜ್ ಕುಮಾರ್ ರವರ ಕೊನೆಯ ಆಸೆಯನ್ನು ಈಡೇರಿಸಲು ಸಾಧ್ಯವಾಗಲೇ ಇಲ್ಲ, ಎಷ್ಟೆಲ್ಲ ಕಷ್ಟ ಪಟ್ಟಿದ್ದು ವ್ಯರ್ಥ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಇಂದು ಹೃದಯಾಘಾತದಿಂದಾಗಿ ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಬಾರದ ಪಯಣವನ್ನು ಬೆಳೆಸಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇಂದು ನಮ್ಮನ್ನು ಅಗಲಿ ಇಂದೂ ಸ್ವರ್ಗಸ್ಥರಾಗಿ ದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹಾಗೂ ದ್ವಿತ್ವ ಚಿತ್ರದ ಚಿತ್ರೀಕರಣ ಮುಗಿಯುವುದು ಬಾಕಿ ಇತ್ತು.

ಇನ್ನು ಇಷ್ಟು ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾಗಿರುವ ಪಿ ಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ನಟಿಸುವ ಮಹದಾಸೆಯಿತ್ತು. ಇನ್ನು ಇದಕ್ಕಾಗಿ ಅವರು ಹಲವಾರು ತಯಾರಿಗಳನ್ನು ಕೂಡ ಮಾಡಿಕೊಂಡಿದ್ದರು. ಇನ್ನು ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ಹಲವಾರು ಹೊಸ ಪ್ರತಿಭೆಗಳಿಗೆ ಸಿನಿಮಾಗಳನ್ನು ಮಾಡಿ ಅವರನ್ನು ಕನ್ನಡ ಚಿತ್ರರಂಗದ ಮುನ್ನೆಲೆಗೆ ಬರುವಂತೆ ಮಾಡಿದರು. ಆದರೆ ಇದುವರೆಗೂ ಕೂಡ ತಮ್ಮನ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದುವರೆಗೂ ಕೂಡ ನಟಿಸಿರಲಿಲ್ಲ.

ಇನ್ನು ಇದೆ ಪಿಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ನಿರ್ದೇಶಕ ಜೇಕಬ್ ನಿರ್ದೇಶನದಲ್ಲಿ ನಟಿಸುವ ಆಸಕ್ತಿಯನ್ನು ಕೂಡ ಹೊಂದಿದ್ದರು. ಹಿಂದೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಪೃಥ್ವಿ ಎಂಬ ಸೂಪರ್ ಹಿಟ್ ಚಿತ್ರ ಮೂಡಿಬಂದಿತ್ತು. ಇನ್ನು ಇವರಿಬ್ಬರು ಮತ್ತೊಮ್ಮೆ ಒಂದಾಗುವ ಎಲ್ಲಾ ಸಾಧ್ಯತೆಗಳು ಕೂಡ ದೊಡ್ಡವಾಗಿದ್ದವು. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಸೆ ಆಸೆಯಾಗಿಯೇ ಉಳಿದುಬಿಟ್ಟಿದೆ. ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಸಕರಾತ್ಮಕ ಬದಲಾವಣೆಯನ್ನು ತರಲು ಪುನೀತ್ ರಾಜಕುಮಾರ್ ಅವರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ ಈ ಕಾರ್ಯವನ್ನು ಪೂರ್ಣ ಮಾಡಲು ಆ ವಿಧಿ ಅವರಿಗೆ ಅವಕಾಶ ನೀಡಲಿಲ್ಲ.

Post Author: Ravi Yadav