ಪುನೀತ್ ರವರು ದಿಡೀರ್ ಇಹಲೋಕ ತ್ಯಜಿಸಿದ್ದಕ್ಕಾಗಿ ಸಂತಾಪ ಸೂಚಿಸಿದ ಮೋದಿ, ಪುನೀತ್ ರವರ ವ್ಯಕ್ತಿತ್ವವನ್ನು ನೆನಪಿಸಿದ ಮೋದಿ.

ಪುನೀತ್ ರವರು ದಿಡೀರ್ ಇಹಲೋಕ ತ್ಯಜಿಸಿದ್ದಕ್ಕಾಗಿ ಸಂತಾಪ ಸೂಚಿಸಿದ ಮೋದಿ, ಪುನೀತ್ ರವರ ವ್ಯಕ್ತಿತ್ವವನ್ನು ನೆನಪಿಸಿದ ಮೋದಿ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗ ಇಂದು ಎಂದು ಭರಿಸಲಾರದ ದುಃಖವನ್ನು ಅನುಭವಿಸುವ ಸ್ಥಿತಿಯಲ್ಲಿದೆ. ಕನ್ನಡ ಚಿತ್ರರಂಗದ ರಾಜಕುಮಾರ ಎಂದೇ ಖ್ಯಾತರಾಗಿದ್ದ ಅಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕೋಟ್ಯಾಂತರ ಅಭಿಮಾನಿಗಳನ್ನು ಇಂದು ತಬ್ಬಲಿ ಯನ್ನಾಗಿ ಮಾಡಿ ಬಾರದ ಲೋಕಕ್ಕೆ ಪ್ರಯಾಣವನ್ನು ಬೆಳೆಸಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇಂದು ದೈಹಿಕ ಕಸರತ್ತು ಮಾಡುತ್ತಿರಬೇಕಾದರೆ ಹೃದಯಾಘಾತವನ್ನು ಅನುಭವಿಸಿದ್ದರು.

ಇದೇ ಕೂಡಲೇ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. 11.30 ನಡೆದಂತಹ ಈ ಘಟನೆಯಲ್ಲಿ ಆಸ್ಪತ್ರೆಯ ವೈದ್ಯರು ಮೂರು ಗಂಟೆಗಳ ಕಾಲ ಎಡಬಿಡದೆ ಶತಾಯಗತಾಯ ಎಂಬಂತೆ ಪ್ರಯತ್ನವನ್ನು ಪಟ್ಟಿದ್ದರು. ಆದರೆ ಆ ಕ್ರೂರ ವಿಧಿಗೆ ಪುನೀತ್ ರಾಜಕುಮಾರ್ ರವರನ್ನು ಬದುಕಲು ಬಿಡುವ ಆಸಕ್ತಿ ಇರಲಿಲ್ಲ. ಅದೆಷ್ಟೋ ಜೀವಗಳಿಗೆ ಆಸರೆಯಾಗಿ ಇದ್ದಂತಹ ಅಪ್ಪು ನಮ್ಮನ್ನೆಲ್ಲಾ ಅಗಲಿ ಸ್ವರ್ಗದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ದೇಶದ ಹಲವಾರು ಗಣ್ಯಾತಿಗಣ್ಯರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪುನೀತ್ ರಾಜಕುಮಾರ್ ರವರಿಗೆ ವಿದಾಯವನ್ನು ಘೋಷಿಸಿದ್ದಾರೆ.

ಇನ್ನು ಈ ಕುರಿತಂತೆ ನಮ್ಮ ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಶ್ರದ್ಧಾಂಜಲಿಯನ್ನು ಕೋರಿದ್ದಾರೆ. ಹೌದು ಗೆಳೆಯರೇ ಪುನೀತ್ ರಾಜಕುಮಾರ್ ರವರದ್ದು ಕೊನೆಯುಸಿರೆಳೆಯುವ ವಯಸ್ಸಾಗಿರಲಿಲ್ಲ, ಸಮೃದ್ಧ ಮತ್ತು ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ, ವಿಧಿ ತುಂಬಾ ಕೃರಿ ಎಂಬುದಾಗಿ ಹೇಳಿದ್ದಾರೆ. ಮುಂಬರುವ ಪೀಳಿಗೆಗಳು ಅವರ ಕೆಲಸಗಳಿಗೆ ಮತ್ತು ಅದ್ಭುತ ವ್ಯಕ್ತಿತ್ವಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದಾಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರೊಂದಿಗೆ ಭಾವಚಿತ್ರವನ್ನು ತೆಗೆಸಿಕೊಂಡಿದ್ದರು. ಅದನ್ನು ಪೋಸ್ಟ್ ಮಾಡಿ ಪುನೀತ್ ರಾಜಕುಮಾರ್ ಅವರೊಂದಿಗಿನ ತಮ್ಮ ನೆನಪುಗಳನ್ನು ಮತ್ತೊಮ್ಮೆ ಪುನರಾವರ್ತಿಸಿ ಕೊಂಡಿದ್ದಾರೆ.