ನ್ಯೂಜಿಲೆಂಡ್ ಪಂದ್ಯಕ್ಕೂ ಮುನ್ನ ಭರ್ಜರಿ ಸಿಹಿ ಸುದ್ದಿ, ಆರನೇ ಬೌಲರ್ ಸಮಸ್ಯೆಗೆ ಪರಿಹಾರ ಸಿಕ್ಕಿತು ಎಂದು ಘೋಷಣೆ ಮಾಡಿದ ಭಾರತ, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡದಲ್ಲಿ ಈ ಮೊದಲು ಏಳು ಬ್ಯಾಟ್ಸಮನ್ ಗಳು ಹಾಗೂ ನಾಲ್ವರು ಬೌಲರ್ ಗಳೊಂದಿಗೆ ಕಣಕ್ಕಿಳಿಯುತ್ತಿದ್ದರು. ತಂಡದಲ್ಲಿದ್ದ ಅರೆಕಾಲಿಕ ಬೌಲರ್ ಗಳಾಗಿದ್ದ ವಿರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಐದನೇ ಬೌಲರ್ ಪಾತ್ರವನ್ನು ನಿರ್ವಹಿಸುತ್ತಿದ್ದರು. ಬರುಬರುತ್ತಾ ಬದಲಾದ ಭಾರತ ತಂಡ ಆರು ತಜ್ಞ ಬ್ಯಾಟ್ಸಮನ್ ಹಾಗೂ ಐವರು ಬೌಲರ್ ಗಳೊಂದಿಗೆ ಕಣಕ್ಕಿಳಿಯಲು ಶುರು ಮಾಡಿತು. ಹಾರ್ದಿಕ್ ಪಾಂಡ್ಯ ತಂಡ ಸೇರಿದ ನಂತರವಂತೂ, ಬೌಲರ್ ಕೊರತೆ ನೀಗಿತು. ಇದು ಭಾರತ ತಂಡದ ಹಲವಾರು ವರ್ಷಗಳ ನಂತರ ಅಂತರಾಷ್ಟ್ರೀಯ ಕ್ರಿಕೇಟ್ ನಲ್ಲಿ ಪಾರುಪತ್ಯ ಮೆರೆಯುವಂತಾಯಿತು.

ಸದ್ಯ ಭಾರತ ತಂಡದಲ್ಲಿ ಈಗ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿಲ್ಲ. ಕಳೆದೊಂದು ವರ್ಷದಿಂದ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಕೇವಲ ಬ್ಯಾಟ್ಸಮನ್ ಆಗಿ ಮಾತ್ರ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಇನ್ನು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ರತಿನಿಧಿಸುವ ಹಾರ್ದಿಕ್ ಪಾಂಡ್ಯ ಅಲ್ಲಿಯೂ ಸಹ ಇತ್ತೀಚಿನ ದಿನಗಳಲ್ಲಿ ಬೌಲಿಂಗ್ ಮಾಡುತ್ತಿಲ್ಲ.ಇದು ಸಹ ತಂಡದ ಮೇಲೆ ಪರಿಣಾಮ ಬೀರಿತ್ತು.

ಇತ್ತೀಚಿನ ದಿನಗಳಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆಯಲ್ಲಿ ಹಾರ್ದಿಕ್ ಪಾಂಡ್ಯ ಸದ್ಯ ಬೌಲಿಂಗ್ ಮಾಡುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದರು. ಇನ್ನು ಕಳೆದ ಭಾನುವಾರ ನಡೆದ ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಭಾರತಕ್ಕೆ ಆರನೇ ಬೌಲರ್ ಕೊರತೆ ದುಬಾರಿಯಾಗಿ ಪರಿಣಮಿಸಿತು. ಒಂದು ಕೆಟ್ಟ ದಿನದಲ್ಲಿ ಬೌಲರ್ ಕಳಪೆ ಪ್ರದರ್ಶನ ನೀಡಿದಾಗ, ಆತನ ಉಳಿದ ಓವರ್ ಗಳನ್ನ ಆರನೇ ಬೌಲರ್ ಮುಗಿಸಬೇಕಾಗುತ್ತದೆ. ಹಾಗಾಗಿ ದುಬೈ ನಂತಹ ಪಿಚ್ ಗಳಲ್ಲಿ , ಮಂಜು ವ್ಯಾಪಿಸಿದಾಗ ಆರನೇ ಬೌಲರ್ ಇರದೇ ಇದ್ದದ್ದು ಸೋಲಿಗೆ ಪ್ರಮುಖ ಕಾರಣವಾಯಿತು.

ಈಗ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೆ ಭಾರತ ತಂಡಕ್ಕೆ ಶುಭ ಸುದ್ದಿ ಸಿಕ್ಕಿದ್ದು, ಹಾರ್ದಿಕ್ ಪಾಂಡ್ಯ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ನೆಟ್ಸ್ ನಲ್ಲಿ ಬೌಲಿಂಗ್ ಅಭ್ಯಾಸ ಸಹ ಮಾಡುತ್ತಿದ್ದಾರಂತೆ. ಈ ಮೂಲಕ ಭಾರತಕ್ಕೆ ತಲೆನೋವಾಗಿದ್ದ ಆರನೇ ಬೌಲಿಂಗ್ ಆಯ್ಕೆ ಸಮಸ್ಯೆ ಬಗೆಹರಿದಿದೆ ಎಂದು ಹೇಳಬಹುದು. ಪ್ರತಿ ಸಮಯದಲ್ಲಿಯೂ ಫೀನಿಕ್ಸ್ ನಂತೆ ಮೇಲೆದ್ದು ಬರುವ ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯದಲ್ಲಿ ಸಂಪೂರ್ಣ ಫಿಟ್ ಆಗಿ ಆಗಮಿಸಲಿದ್ದು, ಬ್ಯಾಟಿಂಗ್,ಬೌಲಿಂಗ್,ಫೀಲ್ಡಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಮ್ಯಾಚ್ ವಿನ್ನರ್ ಆಗುವ ನೀರಿಕ್ಷೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav