ಹೃದಯಾಘಾತವಾದಾಗ ಡಾಕ್ಟರ್ ಹೇಳಿದಂತೆ ಈ ಸಮಯ ತುಂಬಾ ಮುಖ್ಯ, ಅದಕ್ಕಾಗಿ ಗೋಲ್ಡನ್ ಟೈಮ್ ಎನ್ನುತ್ತಾರೆ?? ಆಗ ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಸಂಖ್ಯೆ ಗಮನೀಯವಾಗಿ ಹೆಚ್ಚಳವಾಗಿದೆ. ಅದರಲ್ಲೂ ಕೂಡ ಹೃದಯಕ್ಕೆ ಸಂಬಂಧಿಸಿದ ಹಲವಾರು ತೊಂದರೆಗಳನ್ನು ಎದುರಿಸುತ್ತಿರುವ ರೋಗಿಗಳ ಸಂಖ್ಯೆ ಇನ್ನಷ್ಟು ಕೂಡ ಜಾಸ್ತಿಯಾಗಿದೆ. ಇನ್ನು ಈ ತೊಂದರೆಗೆ ನಮ್ಮ ದೈನಂದಿನ ಆಹಾರಪದ್ಧತಿಯ ಕೂಡ ಸರಿಯಾಗಿ ಇರುವುದು ಬಹುಮುಖ್ಯ ಅಂಶವಾಗಿದೆ. ಆದರೆ ಇದರಲ್ಲಿ ನಮ್ಮ ಭಾರತೀಯರು ಹಲವಾರು ಬಾರಿ ಎಡವುತ್ತಾರೆ.

ಇನ್ನೂ ಹೃದಯಾಘಾತ ಸಂಭವಿಸಿದಾಗ ವೈದ್ಯರು ಗೋಲ್ಡನ್ ಅವರ್ ಕುರಿತಂತೆ ಸಾಕಷ್ಟು ಮಾಹಿತಿಯನ್ನು ನೀಡುತ್ತಾರೆ ಹಾಗಿದ್ದರೆ ಈ ಗೋಲ್ಡನ್ ಅವರ ಎಂದರೇನು ಎಂಬುದರ ಕುರಿತಂತೆ ನಾವು ನಿಮಗೆ ಹೇಳುತ್ತೇವೆ. ಹೌದು ಗೆಳೆಯರೇ ಹೃದಯಾಘಾತ ಸಂಬಂಧಿಸಿದ ಮೊದಲ ಗಂಟೆಗೆ ಗೋಲ್ಡನ್ ಅವರ್ ಎಂಬುದಾಗಿ ಕರೆಯುತ್ತಾರೆ. ಯಾಕೆಂದರೆ ಹೃದಯಾಘಾತದಿಂದ ಅಸುನೀಗುವ 50% ರೋಗಿಗಳು ಮೊದಲ ಗಂಟೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಮೊದಲಿಗೆ ನಾಡಿಯಲ್ಲಿ ಅಡಚಣೆ ಪ್ರಾರಂಭವಾಗುತ್ತದೆ. ಇದರಿಂದಾಗಿ ಹೃದಯದ ನಾಡಿ ಭಾಗದಲ್ಲಿ ಅಂತ್ಯವಾಗಲು ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಕೂಡಲೇ ಚಿಕಿತ್ಸೆ ನೀಡಿದರೆ ನಾಡಿ ಮಿಡಿತವನ್ನು ತೆರೆದರೆ ರೋಗಿ ಉಳಿಯುವ ಎಲ್ಲ ಸಾಧ್ಯತೆಗಳು ಕೂಡ ಇರುತ್ತವೆ.ಈ ಕೆಲಸವನ್ನು ಇಂಜೆಕ್ಷನ್ ಮೂಲಕ ಅಥವಾ ಆಂಜಿಯೋಪ್ಲ್ಯಾಸ್ಟಿ ಮೂಲಕ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಹೃದ್ರೋಗಿಯನ್ನು ಉಸಿರನ್ನು ಕಾಪಾಡಬಹುದು. ಹೀಗಾಗಿ ರೋಗಿಯನ್ನು ಹೃದಯಾಘಾತ ಸಂಬಂಧಿತ ಕಾಯಿಲೆಗಳನ್ನು ಹೊಂದಿದ ಕೂಡಲೇ ಮೊದಲ ಒಂದು ಗಂಟೆಯಲ್ಲಿ ಅತಿ ಶೀಘ್ರವಾಗಿ ಚಿಕಿತ್ಸೆಯನ್ನು ನೀಡಲು ಅನುಕೂಲವಾಗುವಂತೆ ಮಾಡಿದರೆ ಮಾತ್ರ ಆರೋಗ್ಯ ಉಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಗೋಲ್ಡನ್ ಅವರ್ ನಲ್ಲಿ ರೋಗಿ ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಾರೆ ಅದರ ಮೇರೆಗೆ ಅವರು ಉಳಿಯುತ್ತಾರೋ ಇಲ್ಲವೋ ಎಂಬುದನ್ನು ನಿರ್ಧರಿಸಬಹುದಾಗಿದೆ.

Post Author: Ravi Yadav